AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indigo record: ವಿಶ್ವದ ಅತಿಮೌಲ್ಯಯುತ ಏರ್​ಲೈನ್ಸ್ ಕಂಪನಿ ಎನಿಸಿದ ಭಾರತದ ಇಂಡಿಗೋ

India's Indigo become most valuable airlines: 20 ವರ್ಷದ ಹಿಂದೆ ಸ್ಥಾಪನೆಯಾದ ಭಾರತದ ಇಂಡಿಗೋ ಏರ್​ಲೈನ್ಸ್ ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದೆನಿಸಿದೆ. ಮಾರುಕಟ್ಟೆ ಮೌಲ್ಯದಲ್ಲಿ ಅದು ವಿಶ್ವದ ಅತಿದೊಡ್ಡ ಏರ್​ಲೈನ್ಸ್ ಎನಿಸಿದೆ. ಈ ವರ್ಷ ಮಾರುಕಟ್ಟೆ ಕುಸಿದರೂ ಇಂಡಿಗೋ ಏರ್ಲೈನ್ಸ್ ಷೇರು ಬೆಲೆ ಹೆಚ್ಚಿದ್ದು ಅದರ ಮಾರುಕಟ್ಟೆ ಸಂಪತ್ತು 2 ಲಕ್ಷ ಕೋಟಿ ರೂ ದಾಟಿದೆ.

Indigo record: ವಿಶ್ವದ ಅತಿಮೌಲ್ಯಯುತ ಏರ್​ಲೈನ್ಸ್ ಕಂಪನಿ ಎನಿಸಿದ ಭಾರತದ ಇಂಡಿಗೋ
ಇಂಡಿಗೋ ಏರ್​ಲೈನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 10, 2025 | 11:52 AM

ನವದೆಹಲಿ, ಏಪ್ರಿಲ್ 10: ಭಾರತದ ಅತಿದೊಡ್ಡ ಏರ್ಲೈನ್ಸ್ ಎನಿಸಿರುವ ಇಂಡಿಗೋ (Indigo Airlines) ಹೊಸ ದಾಖಲೆ ಮಾಡಿದೆ. ವಿಶ್ವದಲ್ಲೇ ಅತಿಹೆಚ್ಚು ಮಾರುಕಟ್ಟೆ ಮೌಲ್ಯ (Market cap) ಹೊಂದಿದ ಏರ್ಲೈನ್ಸ್ ಎನ್ನುವ ದಾಖಲೆ ಇಂಡಿಗೋ ಹೆಸರಲ್ಲಿ ದಾಖಲಾಯಿತು. ಅಮೆರಿಕದ ಡೆಲ್ಟಾ ಏರ್​​ಲೈನ್ (Delta Airline), ಐರ್ಲೆಂಡ್​​ನ ರಯಾನ್​​ಏರ್ ಹೋಲ್ಡಿಂಗ್ಸ್ ಸಂಸ್ಥೆಗಳ (RyanAir Holdings) ಮಾರುಕಟ್ಟೆ ಮೌಲ್ಯವನ್ನೂ ಮೀರಿಸಿತು ಇಂಡಿಗೋ. ಬುಧವಾರ ಕೆಲ ಹೊತ್ತಿನವರೆಗೂ ಈ ದಾಖಲೆ ಇಂಡಿಗೋ ಹೆಸರಲ್ಲಿ ಇತ್ತು. ಒಂದು ಹಂತದಲ್ಲಿ ಇದರ ಮಾರುಕಟ್ಟೆ ಮೌಲ್ಯ 23 ಬಿಲಿಯನ್ ಡಾಲರ್ ದಾಟಿ ಹೋಗಿತ್ತು.

ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಸೇವೆ ಒದಗಿಸುವ ಇಂಡಿಗೋ ಈ ವರ್ಷ ಶೇ. 13ರಷ್ಟು ಷೇರು ಮೌಲ್ಯ ಹೆಚ್ಚಿಸಿಕೊಂಡಿದೆ. ಮಾರುಕಟ್ಟೆ ಕುಸಿತ ಕಂಡರೂ ಇಂಡಿಗೋ ಮೌಲ್ಯ ಹೆಚ್ಚಿಸಿಕೊಂಡಿದ್ದು ಗಮನಾರ್ಹ. 5,195 ರೂ ಷೇರುಬೆಲೆ ಹೊಂದಿದ್ದು, ಈ ವರ್ಷ 600 ರೂ ಮೌಲ್ಯ ಹೆಚ್ಚಳ ಆಗಿದೆ. ಅದರ ಒಟ್ಟು ಮಾರುಕಟ್ಟೆ ಮೌಲ್ಯ 2.01 ಲಕ್ಷ ಕೋಟಿ ರೂನಷ್ಟಿದೆ.

ಇದನ್ನೂ ಓದಿ: ಡಿಪಿಡಿಪಿ ಕಾಯ್ದೆಯೊಂದಿಗೆ ತಾಳೆಯಾಗುವ ಹೊಸ ಆಧಾರ್ ಕಾನೂನು ತಯಾರಿಯಲ್ಲಿ ಸರ್ಕಾರ

ಇದನ್ನೂ ಓದಿ
Image
ಬೆಂಗಳೂರು ಸೇರಿ 11 ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವಿಐ 5ಜಿ ಲಭ್ಯ
Image
ಹೊಸ ಆಧಾರ್ ಕಾನೂನು ತಯಾರಿಕೆಗೆ ಸರ್ಕಾರ ಮುಂದು
Image
ಭಾರತದಿಂದ 2 ಲಕ್ಷ ಕೋಟಿ ರೂ ಸ್ಮಾರ್ಟ್​​ಫೋನ್ ರಫ್ತು
Image
ದಿವಾಳಿ ಎದ್ದ ಈ ಕಂಪನಿಯ ಖರೀದಿಸಲು ಸಾಲುಗಟ್ಟಿದ ದಿಗ್ಗಜರು

ಭಾರತದ ದೈತ್ಯ ಏರ್​ಲೈನ್ಸ್ ಕಂಪನಿ ಇಂಡಿಗೋ

ಸರಿಯಾಗಿ 20 ವರ್ಷದ ಹಿಂದೆ ಸ್ಥಾಪನೆಯಾದ ಇಂಡಿಗೋ ಏರ್ಲೈನ್ಸ್ ಸಂಸ್ಥೆ ಇದೀಗ ಭಾರತದ ಏವಿಯೇಶನ್ ಮಾರುಕಟ್ಟೆಯ ಶೇ. 60ಕ್ಕಿಂತಲೂ ಹೆಚ್ಚಿನ ಪಾಲು ಹೊಂದಿದೆ. ರಾಹುಲ್ ಭಾಟಿಯಾ ಮತ್ತು ರಾಕೇಶ್ ಗಂಗವಾಲ್ ಸ್ಥಾಪಿಸಿದ ಈ ಕಂಪನಿ ಭಾರತ ಮಾತ್ರವಲ್ಲ, ಏಷ್ಯಾದ ಅತಿದೊಡ್ಡ ಏರ್​​ಲೈನ್ ಎನಿಸಿದೆ. ವಿಶ್ವದ ಅತಿದೊಡ್ಡ ಏರ್​​ಲೈನ್​​ಗಳ ಸಾಲಿನಲ್ಲಿ ಅದು ನಿಲ್ಲುತ್ತದೆ.

ದೇಶದ 91 ನಗರಗಳು ಮತ್ತು ವಿಶ್ವದ 37 ನಗರಗಳನ್ನು ಸಂಪರ್ಕಿಸುವ ಈ ಏರ್​ಲೈನ್ಸ್ ನಿತ್ಯವೂ 2,200ಕ್ಕೂ ಹೆಚ್ಚು ಫ್ಲೈಟ್​​ಗಳ ಸೇವೆ ನೀಡುತ್ತದೆ. ವರ್ಷಕ್ಕೆ 10 ಕೋಟಿಗೂ ಅಧಿಕ ಪ್ರಯಾಣಿಕರು ಇಂಡಿಗೋ ಬಳಸುತ್ತಾರೆ.

ಇಂಡಿಗೋ ಏರ್​ಲೈನ್ಸ್ ಬಳಿ ಸದ್ಯ 439 ವಿಮಾನಗಳಿವೆ. ಈ ಹಣಕಾಸು ವರ್ಷದಲ್ಲಿ 50 ಹೊಸ ವಿಮಾನಗಳನ್ನು ಹೊಂದಲು ಅದು ಯೋಜಿಸಿದೆ.

ಇದನ್ನೂ ಓದಿ: ಭಾರತ ಹೊಸ ಮೈಲಿಗಲ್ಲು; ಒಂದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್​​ಫೋನ್ ರಫ್ತು

ಉತ್ತಮ ಲಾಭದಲ್ಲಿ ಇಂಡಿಗೋ ಏರ್​ಲೈನ್ಸ್

ಭಾರತದಲ್ಲಿ ಏರ್​ಲೈನ್ ಸಂಸ್ಥೆಗಳು ಲಾಭ ಕಾಣುವುದು ದುಸ್ತರ. ಆದರೆ, ಬಜೆಟ್ ಏರ್​ಲೈನ್ಸ್ ಆದರೂ ಇಂಡಿಗೋ ಉತ್ತಮ ಆದಾಯ ಮತ್ತು ಲಾಭ ಕಾಣುತ್ತಿದೆ. 2024ರ ಅಕ್ಟೋಬರ್​​ನಿಂದ ಡಿಸೆಂಬರ್​​ವರೆಗಿನ ಕ್ವಾರ್ಟರ್​​ನಲ್ಲಿ 22,111 ಕೋಟಿ ರೂ ಆದಾಯ ಕಂಡಿದೆ. ಅದರ ನಿವ್ವಳ ಲಾಭ 2,449 ಕೋಟಿ ರೂ ದಾಖಲಾಗಿದೆ.

ಹಿಂದಿನ ವರ್ಷದ ಅದೇ ಅವಧಿಗೆ ಹೋಲಿಸಿದರೆ ಆದಾಯದಲ್ಲಿ ತುಸು ಹೆಚ್ಚಳವಾದರೂ ನಿವ್ವಳ ಲಾಭ ಸ್ವಲ್ಪ ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Thu, 10 April 25

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ