AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Office FD plan: ಈ ಪೋಸ್ಟ್ ಆಫೀಸ್ ಠೇವಣಿ ಪ್ಲಾನ್ ಸಖತ್ ಆದಾಯ ಸೃಷ್ಟಿಸುವ ಮಾರ್ಗ

Post Office Fixed Deposit Plan: ಪೋಸ್ಟ್ ಆಫೀಸ್​ನ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಬಳಸಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಸಾಧ್ಯ. ಅಂಚೆ ಕಚೇರಿ ಎಫ್​​ಡಿ ಸ್ಕೀಮ್​​​ನಲ್ಲಿ 1, 2, 3 ಮತ್ತು 5 ವರ್ಷದ ಠೇವಣಿ ಪ್ಲಾನ್​​ಗಳಿವೆ. ಶೇ. 6.9ರಿಂದ ಶೇ. 7.5ರವರೆಗೂ ಬಡ್ಡಿ ಸಿಗುತ್ತದೆ. ಫಿಕ್ಸೆಡ್ ಡೆಪಾಸಿಟ್ ಪ್ಲಾನ್​​​ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದ್ದು, ಗರಿಷ್ಠ ಹೂಡಿಕೆಗೆ ಮಿತಿ ಇರುವುದಿಲ್ಲ.

Post Office FD plan: ಈ ಪೋಸ್ಟ್ ಆಫೀಸ್ ಠೇವಣಿ ಪ್ಲಾನ್ ಸಖತ್ ಆದಾಯ ಸೃಷ್ಟಿಸುವ ಮಾರ್ಗ
ಪೋಸ್ಟ್ ಆಫೀಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 07, 2025 | 7:10 PM

Share

ಪೋಸ್ಟ್ ಆಫೀಸ್​​ನಲ್ಲಿ ಹಲವಾರು ಸಣ್ಣ ಉಳಿತಾಯ ಯೋಜನೆಗಳಿದ್ದು (Small saving schemes), ಇವುಗಳು ಸಾಕಷ್ಟು ಜನಪ್ರಿಯವಾಗಿವೆ. ಅಂತೆಯೇ, ಅಂಚೆ ಕಚೇರಿಗಳಲ್ಲಿ ಈ ಸ್ಕೀಮ್​​ಗಳಿಗಾಗಿ ಜನರು ಸಾಲಿನಲ್ಲಿ ನಿಂತಿರುವ ದೃಶ್ಯ ಕಾಣಬಹುದು. ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ಹಲವು ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಪ್ರಮುಖವಾದುದು. ಯಾವುದೇ ರಿಸ್ಕ್ ಇಲ್ಲದೇ ಹೂಡಿಕೆ ಮಾಡಲು ಬಯಸುವವರಿಗೆ ಈ ಎಫ್​​ಡಿ ಪ್ಲಾನ್ ಹೇಳಿ ಮಾಡಿಸಿದ್ದಾಗಿದೆ. ಶೇ. 7.5ರವರೆಗೂ ವಾರ್ಷಿಕ ಬಡ್ಡಿ ನೀಡುತ್ತದೆ ಈ ಪ್ಲಾನ್. ಈ ಪ್ಲಾನ್​​ನಲ್ಲಿ ಗರಿಷ್ಠ ಠೇವಣಿ ಇರಿಸಿದರೆ ತಿಂಗಳಿಗೆ 44,995 ರೂವರೆಗೂ ಆದಾಯ ಸೃಷ್ಟಿಸಲು ಸಾಧ್ಯ.

ಪೋಸ್ಟ್ ಆಫೀಸ್ ಫಿಕ್ಸಡ್ ಡೆಪಾಸಿಟ್ ಸ್ಕೀಮ್ ವಿವರ

ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ 1 ವರ್ಷದಿಂದ ಆರಂಭವಾಗಿ 5 ವರ್ಷದವರೆಗೂ ಇದೆ. 1, 2, 3 ಮತ್ತು 5 ವರ್ಷಕ್ಕೆ ಬೇರೆ ಬೇರೆ ಪ್ಲಾನ್​​ಗಳಿವೆ. 1 ವರ್ಷದ ಎಫ್​​ಡಿಗೆ ಶೇ. 6.9, ಎರಡು ವರ್ಷದ ಎಫ್​​​ಡಿಗೆ ಶೇ. 7 ಬಡ್ಡಿ, ಮೂರು ವರ್ಷದ ಎಫ್​​ಡಿಗೆ ಶೇ. 7.1 ಬಡ್ಡಿ ಮತ್ತು ಐದು ವರ್ಷದ ನಿಶ್ಚಿತ ಠೇವಣಿಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: ಪಿಪಿಎಫ್: ಎಲ್ಲಾ 15 ವರ್ಷಕ್ಕೂ ಒಂದೇ ಬಡ್ಡಿದರವಾ? ವರ್ಷದ ಕೊನೆಯಲ್ಲಿ ಮಾಡಿದ ಹೂಡಿಕೆಗೆ ಇಡೀ ವರ್ಷದ ಬಡ್ಡಿ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್

ಇದನ್ನೂ ಓದಿ
Image
ಪಿಪಿಎಫ್ ಬಡ್ಡಿದರ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ
Image
ಸ್ಮಾಲ್ ಸೇವಿಂಗ್ಸ್ ಸ್ಕೀಮ್​​ಗಳಿಗೆ ಬಡ್ಡಿದರ ಬದಲಾವಣೆ ಇಲ್ಲ
Image
ಎಟಿಎಂ ಟ್ರಾನ್ಸಾಕ್ಷನ್, ಮೇ 1ರಿಂದ ಶುಲ್ಕ ಹೆಚ್ಚಳ
Image
ಒಂದಕ್ಕಿಂತ ಹೆಚ್ಚು ಇನ್ಷೂರೆನ್ಸ್ ಪಾಲಿಸಿ ಬಳಸುವುದು ಹೇಗೆ?

ಪಿಪಿಎಫ್ ರೀತಿಯಲ್ಲಿ ಎಫ್​​ಡಿ ಪ್ಲಾನ್​​ನಲ್ಲೂ ಠೇವಣಿಗಳಿಗೆ ತ್ರೈಮಾಸಿಕವಾಗಿ ಬಡ್ಡಿ ಜಮೆ ಮಾಡಲಾಗುತ್ತದೆ. ಬಡ್ಡಿಗೆ ಚಕ್ರ ಬಡ್ಡಿ ಬೆಳೆದು ವಾರ್ಷಿಕ ಬಡ್ಡಿ ವಾಸ್ತವವಾಗಿ ಇನ್ನೂ ಹೆಚ್ಚಿಗೆ ಬರುತ್ತದೆ. 5 ವರ್ಷದ ಎಫ್​​ಡಿಗೆ ಶೇ. 7.5 ಬಡ್ಡಿ ಎಂದಿದ್ದರೂ ವಾಸ್ತವವಾಗಿ ಸಿಗುವ ಲಾಭ ಶೇ. 7.71ರಷ್ಟಿದೆ.

ಮಾಸಿಕವಾಗಿ 50,000 ರೂ ಆದಾಯ ಸೃಷ್ಟಿಸಬಹುದಾ?

ಪೋಸ್ಟ್ ಆಫೀಸ್ ಎಫ್​​ಡಿ ಪ್ಲಾನ್​​ನ್ಲಲಿ ಮಾಸಿಕವಾಗಿ ಬಡ್ಡಿ ಹಿಂಪಡೆಯಲು ಸಾಧ್ಯವಿಲ್ಲ. ಇದರಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಅಂದರೆ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.

5 ವರ್ಷದ ಎಫ್​​ಡಿಯಲ್ಲಿ ನೀವು 10 ಲಕ್ಷ ರೂ ಹೂಡಿಕೆ ಮಾಡಿದರೆ, 14.49 ಲಕ್ಷ ರೂ ರಿಟರ್ನ್ ಸಿಗುತ್ತದೆ. 25 ಲಕ್ಷ ರೂ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ಮೆಚ್ಯೂರಿಟಿ ಬಳಿಕ 36 ಲಕ್ಷ ರೂ ಸಿಗುತ್ತದೆ. 40 ಲಕ್ಷ ರೂ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ 58 ಲಕ್ಷ ರೂ ರಿಟರ್ನ್ ಸಿಗುತ್ತದೆ.

ಇದನ್ನೂ ಓದಿ: ಏಪ್ರಿಲ್-ಜೂನ್ ಕ್ವಾರ್ಟರ್​​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪ್ರಕಟ

ನೀವು ಮಾಸಿಕ ಆದಾಯ ಸೃಷ್ಟಿಸಬೇಕೆಂದಿದ್ದರೆ ನೀವು ಐದು ವರ್ಷದ ಬಳಿಕ ಈ ಮೊತ್ತವನ್ನು ಅಂಚೆ ಕಚೇರಿಯ ಮಂತ್ಲಿ ಇನ್ಕಮ್ ಸ್ಕೀಮ್​​ನಲ್ಲಿ ಮರು ಹೂಡಿಕೆ ಮಾಡಬಹುದು. ಆದರೆ, ಪೋಸ್ಟ್ ಆಫೀಸ್​​ನ ಮಾಸಿಕ ಹೂಡಿಕೆ ಯೋಜನೆಯಲ್ಲಿ 9 ಲಕ್ಷ ರೂವರೆಗೂ ಮಾತ್ರ ಹೂಡಿಕೆ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Mon, 7 April 25

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಲಿದೆ!
ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಲಿದೆ!
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ