5 ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಸೆಮಿಕಂಡಕ್ಟರ್ ಉದ್ಯಮ; ಭಾರತಕ್ಕಿರುವ ಅನುಕೂಲಕರ ಅಂಶಗಳಿವು…
UBS report on India's semiconductor industry's end demand revenues: ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ 54 ಬಿಲಿಯನ್ ಡಾಲರ್ನಿಂದ ಐದು ವರ್ಷದಲ್ಲಿ 108 ಬಿಲಿಯನ್ ಡಾಲರ್ಗೆ ಬೆಳೆಯಲಿದೆ ಎಂದು ಯುಬಿಎಸ್ನ ವರದಿಯೊಂದು ಹೇಳಿದೆ. ಜಾಗತಿಕ ಸೆಮಿಕಂಡಕ್ಟರ್ ಬಳಕೆಗೆ ಹೋಲಿಸಿದರೆ ಭಾರತದಲ್ಲಿ ಅದರ ಬೆಳವಣಿಗೆ ವೇಗವಾಗಿ ಆಗುತ್ತಿದೆ. ಅಡ್ವಾನ್ಸ್ಡ್ ಸೆಮಿಕಂಡಕ್ಟರ್ಗಳನ್ನು ಬಳಸುವ ಉದ್ದಿಮೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಬೆಳವಣಿಗೆಗೆ ಅನುಕೂಲಕರವಾದ ಅಂಶಗಳಲ್ಲಿ ಒಂದು.

ನವದೆಹಲಿ, ಏಪ್ರಿಲ್ 13: ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆಯ ಆದಾಯ (Semiconductor Industry’s end demand revenue) ಇನ್ನೈದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಲಿದೆಯಂತೆ. ಹಣಕಾಸು ಸೇವೆಗಳ ಸಂಸ್ಥೆಯಾದ ಯುಬಿಎಸ್ (UBS report) ಮೊನ್ನೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ವಿಚಾರವನ್ನು ಹೈಲೈಟ್ ಮಾಡಲಾಗಿದೆ. ಆ ವರದಿ ಪ್ರಕಾರ, 2025ರಲ್ಲಿ 54 ಬಿಲಿಯನ್ ಇರುವ ಸೆಮಿಕಂಡಕ್ಟರ್ ಮಾರುಕಟ್ಟೆ ಮೌಲ್ಯವು 2030ರಲ್ಲಿ 108 ಬಿಲಿಯನ್ ಡಾಲರ್ಗೆ ಏರಿಕೆ ಆಗಬಹುದು. ಇದರಲ್ಲಿ ಸ್ಥಳೀಯ ತಯಾರಿಕೆ ಪಾಲು 13 ಬಿಲಿಯನ್ ಡಾಲರ್ಷ್ಟಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಶೇ. 15ರ ಸಿಎಜಿಆರ್ನಲ್ಲಿ ಬೆಳೆಯಲಿದೆ. ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆಯ ಬೆಳವಣಿಗೆಗಿಂತ ಭಾರತದಲ್ಲಿ ಹೆಚ್ಚು ವೇಗದ ಬೆಳವಣಿಗೆ ಆಗಲಿದೆ. ಅತ್ಯಾಧುನಿಕ ಸೆಮಿಕಂಡಕ್ಟರ್ಗಳನ್ನು ಬಳಸುವ ಉದ್ದಿಮೆಗಳ ಸಂಖ್ಯೆ ಹೆಚ್ಚುತ್ತಿರುವುದು, ಸರ್ಕಾರದ ಪೂರಕ ನೀತಿ, ಜನಸಂಖ್ಯಾ ಬಲ ಇತ್ಯಾದಿ ಅಂಶಗಳು ಭಾರತಕ್ಕೆ ಅನುಕೂಲಕರವಾಗಿವೆ ಎಂದು ಈ ವರದಿಯಲ್ಲಿ ಗುರುತಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ 3ನೇ ಅತಿದೊಡ್ಡ ಹೋಟೆಲ್ ಜಾಲ ನಿರ್ಮಿಸಲಿರುವ ಅಕ್ಕೋರ್, ಇಂಟರ್ಗ್ಲೋಬ್, ಟ್ರೀಬೋ
ಜಾಗತಿಕ ವೇಫರ್ (ಸೆಮಿಕಂಡಕ್ಟರ್ ಚಿಪ್ಗಳಿರುವ ಹಾಳೆ) ಸಾಮರ್ಥ್ಯದಲ್ಲಿ ಭಾರತದ ಪಾಲು ಶೇ. 0.1 ಮಾತ್ರವೇ. ಅಂದರೆ, ಪ್ರತೀ ಒಂದು ಸಾವಿರ ವೇಫರ್ಗಳಲ್ಲಿ ಭಾರತ ತಯಾರಿಸುವುದು ಒಂದು ವೇಫರ್ ಮಾತ್ರ. ಪ್ರಮುಖ ಟೆಕ್ ಕಂಪನಿಗಳು ತಮ್ಮ ಸಪ್ಲೈ ಚೈನ್ಗಳನ್ನು ಭಾರತಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿವೆ.
ಸೆಮಿಕಂಡಕ್ಟರ್ನಲ್ಲಿ ಭಾರತಕ್ಕೆ ಇರುವ ಅನುಕೂಲಗಳಿವು…
ಚೀನಾ ದೇಶವು ಟೆಕ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಪ್ರಬಲವಾಗಿದೆ. ಆದರೆ, ಭಾರತಕ್ಕೆ ಟೆಕ್ ಕ್ಷೇತ್ರದಲ್ಲಿ ಇರುವ ಅನುಕೂಲ ಎಂದರೆ, ಸಾಫ್ಟ್ವೇರ್ ಮತ್ತು ಸರ್ವಿಸ್ ಕ್ಷೇತ್ರದಲ್ಲಿ ಅದಕ್ಕೆ ವಿಪುಲವಾದ ಪ್ರತಿಭೆಗಳ ಸಮೂಹ ಇರುವುದು.
ಇದನ್ನೂ ಓದಿ: ಡಿಜಿಟಲ್ ಸೌಕರ್ಯ; ಭಾರತದ ಮುಂದೆ ಸಿಲಿಕಾನ್ ವ್ಯಾಲಿ ಏನೂ ಇಲ್ಲ: ವಿವೇಕ್ ವಾಧವಾ
ಹಾಗೆಯೇ, ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ಭಾರತಕ್ಕೆ ಅನುಕೂಲಕರ ಅಂಶ ಇದೆ. ಶೇ. 20ರಷ್ಟು ಜಾಗತಿಕ ಚಿಪ್ ಡಿಸೈನರ್ ಸಂಸ್ಥೆಗಳು ಭಾರತದಲ್ಲಿ ನೆಲಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ