ಯಾವುದೇ ಸಮುದಾಯದ ಪ್ರತಿಷ್ಠೆ ಪ್ರಶ್ನೆ ಇದಲ್ಲ, ಅಸಲಿಗೆ ಇದು ಜಾತಿ ಗಣತಿ ಅಲ್ಲವೇ ಅಲ್ಲ: ಪ್ರಿಯಾಂಕ್ ಖರ್ಗೆ
ಹಿಂದುಳಿದ ವರ್ಗಗಳಲ್ಲಿರುವ ಇರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಅರಿಯಲು ಮಾಡಿರುವ ಸಮೀಕ್ಷೆ ಇದು, ಜಾತಿ ಗಣತಿ ಆಥವಾ ಜನಗಣತಿ ಅಂತ ತಪ್ಪು ಕಲ್ಪನೆ ಬೇಡ, ವರದಿಯನ್ನು ಓದದೆ ಯಾರೂ ನಿರ್ಣಯಗಳಿಗೆ ಬರೋದು ಬೇಡ, ವರದಿಯಲ್ಲಿ ಮಾಡಿದ ಎಲ್ಲ ಶಿಫಾರಸ್ಸುಗಳನ್ನು ಒಪ್ಪಲೇಬೇಕು ಅಂತೇನಿಲ್ಲ, ಎಲ್ಲವನ್ನೂ ತಿರಸ್ಕರಿಸಬಹುದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ, ಏಪ್ರಿಲ್ 16: ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರನ್ನು ಎದುರು ಹಾಕಿಕೊಂಡು ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸಲಾಗಲ್ಲ, ಎರಡೂ ಸಮುದಾಯಗಳು ಜೊತೆಗೂಡಿ ಹೋರಾಟ ಮಾಡ್ತೀವಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪನವರು ಹೇಳಿರುವುದಕ್ಕೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಇದು ಯಾವುದೇ ಸಮುದಾಯದ ಪ್ರತಿಷ್ಠೆ ಪ್ರಶ್ನೆ ಅಲ್ಲ, ಅಸಲಿಗೆ ಇದು ಜಾತಿ ಗಣತಿಯೇ ಅಲ್ಲ, ಒಂದು ನೀತಿ ರೂಪಿಸಬೇಕಾದರೆ ದತ್ತಾಂಶ ಬೇಕಾಗುತ್ತದೆ, ಅದನ್ನು ಸಂಗ್ರಹಿಸುವ ಕೆಲಸವಾಗಿದೆ, ಸಾರ್ವಜನಿಕರಲ್ಲಿ ಗೊಂದಲ ಬೇಡ, ಯಾರನ್ನೂ ಎದುರಾಕಿಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವರದಿಯನ್ನು ನಮ್ಮೆಲ್ಲ ಶಾಸಕರೊಂದಿಗೆ ಚರ್ಚಿಸುತ್ತೇವೆ, ಯಾರಿಗೂ ನೋವಾಗಬಾರದು: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ