Gold Rate Today Bangalore: ಆಭರಣ ಚಿನ್ನದ ಬೆಲೆ 8,225 ರೂಗೆ ಏರಿಕೆ; ಇಲ್ಲಿದೆ ದರಪಟ್ಟಿ
Bullion Market 2025 April 13th: ವಾರಾಂತ್ಯದಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ 8,770 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 9,567 ರೂಗೆ ಏರಿದೆ. ವಾರದ ಹಿಂದೆ ಆಭರಣ ಚಿನ್ನದ ಬೆಲೆ 8,225 ರೂಷ್ಟಿತ್ತು. ಈಗ ಅದು 8,770 ರೂಗೆ ಏರಿದೆ. ಬೆಳ್ಳಿ ಬೆಲೆಯೂ ಕೂಡ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿದೆ. ಗರಿಷ್ಠ 105 ರೂಗೆ ಹೋಗಿದ್ದ ಅದರ ಬೆಲೆ 94 ರೂಗೂ ಕುಸಿದಿತ್ತು. ಈಗ ಮತ್ತೆ ಏರಿದೆ.

ಬೆಂಗಳೂರು, ಏಪ್ರಿಲ್ 13: ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rates) ಅತಿರೇಕ ರೀತಿಯಲ್ಲಿ ಏರಿಳಿತಗಳನ್ನು ಕಾಣುತ್ತಿವೆ. ಒಟ್ಟಾರೆ ಚಿನಿವಾರ ಮಾರುಕಟ್ಟೆ (bullion market) ತೀರಾ ಅನಿಶ್ಚಿತ ಸ್ಥಿತಿಯಲ್ಲಿದೆ. ಪ್ರತಿಯೊಂದು ವಿದ್ಯಮಾನಕ್ಕೂ ಮಾರುಕಟ್ಟೆ ಅತಿಯಾಗಿ ಪ್ರತಿಕ್ರಿಯಿಸುತ್ತಿದೆ. 8,225 ರೂವರೆಗೂ ಕುಸಿದಿದ್ದ ಆಭರಣ ಚಿನ್ನದ ಬೆಲೆ ಈಗ 8,770 ರೂಗೆ ಏರಿದೆ. ಬೆಂಗಳೂರಿನಲ್ಲಿ ಮಾರ್ಚ್ ಮೂರನೇ ವಾರದಲ್ಲಿ ದಾಖಲೆಯ 105 ರೂವರೆಗೆ ಹೋಗಿದ್ದ ಬೆಳ್ಳಿ ಬೆಲೆ 94 ರೂಗೂ ಇಳಿದಿತ್ತು. ಈಗ ಮತ್ತೆ 100 ರೂ ಗಡಿ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 13ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,670 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,760 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,670 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,700 ರೂ
- ಚೆನ್ನೈ: 87,700 ರೂ
- ಮುಂಬೈ: 87,700 ರೂ
- ದೆಹಲಿ: 87,850 ರೂ
- ಕೋಲ್ಕತಾ: 87,700 ರೂ
- ಕೇರಳ: 87,700 ರೂ
- ಅಹ್ಮದಾಬಾದ್: 87,750 ರೂ
- ಜೈಪುರ್: 87,850 ರೂ
- ಲಕ್ನೋ: 87,850 ರೂ
- ಭುವನೇಶ್ವರ್: 87,700 ರೂ
ಇದನ್ನೂ ಓದಿ: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,500 ರಿಂಗಿಟ್ (87,460 ರುಪಾಯಿ)
- ದುಬೈ: 3,612.50 ಡಿರಾಮ್ (84,530 ರುಪಾಯಿ)
- ಅಮೆರಿಕ: 980 ಡಾಲರ್ (84,230 ರುಪಾಯಿ)
- ಸಿಂಗಾಪುರ: 1,329 ಸಿಂಗಾಪುರ್ ಡಾಲರ್ (86,580 ರುಪಾಯಿ)
- ಕತಾರ್: 3,640 ಕತಾರಿ ರಿಯಾಲ್ (85,820 ರೂ)
- ಸೌದಿ ಅರೇಬಿಯಾ: 3,680 ಸೌದಿ ರಿಯಾಲ್ (84,250 ರುಪಾಯಿ)
- ಓಮನ್: 383.50 ಒಮಾನಿ ರಿಯಾಲ್ (85,610 ರುಪಾಯಿ)
- ಕುವೇತ್: 296.40 ಕುವೇತಿ ದಿನಾರ್ (83,130 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 10,000 ರೂ
- ಚೆನ್ನೈ: 11,000 ರೂ
- ಮುಂಬೈ: 10,000 ರೂ
- ದೆಹಲಿ: 10,000 ರೂ
- ಕೋಲ್ಕತಾ: 10,000 ರೂ
- ಕೇರಳ: 11,000 ರೂ
- ಅಹ್ಮದಾಬಾದ್: 10,000 ರೂ
- ಜೈಪುರ್: 10,000 ರೂ
- ಲಕ್ನೋ: 10,000 ರೂ
- ಭುವನೇಶ್ವರ್: 11,000 ರೂ
- ಪುಣೆ: 10,000
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ