ಸಚಿವ ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಸಚಿವ ಕೆಎನ್ ರಾಜಣ್ಣ ಅವರ ಪುತ್ರ, ಪರಿಷತ್ ಸದಸ್ಯ ರಾಜೇಂದ್ರ ಕೊಲೆ ಸಂಚಿಗೆ ಸಂಬಂಧಿಸಿದ ಸ್ಫೋಟಕ ಆಡಿಯೋ ಈಗ ಬಹಿರಂಗವಾಗಿದೆ. ಆಡಿಯೋದಲ್ಲಿ ಅನೇಕ ಆಘಾತಕಾರಿ ಸಂಗತಿಗಳು ಬಯಲಾಗಿವೆ. ರಾಜೇಂದ್ರ ಕೊಲೆಗೆ ಹೇಗೆ ಸಂಚು ನಡೆದಿತ್ತು? ಎಷ್ಟು ಹಣ ನೀಡಲಾಗಿತ್ತು? ಇನ್ನೆಷ್ಟು ನೀಡುವ ಭರವಸೆ ನೀಡಲಾಗಿತ್ತು ಎಂಬ ಎಲ್ಲ ಮಾಹಿತಿ ಆಡಿಯೋದಲ್ಲಿವೆ.
ಬೆಂಗಳೂರು, ಮಾರ್ಚ್ 31: ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಪುತ್ರ, ಎಂಎಲ್ಸಿ ರಾಜೇಂದ್ರ ಕೊಲೆ ಯತ್ನ ಸಂಚಿನ ಸಂಬಂಧ ಈಗಾಗಲೇ ದೂರು ದಾಖಲಾಗಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಈ ಮಧ್ಯೆ, ಕೊಲೆ ಸಂಚಿಗೆ ಸಂಬಂಧಿಸಿದ ಆಡಿಯೋವನ್ನೂ ಸಹ ಪೊಲೀಸರಿಗೆ ನೀಡಿದ್ದಾಗಿ ರಾಜೇಂದ್ರ ಹೇಳಿದ್ದರು. ಇದೀಗ ಆ ಆಡಿಯೋ ಬಹಿರಂಗವಾಗಿದ್ದು, ಅನೇಕ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಸೋಮ ಎಂಬಾತನ ಆಪ್ತೆ ಪುಷ್ಪಾ ಎಂಬಾಕೆ ರಾಜೇಂದ್ರ ಆಪ್ತ ರಾಕಿ ಜತೆ ನಡೆಸಿದ ಸಂಭಾಷಣೆ ‘ಟಿವಿ9’ಗೆ ಲಭ್ಯವಾಗಿದೆ. ‘‘ಜೀವ ಹೋದ್ರೂ ಬಾಯ್ಬಿಡಲ್ಲ, ಬಾಸ್ಗಾಗಿ ಜೀವನ ಪೂರ್ತಿ ಜೈಲಲ್ಲಿರ್ತಾನೆ’’ ಇತ್ಯಾದಿಯಾಗಿ ಮಹಿಳೆ ಆಡಿರುವ ಮಾತುಗಳು ಆಡಿಯೋದಲ್ಲಿವೆ. ಇನ್ನೂ ಏನೇನು ಮಾತನಾಡಿದ್ದಾರೆ ಆ ಮಹಿಳೆ? ಇಲ್ಲಿದೆ ವಿವರ.
Latest Videos

ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು

ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?

Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ

ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
