Bitcoin: 2008ರ ಬಿಕ್ಕಟ್ಟಿನಲ್ಲಿ ಹುಟ್ಟಿ, 2025ರ ಬಿಕ್ಕಟ್ಟಿನಲ್ಲಿ ಮುಳುಗಲಿರುವ ಬಿಟ್ಕಾಯಿನ್: ಪೀಟರ್ ಶಿಫ್ ಭವಿಷ್ಯ
2025 financial crisis limited to US, says Peter Schiff: ಜಗತ್ತಿನ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎನಿಸಿರುವ ಬಿಟ್ಕಾಯಿನ್ ಈ ವರ್ಷ ಅಂತ್ಯವಾಗಬಹುದು ಎಂದು ಅಮೆರಿಕನ್ ಆರ್ಥಿಕ ತಜ್ಞ ಪೀಟರ್ ಶಿಫ್ ಹೇಳಿದ್ದಾರೆ. 2008ರ ಹಣಕಾಸು ಬಿಕ್ಕಟ್ಟಿನಲ್ಲಿ ಬಿಟ್ಕಾಯಿನ್ ಹುಟ್ಟಿತು. 2025ರ ಬಿಕ್ಕಟ್ಟಿನಲ್ಲಿ ಅದು ಸಾಯುತ್ತಿದೆ ಎಂದು ಅವರು ಲೇವಡಿ ಮಾಡಿದ್ದಾರೆ. 2025ರ ಹಣಕಾಸು ಬಿಕ್ಕಟ್ಟು ಕೇವಲ ಅಮೆರಿಕಕ್ಕೆ ಸೀಮಿತವಾಗಿದೆ. ವಿಶ್ವದ ಇತರ ಭಾಗಕ್ಕೆ ಈ ಬಿಕ್ಕಟ್ಟಿಲ್ಲ ಎಂದಿದ್ದಾರೆ ಶಿಫ್.

ನವದೆಹಲಿ, ಏಪ್ರಿಲ್ 13: ಖ್ಯಾತ ಅಮೆರಿಕನ್ ಆರ್ಥಿಕ ತಜ್ಞ ಪೀಟರ್ ಶಿಫ್ (Peter Schiff) ಅವರು ಬಿಟ್ಕಾಯಿನ್ಗೆ ಮರಣ ಭವಿಷ್ಯ ಬರೆದಿದ್ದಾರೆ. ಬಿಟ್ಕಾಯಿನ್ ಆಯಸ್ಸು ಈ ವರ್ಷವೇ ಮುಗಿಯುತ್ತೆ ಎಂದಿದ್ದಾರೆ ಅವರು. ಚಿನ್ನ, ಬೆಳ್ಳಿ, ಕರೆನ್ಸಿಗಳನ್ನು ರಿಸರ್ವ್ ಆಸ್ತಿಯಾಗಿ ಇಟ್ಟುಕೊಳ್ಳುವಂತೆ ಬಿಟ್ಕಾಯಿನ್ ರಿಸರ್ವ್ ಕೂಡ ಸೃಷ್ಟಿಸುತ್ತೇನೆಂದು ಹೊರಟಿರುವ ಅಮೆರಿಕನ್ ಸರ್ಕಾರಕ್ಕೆ ಪೀಟರ್ ಶಿಫ್ ಕನ್ನಡಿ ತೋರಿಸಿದಂತಿದೆ. 2025ರ ಹಣಕಾಸು ಬಿಕ್ಕಟ್ಟಿಗೆ (Financial crisis) ಸಿಕ್ಕು ಬಿಟ್ಕಾಯಿನ್ ಸತ್ತು ಹೋಗಬಹುದು ಎಂದು ಹೇಳಿದ್ದಾರೆ.
‘2008ರ ಹಣಕಾಸು ಬಿಕ್ಕಟ್ಟಿನ ಪರಿಣಾಮವಾಗಿ ಬಿಟ್ಕಾಯಿನ್ ಹುಟ್ಟಿತು. ವಿಪರ್ಯಾಸ ಎಂದರೆ 2025ರ ಹಣಕಾಸು ಬಿಕ್ಕಟ್ಟಿನಿಂದ ಬಿಟ್ಕಾಯಿನ್ ಕಥೆ ಮುಗಿದು ಹೋಗುತ್ತದೆ’ ಎಂದು ಮೊನ್ನೆ ಪೀಟರ್ ಶಿಫ್ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಹೇಳಿದ್ದಾರೆ.
Bitcoin was born out of the financial crisis of 2008. Ironically, the financial crisis of 2025 will kill it.
— Peter Schiff (@PeterSchiff) April 10, 2025
ಇದನ್ನೂ ಓದಿ: 2025ರಲ್ಲಿ ಅಮೆರಿಕದಲ್ಲಿ ದಿವಾಳಿ ಬೀಳುತ್ತಿವೆ ದೊಡ್ಡ ದೊಡ್ಡ ಕಂಪನಿಗಳು: ಎಸ್ ಅಂಡ್ ಪಿ ವರದಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಟ್ಕಾಯಿನ್ ಹಾಗೂ ಇತರ ಕ್ರಿಪ್ಟೋ ಕರೆನ್ಸಿಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಬಿಟ್ಕಾಯಿನ್ ಅನ್ನು ದೇಶದ ದೊಡ್ಡ ರಿಸರ್ವ್ ಆಸ್ತಿಯಾಗಿ ಬೆಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಅವರು ಅಧ್ಯಕ್ಷರಾದಾಗ ಒಂದು ಬಿಟ್ಕಾಯಿನ್ ಬೆಲೆ ಒಂದು ಲಕ್ಷ ಡಾಲರ್ ದಾಟಿ ಹೋಗಿತ್ತು. ಈಗ ಅದು 85,000 ಡಾಲರ್ಗೆ ಇಳಿದಿದೆ. ಈಗ ಬಿಕ್ಕಟ್ಟಿನಲ್ಲಿ ಬಿಟ್ಕಾಯಿನ್ಗೆ ಚಿನ್ನ, ಬೆಳ್ಳಿ ರೀತಿಯಲ್ಲಿ ಡಿಮ್ಯಾಂಡ್ ಸೃಷ್ಟಿಯಾಗುವ ನಿರೀಕ್ಷೆ ಇತ್ತು. ಆದರೆ, ಜನರು ಕ್ರಿಪ್ಟೋದಿಂದ ದೂರ ಉಳಿಯುತ್ತಿರುವಂತೆ ತೋರುತ್ತಿದೆ.
ಅಮೆರಿಕದ ಬಿಟ್ಕಾಯಿನ್ ರಿಸರ್ವ್ ಮಾರ್ಚ್ 6ರಂದು ಚಾಲನೆಗೊಂಡಿತ್ತು. ಆಗಿನಿಂದ ಅದರ ಮೌಲ್ಯ ಶೇ. 12ರಷ್ಟು ಕುಸಿದಿದೆ. ಚಿನ್ನಕ್ಕೆ ಪರ್ಯಾಯ ಸಂಪತ್ತು ಆಗುವ ಉಮೇದಿನಲ್ಲಿತ್ತು ಬಿಟ್ಕಾಯಿನ್. ಆದರೆ, ಬಿಟ್ಕಾಯಿನ್ ಬೀಳುತ್ತಿರುವಾಗ ಚಿನ್ನ ಮೇಲೇರಿತ್ತು. ಪೀಟರ್ ಶಿಫ್ ಈ ಅಂಶವನ್ನು ಎತ್ತಿ ತೋರಿಸಿ, ಬಿಟ್ಕಾಯಿನ್ ಅನ್ನು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…
2025ರ ಬಿಕ್ಕಟ್ಟು ಅಮೆರಿಕಕ್ಕೆ ಮಾತ್ರ ಸೀಮಿತವಾ?
ಪೀಟರ್ ಶಿಫ್ ಮತ್ತೊಂದು ಕುತೂಹಲಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2025ರ ಹಣಕಾಸು ಬಿಕ್ಕಟ್ಟು ಜಾಗತಿಕವಾಗಿ ನಿರ್ಮಾಣ ಆಗಿಲ್ಲ. ಅದು ಅಮೆರಿಕಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಬಿಕ್ಕಟ್ಟಿನಿಂದ ವಿಶ್ವದ ಇತರ ಭಾಗವು ಹೊರತಾಗಿರುತ್ತದೆ ಎಂದಿದ್ದಾರೆ ಅಮೆರಿಕನ್ ಆರ್ಥಿಕ ತಜ್ಞ. ಈ ಬಿಕ್ಕಟ್ಟಿನಿಂದ ಅಮೆರಿಕ ಪಾರಾಗುವ ಏಕೈಕ ಮಾರ್ಗ ಎಂದರೆ ಟ್ರಂಪ್ ಅವರು ರಾಜೀನಾಮೆ ಕೊಡುವುದು ಎಂದೂ ಶಿಫ್ ಒತ್ತಾಯಿಸಿದ್ದಾರೆ.
The 2025 Financial Crisis will not be global. It will be mainly limited to the United States. The rest of the world has finally been liberated.
— Peter Schiff (@PeterSchiff) April 10, 2025
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Sun, 13 April 25