AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್ ಹೊಡೆದುರುಳಿಸಬಲ್ಲ ಭಾರತದ ಲೇಸರ್ ವೆಪನ್ ಸಿಸ್ಟಂ ಹೇಗೆ ಕೆಲಸ ಮಾಡುತ್ತೆ ನೋಡಿ

ಡ್ರೋನ್ ಹೊಡೆದುರುಳಿಸಬಲ್ಲ ಭಾರತದ ಲೇಸರ್ ವೆಪನ್ ಸಿಸ್ಟಂ ಹೇಗೆ ಕೆಲಸ ಮಾಡುತ್ತೆ ನೋಡಿ

ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 14, 2025 | 4:04 PM

India's laser weapon system: ಭಾರತದ ಡಿಆರ್​​ಡಿಒ ಸಂಸ್ಥೆ ಲೇಸರ್ ಆಧಾರಿತ ವೆಪನ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ. ಇದು ಕ್ಷಣ ಮಾತ್ರದಲ್ಲಿ ಡ್ರೋನ್, ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಬಲ್ಲುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈ ಲೇಸರ್ ವೆಪನ್​​ಗಳನ್ನು ಹೊಂದಿವೆ. ಈ ಪ್ರತಿಷ್ಠಿತರ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಡಿಆರ್​​ಡಿಒ ಸಂಸ್ಥೆ ಆಂಧ್ರಪ್ರದೇಶದ ಕರ್ನೂಲ್​​ನಲ್ಲಿ ಈ ವೆಪನ್ ಸಿಸ್ಟಂನ ಪ್ರಯೋಗ ಮಾಡಿದೆ.

ಹೈದರಾಬಾದ್, ಏಪ್ರಿಲ್ 14: ಭಾರತದ ಡಿಆರ್​​ಡಿಒ ಸಂಸ್ಥೆ ಲೇಸರ್ ಆಧಾರಿತ ವೆಪನ್ ಸಿಸ್ಟಂ (Drone based Weapon System) ಅನ್ನು ಅಭಿವೃದ್ಧಿಪಡಿಸಿದೆ. ಇದು ಕ್ಷಣ ಮಾತ್ರದಲ್ಲಿ ಡ್ರೋನ್, ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಬಲ್ಲುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈ ಲೇಸರ್ ವೆಪನ್​​ಗಳನ್ನು ಹೊಂದಿವೆ. ಈ ಪ್ರತಿಷ್ಠಿತರ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಡಿಆರ್​​ಡಿಒ ಸಂಸ್ಥೆ ಆಂಧ್ರಪ್ರದೇಶದ ಕರ್ನೂಲ್​​ನಲ್ಲಿ ಈ ವೆಪನ್ ಸಿಸ್ಟಂನ ಪ್ರಯೋಗ ಮಾಡಿದೆ. ಈ ಮೊದಲ ಪ್ರಯೋಗ ಭರ್ಜರಿ ಯಶಸ್ವಿಯಾಗಿದೆ. ಅದರ ವಿಡಿಯೋ ತುಣಕನ್ನು ಎಎನ್​​ಐ ಸುದ್ದಿ ಸಂಸ್ಥೆ ತನ್ನ ಎಕ್ಸ್ ಪೋಸ್ಟ್​​ನಲ್ಲಿ ಹಂಚಿಕೊಂಡಿದೆ. ನಿರ್ದಿಷ್ಟ ಡ್ರೋನ್​​ಗೆ ಗುರಿ ಇಟ್ಟು ಲೇಸರ್ ಕಿರಣ ಹಾಯಿಸಿ ಅದನ್ನು ಧ್ವಂಸ ಮಾಡುತ್ತಿರುವ ದೃಶ್ಯವನ್ನು ಇದರಲ್ಲಿ ಕಾಣಬಹುದು. ಡಿಆರ್​​ಡಿಒ ಮುಖ್ಯಸ್ಥರು ಈ ಲೇಸರ್ ವೆಪನ್ ಅನ್ನು ಸ್ಟಾರ್ ವಾರ್ಸ್ ತಂತ್ರಜ್ಞಾನದ ಒಂದು ಭಾಗ ಎಂದು ಬಣ್ಣಿಸಿದ್ದಾರೆ. ಈ ರೀತಿಯ ಬೇರೆ ಬೇರೆ ಹೈ ಎನರ್ಜಿ ಅಸ್ತ್ರಗಳನ್ನು ಮುಂದಿನ ದಿನಗಳಲ್ಲಿ ತಯಾರಿಸಲಾಗುವುದು ಎಂದಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: Apr 14, 2025 04:03 PM