Nithin Kamath: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ
Nithin Kamath's 1% rule to get richer: ಸಂಬಳದಲ್ಲಿ ಜೀವನ ಮಾಡುವವರು ಆಸೆ ತೀರಲ್ಲ, ಖರ್ಚು ನಿಲ್ಲಲ್ಲ. ಶ್ರೀಮಂತರಾಗುವ ಕನಸು ನೆರವೇರಲ್ಲ. ಆದರೆ, ನಿತಿನ್ ಕಾಮತ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ಧಾರೆ. ಅದರಲ್ಲಿ ಒನ್ ಪರ್ಸೆಂಟ್ ಸೂತ್ರದ ಮೂಲಕ ದೀರ್ಘಾವಧಿಯಲ್ಲಿ ಸಂಪತ್ತು ಹೇಗೆ ಸೃಷ್ಟಿಸಬಹುದು ಎಂದು ತಿಳಿಸಲಾಗಿದೆ.

ಬಹಳಷ್ಟು ದೊಡ್ಡ ದೊಡ್ಡ ಶ್ರೀಮಂತರನ್ನು ನೋಡಿ, ತಾವೂ ಆ ರೀತಿ ಆಗುವುದು ಹೇಗೆಂಬುದು ಮಧ್ಯಮ ವರ್ಗದವರ ಆಲೋಚನೆ. ಆದರೆ, ಆ ಶ್ರೀಮಂತರ ಶ್ರೀಮಂತಿಕೆಗೆ ಏನು ಕಾರಣ ಇದೆಯೋ ಆಳಕ್ಕೆ ಹೋದರೆ ಮಾತ್ರ ತಿಳಿಯುವುದು. ಅದೇನೇ ಇರಲಿ, ಸೀಮಿತ ಆದಾಯ ಹೊಂದಿರುವ ಸಂಬಳದಾರರು ದಿಢೀರ್ ಶ್ರೀಮಂತರಾಗಲು ಯಾವುದೇ ಶಾರ್ಟ್ ಕಟ್ಸ್ ಇಲ್ಲ. ಸಂಬಳವೇ ಜೀವನ, ಸಂಬಳವೇ ಎಲ್ಲಾ ಎನ್ನುವ ಈ ವರ್ಗದವರು ಹಣ ಉಳಿಸುವುದಿರಲಿ, ಸಾಲದ ಶೂಲಕ್ಕೆ ಸಿಕ್ಕು ವಿಲವಿಲ ಒದ್ದಾಡುವುದನ್ನು ಕಾಣುತ್ತೇವೆ. ಈ ಮಧ್ಯೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ (Nithin Kamath) ಅವರು ತಮ್ಮ ಎಕ್ಸ್ನಲ್ಲಿ ಇಂಟರೆಸ್ಟಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಶ್ರೀಮಂತರಾಗಲು ಒನ್ ಪರ್ಸೆಂಟ್ ರೂಲ್ (1% rule) ಬಗ್ಗೆ ಮಾತನಾಡಿದ್ದಾರೆ. ಇನ್ನೂ ಕೆಲ ಉಪಯುಕ್ತ ಸಲಹೆ ನೀಡಿದ್ದಾರೆ.
‘ಶ್ರೀಮಂತರನ್ನಾಗಿಸುವಂತೆ ಯಾವುದಾದರೂ ಸ್ಟಾಕ್ ಟಿಪ್ ನೀಡಿ ಎನ್ನುವ ಮನವಿ ಹೆಚ್ಚಾಗಿ ನನಗೆ ಬರುತ್ತದೆ. ದುರದೃಷ್ಟ ಎಂದರೆ, ಶ್ರೀಮಂತರಾಗಲು ಯಾವುದೇ ಶಾರ್ಟ್ಕಟ್ಸ್ ಇರೋದಿಲ್ಲ. ಸಂಯಮ ಮತ್ತು ಒಳ್ಳೆಯ ಅಭ್ಯಾಸಗಳಿಂದ ಮಾತ್ರ ಅದು ಸಾಧ್ಯ’ ಎಂದು ನಿತಿನ್ ಕಾಮತ್ ಹೇಳಿದ್ದಾರೆ.
‘ನಿಮಗೆ ಅಗತ್ಯ ಇಲ್ಲದಿರುವ ವಸ್ತುಗಳನ್ನು ಖರೀದಿಸುವ, ಅಥವಾ ಸಾಲ ಮಾಡಿ ಅದನ್ನು ಪಡೆಯುವ ಅಭ್ಯಾಸ ಬಿಟ್ಟುಬಿಡಿ’ ಎಂದು ಹೇಳಿರುವ ನಿತಿನ್ ಕಾಮತ್, ಹೆಲ್ತ್ ಇನ್ಷೂರೆನ್ಸ್ ಹೊಂದಿಲ್ಲದಿರುವುದೂ ಕೂಡ ಮತ್ತೊಂದು ಕೆಟ್ಟ ಅಭ್ಯಾಸ ಎಂದಿದ್ದಾರೆ.
ಇದನ್ನೂ ಓದಿ: Post Office FD plan: ಈ ಪೋಸ್ಟ್ ಆಫೀಸ್ ಠೇವಣಿ ಪ್ಲಾನ್ ಸಖತ್ ಆದಾಯ ಸೃಷ್ಟಿಸುವ ಮಾರ್ಗ
ನಿತಿನ್ ಕಾಮತ್ ತಮ್ಮ ಪೋಸ್ಟ್ನಲ್ಲಿ ಲರ್ನ್ ಆ್ಯಪ್ನ ಸಿಇಒ ಪ್ರತೀಕ್ ಸಿಂಗ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರತೀಕ್ ಸಿಂಗ್ ಅವರು ದೀರ್ಘಾವಧಿ ಸಂಪತ್ತು ಸೃಷ್ಟಿಗೆ 1% ತಂತ್ರವನ್ನು ತಿಳಿಸಿದ್ದಾರೆ.
ಏನಿದು 1% ತಂತ್ರ?
ಜನರು ತಾವು ಖರ್ಚು ಮಾಡುವ ಒಂದೊಂದು ಪೈಸೆಯ ಲೆಕ್ಕವನ್ನೂ ಬರೆದಿಡಬೇಕು. ಒಂದು ತಿಂಗಳಲ್ಲಿ ಎಷ್ಟು ವೆಚ್ಚ ಆಗುತ್ತದೆ, ಹೇಗೆ ಆಗುತ್ತದೆ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಅದರಲ್ಲಿ ಯಾವುದು ಅನಗತ್ಯ ವೆಚ್ಚ ಅನಿಸುತ್ತದೋ ಅದನ್ನು ಬಿಡಲು ಯತ್ನಿಸಬೇಕು. ಮಾಸಿಕ ವೆಚ್ಚದಲ್ಲಿ ಶೇ. 1ರಷ್ಟನ್ನಾದರೂ ಉಳಿಸಬೇಕು ಎಂದು ಪ್ರತೀಕ್ ಸಿಂಗ್ ಆ ವಿಡಿಯೋದಲ್ಲಿ ಹೇಳಿದ್ದಾರೆ.
I often get asked for a stock tip, something that will make people rich. 😬
Unfortunately, there are no shortcuts to getting rich. It takes good habits and patience. Things like buying stuff you don’t need, or worse, borrowing to buy them. The other big one is not having health… pic.twitter.com/qWYaDuhZKe
— Nithin Kamath (@Nithin0dha) April 10, 2025
‘…ಉಳಿಸಿದ ಈ ಒಂದು ಪ್ರತಿಶತ ಹಣವನ್ನು ಶೇ. 10-12ರಷ್ಟು ಸಿಎಜಿಆರ್ನಲ್ಲಿ ಬೆಳೆಯುವ ಫಂಡ್ಗೆ ಹೂಡಿಕೆ ಮಾಡಬೇಕು. ಈ ಒಂದು ಸಣ್ಣ ಹೆಜ್ಜೆಯು ನಿಮಗೆ ದೀರ್ಘಾವಧಿಯಲ್ಲಿ ಉತ್ತಮ ಅಭ್ಯಾಸವಾಗುತ್ತದೆ’ ಎಂದಿದ್ದಾರೆ ಲರ್ನ್ಆ್ಯಪ್ ಸಂಸ್ಥಾಪಕರು.
ಇದನ್ನೂ ಓದಿ: ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್ಐಪಿ ಕಾಯಕ: ತಜ್ಞರ ಅನಿಸಿಕೆ
ಎಮರ್ಜೆನ್ಸಿ ಫಂಡ್ ಮುಖ್ಯ
ಜನರು ಹೂಡಿಕೆಗೆ ಇಳಿಯುವ ಮುನ್ನ ಎಮರ್ಜೆನ್ಸಿ ಫಂಡ್ ಕಟ್ಟುವುದು ಬಳ ಮುಖ್ಯ. ನಿಮ್ಮ ಮಾಸಿಕ ವೆಚ್ಚದ ಕನಿಷ್ಠ ಆರು ತಿಂಗಳಷ್ಟಾದರೂ ಹಣವನ್ನು ಸುಲಭ ಲಭ್ಯ ಸಾಧನಗಳಲ್ಲಿ ಇಡಬೇಕು. ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಬೇಕು. ಆ ಬಳಿಕ ಉಳಿಯುವ ಹಣವನ್ನು ಹೂಡಿಕೆಗೆ ಉಪಯೋಗಿಸಬೇಕು ಎನ್ನುವುದು ಪ್ರತೀಕ್ ಸಿಂಗ್ ಅವರ ಸಲಹೆ.
ಪ್ರತೀಕ್ ಅವರ ಈ ವಿಡಿಯೋವನ್ನು ಝೀರೋಧ ಸಿಇಒ ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಡ್ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Fri, 11 April 25