Kannada News Photo gallery Shivamogga elderly couple Celebrates 60 year anniversary With Again married In age of 108
108ರ ಪೈಲ್ವಾನ್ ಕರಿಯಪ್ಪ, 98 ವರ್ಷದ ಗೋಪಮ್ಮ: 60ನೇ ವಾರ್ಷಿಕೋತ್ಸದ ನಿಮಿತ್ತ ಮತ್ತೊಮ್ಮೆ ಮದ್ವೆ!
ನೆನಪಿನ ಬುತ್ತಿಯೇ ಸುಂದರ... ಅಲ್ಲಿ ಸಿಹಿ ಕಹಿಗಳಿರುತ್ತವೆ. ಆದರೆ, ಸಿಹಿ ನೆನಪುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ಹಿತವೇ ಬೇರೆ. ಅದರಲ್ಲೂ ಕಳೆದು ಹೋದ ದಿನಗಳ ಸಂತೋಷದ ಕ್ಷಣವನ್ನು ಮರುಸೃಷ್ಟಿಸುವುದು ಇನ್ನಷ್ಟು ಸಿಹಿ. ಈಗ ಹಳೆ ಕ್ಷಣಗಳನ್ನು ಮರು ಸೃಷ್ಟಿಸುವುದು ಟ್ರೆಂಡ್ ಆಗಿದೆ. ಅದರಂತೆ ಶಿವಮೊಗ್ಗದಲ್ಲಿ ವೃದ್ಧ ದಂಪತಿ ಮತ್ತೊಮ್ಮೆ ಮದುವೆಯಾಗುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ. ಜನರ ಬದುಕಿನಲ್ಲಿ ಸದಾ ಸವಿಯಾಗಿ ಇರುವ ದಿನಗಳಲ್ಲಿ ಮದುವೆಯ ಕ್ಷಣವೂ ಒಂದು. ವರ್ಷಗಳುರುಳಿದಂತೆ ಮನೆಯವರು, ಸ್ನೇಹಿತರೊಂದಿಗೆ ಕಳೆದಿದ್ದ ಆ ಸುಂದರ ಕ್ಷಣದ ಫೋಟೋ, ವಿಡಿಯೋಗಳನ್ನು ಕಂಡಾಗ ಮನಸ್ಸು ಪುಳಕಗೊಳ್ಳುತ್ತದೆ. ಹೀಗಾಗಿ, ಮಕ್ಕಳು, ಮೊಕ್ಕಳು, ಸಂಬಂಧಿಕರು ಸೇರಿ 108 ವರ್ಷದ ಪೈಲ್ವಾನ್ ದಂಪತಿಗೆ ಮತ್ತೊಮ್ಮೆ ಮದುವೆ ಮಾಡಿಸಿ 60ನೇ ವರ್ಷದ ವಿವಾಹೋತ್ಸವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಈ ಮೂಲಕ ಈ ಹಿಂದಿನ ದಿನದ ನೆನಪನ್ನು ಮರುಸೃಷ್ಟಿಸಿ ಖುಷಿಪಟ್ಟಿದ್ದಾರೆ.
108 ವರ್ಷದ ಪೈಲ್ವಾನ್ ಕರಿಯಪ್ಪ ಮತ್ತು 98 ವರ್ಷದ ಪತ್ನಿ ಗೋಪಮ್ಮ ಷಷ್ಠಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಶಿವಮೊಗ್ಗದ ಶಿಕಾರಪುರ ತಾಲೂಕಿನ ಕೆಂಚಿಗೊಂಡನಕಪ್ಪ ಗ್ರಾಮದಲ್ಲಿ ಸಂಬಂಧಿಕರು ಸೇರಿಕೊಂಡು 108 ವರ್ಷದ ಪೈನಾನ್ ದಂಪತಿಗಳಿಗೆ ಮತ್ತೊಮ್ಮೆ ಮದುವೆ ಮಾಡುವ ಮೂಲಕ ಅವರ 60ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲಾಯ್ತು. 60ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವುದು ವಿಶೇಷ. ವಯಸ್ಸು 100 ಆದ್ರೂ ಇನ್ನೂ ವೃದ್ದ ದಂಪತಿಗಳು ಫಿಟ್ ಆಗಿದ್ದಾರೆ. ಈ ವಿವಾಹ ವಾರ್ಷಿಕೋತ್ಸವವರು ಮಲೆನಾಡಿಗರ ಗಮನ ಸೆಳೆದಿದೆ.
1 / 9
60 ಷಷ್ಠಿ ಸಮಾರಂಭ ಹಿನ್ನಲೆಯಲ್ಲಿ ಮತ್ತೆ ಶಾಸ್ತ್ರೋಕ್ತವಾಗಿ ಮದುವೆಯಾದ ಪೈಲ್ವಾನ್ ದಂಪತಿಗಳು. ಇಳಿ ವಯಸ್ಸಿನಲ್ಲೂ ದಂಪತಿಗಳು ಗಟ್ಟಿಮುಟ್ಟಾಗಿದ್ದಾರೆ. ಇಂದಿನ ಯುವಪೀಳಿಗೆ ಇವರ ಆರೋಗ್ಯ ನೋಡಿ ನಾಚುವಂತಾಗಿತ್ತು. ಮಕ್ಕಳು, ಮೊಮ್ಮಕ್ಕಳು, ಗಿರಿಮೊಮ್ಮಕ್ಕಳು ಹಾಗೂ ಗ್ರಾಮಸ್ಥರು ಷಷ್ಠಿ ಸಮಾರಂಭದಲ್ಲಿ ಭಾಗಿಯಾಗಿದ್ದರು.
2 / 9
ವೃದ್ಧ ದಂಪತಿಗಳ ಮದುವೆ, ತಾಳಿ ಕಟ್ಟುವ ಶಾಸ್ತ್ರ ನೋಡಿ ಕುಟುಂಬಸ್ಥರು ಕಣ್ಣುತುಂಬಿಕೊಂಡರು. ಮತ್ತೆ 60 ವರ್ಷಗಳ ಹಿಂದಿನ ನೆನಪು ಅಲ್ಲಿ ತಾಜಾ ಆಗಿತ್ತು. ಹಳೆ ಕಾಲದ ಮದುವೆಯ ಚರ್ಚೆಗಳು ಅಲ್ಲಿ ಶುರುವಾಗಿದ್ದವು. ಪೈಲ್ವಾನ್ ಕರಿಯಪ್ಪ ಮತ್ತು ಗೋಪಮ್ಮ ದಂಪತಿಗಳಿಗೆ ಎಲ್ಲಿಲ್ಲದ ಖುಷಿ ಮತ್ತು ಸಂತೋಷ. ಕುಟುಂಬಸ್ಥರ ನಡುವೆ ಷಷ್ಠಿ ಪೂರ್ತಿ ಸಮಾರಂಭ ಎಲ್ಲರ ಗಮನ ಸೆಳೆದಿದೆ.
3 / 9
ಷಷ್ಠಿ ಸಮಾರಂಭದಲ್ಲಿ ಸಂಭ್ರಮ ಸಡಗರಕ್ಕೆ ಪರಿಯೇ ಇರಲಿಲ್ಲ. ಎಲ್ಲವೂ ಅಚ್ಚುಕಟ್ಠಾಗಿ ಶಾಸ್ತ್ರೋಕ್ತವಾಗಿ ನಡೆಯಿತು. ಕರಿಯಪ್ಪಗೆ 108 ಮತ್ತು ಪತ್ನಿ ಗೋಪಮ್ಮಗೆ 98 98 ವರ್ಷ ವಯಸ್ಸು ಆಗಿದ್ದು, ಗೋಪಮ್ಮ ಇನ್ನೂ ಎರಡು ವರ್ಷ ಕಳೆದ್ರೆ 100 ಶತಕ ಭಾರಿಸುತ್ತಾರೆ. 108 ವರ್ಷ ಆದ್ರೂ ಪೈಲ್ವಾನ್ ಕರಿಯಪ್ಪ ಮಾತ್ರ ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ದಂಪತಿಗಳು ಮಕ್ಕಳು, ಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಅಂತಾ 40 ಕುಟುಂಬದ ಸದಸ್ಯರಿದ್ದಾರೆ.
4 / 9
Shivamogga Elderly Couple (5)
5 / 9
Shivamogga Elderly Couple (4)
6 / 9
ಮಕ್ಕಳು, ಮೊಕ್ಕಳು, ಸಂಬಂಧಿಕರು ಸೇರಿ 108 ವರ್ಷದ ಪೈಲ್ವಾನ್ ದಂಪತಿಗೆ ಮತ್ತೊಮ್ಮೆ ಮದುವೆ ಮಾಡಿಸಿ 60ನೇ ವರ್ಷದ ವಿವಾಹೋತ್ಸವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಈ ಮೂಲಕ ಈ ಹಿಂದಿನ ದಿನದ ನೆನಪನ್ನು ಮರುಸೃಷ್ಟಿಸಿ ಖುಷಿಪಟ್ಟಿದ್ದಾರೆ.
7 / 9
ನೆನಪಿನ ಬುತ್ತಿಯೇ ಸುಂದರ... ಅಲ್ಲಿ ಸಿಹಿ ಕಹಿಗಳಿರುತ್ತವೆ. ಆದರೆ, ಸಿಹಿ ನೆನಪುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ಹಿತವೇ ಬೇರೆ. ಅದರಲ್ಲೂ ಕಳೆದು ಹೋದ ದಿನಗಳ ಸಂತೋಷದ ಕ್ಷಣವನ್ನು ಮರುಸೃಷ್ಟಿಸುವುದು ಇನ್ನಷ್ಟು ಸಿಹಿ. ಈಗ ಹಳೆ ಕ್ಷಣಗಳನ್ನು ಮರು ಸೃಷ್ಟಿಸುವುದು ಟ್ರೆಂಡ್ ಆಗಿದೆ.
8 / 9
ಮದುವೆಯಲ್ಲಿ ಯಾವೆಲ್ಲಾ ಶಾಸ್ತ್ರಗಳು ಇರುತ್ತವೆಯೋ ಆ ಎಲ್ಲಾ ಶಾಸ್ತ್ರಗಳನ್ನು ಚಾಚುತಪ್ಪದೇ ಮಾಡಲಾಗಿದೆ. ತಾಳಿ ಕಟ್ಟುವುದು, ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಮಾಡಿಸುವುದು, ಬಳೆ ತೊಡಿಸುವುದು ಹೀಗೆ ಹಲವು ಶಾಸ್ತ್ರಗಳೊಂದಿಗೆ ವೃದ್ಧ ದಂಪತಿಗೆ ಮತ್ತೊಮ್ಮೆ ಮದುವೆ ಮಾಡಿ ಸಂತಸಗೊಂಡರು.