Sign In

By signing in or creating an account, you agree with Associated Broadcasting Company's Terms & Conditions and Privacy Policy.

Laser weapon: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ

India join elite group of US, Russia, China that have star war capacity: ಭಾರತದ ಡಿಆರ್​​ಡಿಒ ಸಂಸ್ಥೆ ಲೇಸರ್ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ಕ್ಷಣ ಮಾತ್ರದಲ್ಲಿ ಡ್ರೋನ್, ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಬಲ್ಲುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈ ಲೇಸರ್ ವೆಪನ್​​ಗಳನ್ನು ಹೊಂದಿವೆ. ಈ ಪ್ರತಿಷ್ಠಿತರ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.

Laser weapon: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ
ಲೇಸರ್ ವೆಪನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 14, 2025 | 11:43 AM

ನವದೆಹಲಿ, ಏಪ್ರಿಲ್ 14: ಹಾಲಿವುಡ್​​ನ ಸ್ಟಾರ್ ವಾರ್ ಸರಣಿಯ ಸಿನಿಮಾಗಳನ್ನು (Star War movies) ನೀವು ನೋಡಿರಬಹುದು. ಅದರಲ್ಲಿ ಲೇಸರ್ ಬಳಸಿ ಪ್ರಹಾರ ಮಾಡುವ ದೃಶ್ಯಗಳು ಸರ್ವೇಸಾಮಾನ್ಯ. ಭವಿಷ್ಯದಲ್ಲಿ ಮನುಷ್ಯನ ಯುದ್ಧಾಸ್ತ್ರಗಳು ಹೇಗಿರುತ್ತವೆ ಎಂಬ ಕಲ್ಪನೆಗಳನ್ನು ಸ್ಟಾರ್ ವಾರ್ ಸಿನಿಮಾಗಳಲ್ಲಿ ಕಾಣುತ್ತೇವೆ. ಈಗ ಮನುಷ್ಯರು ಆ ಕಲ್ಪನೆಯನ್ನು ನಿಜಗೊಳಿಸುತ್ತಿದ್ದಾರೆ. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳ ಸೇನೆಗಳ ಬಳಿ ಲೇಸರ್ ವೆಪನ್​​ಗಳಿವೆ. ಇವು ಮೇಲೆ ಹಾರಾಡುವ ಡ್ರೋನ್​​ಗಳನ್ನು ಕ್ಷಣ ಮಾತ್ರದಲ್ಲಿ ನಿಷ್ಕ್ರಿಯಗೊಳಿಸಬಲ್ಲುವು. ಈ ಲೇಸರ್ ಶಕ್ತ ಮಿಲಿಟರಿಗಳ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿದೆ. ನಿನ್ನೆ ಭಾನುವಾರ ಭಾರತವು ಲೇಸರ್ ಶಕ್ತ ವೆಪನ್ ಸಿಸ್​ಟಂ (Laser based weapon system) ಅನ್ನು ಯಶಸ್ವಿಯಾಗಿ ಪ್ರಯೋಗ ಮಾಡಿದೆ. ಇದು ವೇಗವಾಗಿ ದಾಳಿ ಮಾಡಬಲ್ಲ ಸ್ವಾರ್ಮ್ ಡ್ರೋನ್​ಗಳನ್ನು ನಿಷ್ಕ್ರಿಯಗೊಳಿಸಬಲ್ಲುದು ಎಂದು ಹೇಳಲಾಗುತ್ತಿದೆ.

ಹೈದರಾಬಾದ್​​ನಲ್ಲಿರುವ ಡಿಆರ್​ಡಿಒನ ಹೈ ಎನರ್ಜಿ ಸಿಸ್ಟಮ್ಸ್ ಅಂಡ್ ಸೈನ್ಸಸ್ (ಚೆಸ್) ಈ ಲೇಸರ್ ಆಧಾರಿತ ಶಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಯದಲ್ಲಿ ಭಾರತದ ಹಲವು ಶಿಕ್ಷಣ ಸಂಸ್ಥೆಗಳು ಹಾಗು ಉದ್ದಿಮೆಗಳು ನೆರವಾಗಿವೆ. ಇದು Mk-II(A) ಲೇಸರ್- ಡೈರೆಕ್ಟೆಡ್ ಎನರ್ಜಿ ವೆಪನ್ (DEW) ಸಿಸ್ಟಂ. ಆಂಧ್ರದ ಕರ್ನೂಲ್​​ನಲ್ಲಿರುವ ನ್ಯಾಷನಲ್ ಓಪನ್ ಏರ್ ರೇಂಜ್​​ನಲ್ಲಿ ಭಾನುವಾರ ಸಂಜೆ ಮೊದಲ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿದೆ.

ಇದನ್ನೂ ಓದಿ
Image
ದೊಡ್ಡ ಅಮೆರಿಕನ್ ಕಂಪನಿಗಳು ದಿವಾಳಿ?
Image
ಭಾರತದಲ್ಲಿ ಸ್ವಂತವಾಗಿ 25 ಚಿಪ್​ಸೆಟ್​ಗಳ ಅಭಿವೃದ್ಧಿ
Image
ಶೇ. 15ರ ವೇಗದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಮಾರುಕಟ್ಟೆ
Image
ಭಾರತೀಯರು ತಂತ್ರಜ್ಞಾನ ಕೀಳರಿಮೆ ಬಿಡಬೇಕು: ವಾಧವಾ

ಇದನ್ನೂ ಓದಿ: ಭಾರತದಲ್ಲಿ ಸ್ವಂತವಾಗಿ 25 ಚಿಪ್​​ಸೆಟ್​​ಗಳ ತಯಾರಿಕೆ; ಸರ್ವಿಸ್​​ನಿಂದ ಪ್ರಾಡಕ್ಟ್ ದೇಶವಾಗಿ ಬದಲಾಗುತ್ತಿರುವ ಭಾರತ

ಈ ಲೇಸರ್ ವೆಪನ್ ಸಿಸ್ಟಂ ಕೇವಲ ಡ್ರೋನ್ ಅಲ್ಲ, ಕ್ಷಿಪಣಿ, ಫಿಕ್ಸೆಡ್ ವಿಂಗ್ ಏರ್​​ಕ್ರಾಫ್ಟ್ ಇತ್ಯಾದಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಡಿಆರ್​ಡಿಒ ಛೇರ್ಮನ್ ಸಮೀರ್ ವಿ ಕಾಮತ್ ಪ್ರಕಾರ, ಈ ರೀತಿಯ ಲೇಸರ್ ವೆಪನ್ ಸಿಸ್ಟಂ ಹೊಂದಿರುವುದು ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರವಂತೆ. ಇಸ್ರೇಲ್ ಕೂಡ ಇಂಥದ್ದನ್ನು ಅಭಿವೃದ್ಧಿಪಡಿಸುತ್ತಿದೆ. ಇಡೀ ವಿಶ್ವದಲ್ಲಿ ಭಾರತವೂ ಸೇರಿದಂತೆ ಈ ವೆಪನ್ ಸಿಸ್ಟಂ ಹೊಂದಿರುವುದು ನಾಲ್ಕೈದು ದೇಶಗಳು ಮಾತ್ರವೇ.

ಸ್ಟಾರ್ ವಾರ್ಸ್ ತಂತ್ರಜ್ಞಾನದಲ್ಲಿ ಇದು ಆರಂಭ ಮಾತ್ರ

ಲೇಸರ್ ಆಧಾರಿತ ಅಸ್ತ್ರ ವ್ಯವಸ್ಥೆಯು ಹೊಸ ಹೈ ಎನರ್ಜಿ ಸಿಸ್ಟಂಗಳಲ್ಲಿ ಮೊದಲ ಹಂತ ಮಾತ್ರವೇ. ಡಿಆರ್​​ಡಿಒ ಇನ್ನೂ ಬೇರೆ ಬೇರೆ ವಿಧದ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಹೈ ಎನರ್ಜಿ ಮೈಕ್ರೋವೇವ್, ಎಲೆಕ್ಟ್ರೋ ಮ್ಯಾಗ್ನೆಟಿಕ್ ಪಲ್ಸ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಡಿಆರ್​​ಡಿಒ ತಯಾರಿಸುತ್ತಿದೆ. ಡಿಆರ್​​ಡಿಒ ಛೇರ್ಮನ್ ಪ್ರಕಾರ, ಹಲವು ತಂತ್ರಜ್ಞಾನಗಳನ್ನು ಭಾರತದಲ್ಲಿ ಸಂಶೋಧಿಸಲಾಗುತ್ತಿದ್ದು, ಇವುಗಳಿಂದ ಭಾರತಕ್ಕೆ ಸ್ಟಾರ್ ವಾರ್ಸ್ ಸಾಮರ್ಥ್ಯ ಸಿಗುತ್ತದಂತೆ.

ಇದನ್ನೂ ಓದಿ: ಬೆಲ್ಜಿಯಂನಲ್ಲಿ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ

ಲೇಸರ್ ಅಸ್ತ್ರಗಳು ಡ್ರೋನ್ ಅನ್ನು ಹೇಗೆ ನಿಷ್ಕ್ರಿಯಗೊಳಿಸುತ್ತವೆ?

ಡಿಆರ್​​ಡಿಒ ಅಭಿವೃದ್ಧಿಪಡಿಸಿದ ಲೇಸರ್ ಡಿವ್ ಸಿಸ್ಟಂನಲ್ಲಿ ರಾಡಾರ್ ಅಥವಾ ಅಂತರ್ಗವಾದ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಂ ಇತುತ್ತದೆ. ಇದು ಡ್ರೋನ್ ಮೇಲೆ ಪ್ರಬಲವಾದ ಲೇಸರ್ ಕಿರಣಗಳನ್ನು ಹಾಯಿಸುತ್ತದೆ. ಡ್ರೋನ್​ಗಳ ಸೆನ್ಸಾರ್ ಮತ್ತು ಆಂಟೆನಾಗಳನ್ನು ಈ ಲೇಸರ್ ಬೀಮ್ ನಿಷ್ಕ್ರಿಯಗೊಳಿಸುತ್ತದೆ. ಈ ಮೂಲಕ ಡ್ರೋನ್ ತನ್ನ ಗುರಿ ಕಳೆದುಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 14 April 25

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ