ಹನಿ ಟ್ರ್ಯಾಪ್ ಪ್ರಕರಣವನ್ನು ಸಿಐಡಿ ತನಿಖೆ ಮಾಡ್ತಿರೋದ್ರಿಂದ ಹೇಳಿಕೆ ನೀಡುವುದು ಸರಿಯಲ್ಲ: ಕೆಎನ್ ರಾಜಣ್ಣ
ಹನಿ ಟ್ರ್ಯಾಪ್ ಅರೋಪ ಮಾಡಿದ್ದು ತಾನಾದರೂ ಅದರ ಬಗ್ಗೆ ಹೆಚ್ಚು ಉತ್ಸಾಹ ತೋರುವ ಅಗತ್ಯವಿಲ್ಲ, ಸದನದಲ್ಲಿ ಸುನೀಲ್ ಕುಮಾರ್ ಮಾತಾಡುವಾಗ ಸುಮ್ಮನಿದ್ದೆ, ಮರುದಿನ ಬಸನಗೌಡ ಯತ್ನಾಳ್ ನನ್ನ ಹೆಸರನ್ನು ಉಲ್ಲೇಖಿಸದರು, ತಮಕೂರಿನ ಪ್ರಭಾವಿ ಸಚಿವರು ಎಂದರೆ ನಾನು ಮತ್ತು ಪರಮೇಶ್ವರ್, ಹಾಗಾಗಿ ಸದನದಲ್ಲಿ ಹೇಳಿಕೆ ನೀಡಿ ವಿಷಯವನ್ನು ಸ್ಪಷ್ಟಪಡಿಸುವುದು ಅನಿವಾರ್ಯವಾಗಿತ್ತು ಎಂದು ರಾಜಣ್ಣ ಹೇಳಿದರು.
ಬೆಂಗಳೂರು, ಏಪ್ರಿಲ್ 12: ನಗರದಲ್ಲಿಂದು ಗೃಹ ಸಚಿವರನ್ನು (home minister) ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎನ್ ರಾಜಣ್ಣ, ಬಹಳ ದಿನಗಳಿಂದ ಪರಮೇಶ್ವರ್ ಅವರನ್ನು ಭೇಟಿಯಾಗಿರಲಿಲ್ಲ ಹಾಗಾಗಿ ಭೇಟಿಯಾದೆ ಎಂದರು. ಹನಿ ಟ್ರ್ಯಾಪ್ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿದೆ, ಸಂಸ್ಥೆಯೊಂದು ತನಿಖೆ ಅಥವಾ ವಿಚಾರಣೆ ನಡೆಸುವಾಗ ಹೇಳಿಕೆ ನೀಡುವುದು ಸರಿಯಿರುವುದಿಲ್ಲ, ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಇನ್ನೂ ಹೋಗಿಲ್ಲ, ಇಷ್ಟರಲ್ಲೇ ಹೋಗುತ್ತೇನೆ ಎಂದು ರಾಜಣ್ಣ ಹೇಳಿದರು.
ಇದನ್ನೂ ಓದಿ: ರಾಜೇಂದ್ರ ರಾಜಣ್ಣ ಹನಿಟ್ರ್ಯಾಪ್, ಕೊಲೆ ಯತ್ನದ ಸಂಚುಕೋರ ಒಬ್ಬನೇ! ಬೆಂಗಳೂರಿನ ಪ್ರಬಲ ವ್ಯಕ್ತಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos