ಜಾತಿ ಗಣತಿ ವರದಿಯನ್ನು ನಮ್ಮೆಲ್ಲ ಶಾಸಕರೊಂದಿಗೆ ಚರ್ಚಿಸುತ್ತೇವೆ, ಯಾರಿಗೂ ನೋವಾಗಬಾರದು: ಶಿವಕುಮಾರ್
ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಒಂದು ವರ್ಷ ಮೇಲಾಗಿದೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಅದನ್ನು ಇದುವರೆಗೆ ಯಾರೂ ಓದಿದಂತಿಲ್ಲ. ವರದಿಯನ್ನು ಸಾರ್ವಜನಿಕ ಮಾಡೋದನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಆದರೆ, ಈ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇದುವರೆಗೆ ಯಾವುದೇ ಸ್ಪಷ್ಟವಾದ ನಿರ್ಣಯ ತೆಗೆದುಕೊಂಡಿಲ್ಲ. ವರದಿಯ ಗಾತ್ರ ಬೃಹತ್ತಾಗಿದೆ, ಶಾಸಕರೆಲ್ಲ ಅದನ್ನು ಓದಿರುತ್ತಾರಾ?
ಬೆಂಗಳೂರು, ಏಪ್ರಿಲ್ 14: ಜಾತಿ ಗಣತಿ ವರದಿ (Caste Census Report) ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಣಮಿಸುತ್ತಿರುವಂತೆ ಕಾಣುತ್ತಿದೆ. ಇವತ್ತು ನಗರದಲ್ಲಿ ಮಾಧ್ಯಮಗಳೊಂದಿಗೆ ಆವಸರದಲ್ಲಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ತಾನಿನ್ನೂ ವರದಿಯನ್ನು ಓದೇ ಇಲ್ಲ ಎಂದು ಹೇಳಿದರು. ಅಧ್ಯಯನ ಮಾಡುತ್ತಿದ್ದೇನೆ, ನಾಳೆ ನಮ್ಮೆಲ್ಲ ಶಾಸಕರ ಸಭೆ ಕರೆದು ಚರ್ಚೆ ಮಾಡುತ್ತೇವೆ, ವರದಿಯಿಂದ ಯಾರಿಗೂ ಸಮಸ್ಯೆಯಾಗದಂತೆ ಯಾರ ಮನಸ್ಸಿಗೂ ನೋವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಸರ್ಕಾರದ್ದು ಎಂದು ಶಿವಕುಮಾರ್ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳಿಗೆ ಕೊನೆಗೂ ಡಾಂಬರ್ ಭಾಗ್ಯ: ಡಾಂಬರೀಕರಣ ಕಾಮಗಾರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗುದ್ದಲಿ ಪೂಜೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos