ದಿವಾಳಿ ಎದ್ದ ಜೈಪ್ರಕಾಶ್ ಅಸೋಸಿಯೇಟ್ಸ್; ಖರೀದಿಗೆ ಮುಗಿಬಿದ್ದ ಅದಾನಿ, ಜಿಂದಾಲ್, ಓಬೇರಾಯ್, ಬಾಬಾ ರಾಮದೇವ್ ಮತ್ತಿತರರು
Jaiprakash Associates facing Corporate insolvency resolution process: ಸಿಮೆಂಟ್, ರಿಯಲ್ ಎಸ್ಟೇಟ್ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಬ್ಯುಸಿನೆಸ್ ಹೊಂದಿರುವ ಜೈಪ್ರಕಾಶ್ ಅಸೋಸಿಯೇಟ್ಸ್ ವಿರುದ್ಧ ದಿವಾಳಿ ಕ್ರಮ ಜರುಗಿಸಲಾಗುತ್ತಿದೆ. ಸಾಲ ತೀರಿಸಲಾಗದ ಕಾರಣ ಜೆಎಎಲ್ ವಿರುದ್ಧ ದಿವಾಳಿ ತಡೆ ಕಾನೂನು ಅಡಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ಅದನ್ನು ಮಾರಲಾಗುತ್ತಿದ್ದು, ಅದಾನಿ ಗ್ರೂಪ್ ಸೇರಿದಂತೆ 26 ಕಂಪನಿಗಳು ಖರೀದಿಗೆ ಆಸಕ್ತಿ ತೋರಿವೆ.

ನವದೆಹಲಿ, ಏಪ್ರಿಲ್ 8: ಸಾಲ ತೀರಿಸಲಾಗದೆ ದಿವಾಳಿ ಎದ್ದಿರುವ ಜೈಪ್ರಕಾಶ್ ಅಸೋಸಿಯೇಟ್ಸ್ ಲಿ (Jaiprakash Associates Ltd) ಸಂಸ್ಥೆಯನ್ನು ಖರೀದಿಸಲು ಹಲವು ಕಂಪನಿಗಳು ಆಸಕ್ತಿ ತೋರಿವೆ. ಗೌತಮ್ ಅದಾನಿ ಅವರ ಅದಾನಿ ಗ್ರೂಪ್, ಅನಿಲ್ ಅಗರ್ವಾಲ್ ಅವರ ವೇದಾಂತ ಗ್ರೂಪ್, ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ್, ಜಿಂದಾಲ್ ಪವರ್, ಓಬೆರಾಯ್ ಇತ್ಯಾದಿ 26 ಸಂಸ್ಥೆಗಳು ಜೆಎಎಲ್ ಖರೀದಿಸಲು ಎಕ್ಸ್ಪ್ರೆಸ್ ಅಫ್ ಇಂಟರೆಸ್ಟ್ ಸಲ್ಲಿಸಿವೆ.
ಜೈಪ್ರಕಾಶ್ ಅಸೋಸಿಯೇಟ್ಸ್ ಕಂಪನಿಯ ಬ್ಯುಸಿನೆಸ್ ಏನು?
ಜೈಪ್ರಕಾಶ್ ಅಸೋಸಿಯೇಟ್ಸ್ ಸಂಸ್ಥೆ ಹಲವು ವಿಸ್ತೃತ ಬ್ಯುಸಿನೆಸ್ ಹೊಂದಿದೆ. ರಿಯಲ್ ಎಸ್ಟೇಟ್, ಸಿಮೆಂಟ್ ತಯಾರಿಕೆ, ಆತಿಥ್ಯೋದ್ಯಮ, ಎಂಜಿನಿಯರಿಂಗ್ ಮತ್ತು ಕಟ್ಟಡ ನಿರ್ಮಾಣ ವಲಯಗಳಲ್ಲಿ ಬ್ಯುಸಿನೆಸ್ ಹೊಂದಿದೆ.
ಇದನ್ನೂ ಓದಿ: ವೆಚ್ಚ ಹೆಚ್ಚಳದಲ್ಲೂ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಭಾರತದ ಎಂಎಸ್ಎಂಇಗಳು: ಸಿಡ್ಬಿ ವರದಿ
ಜೆಎಎಲ್ ದಿವಾಳಿ ಎದ್ದಿದ್ದು ಹೇಗೆ?
ಜೇಪೀ ಗ್ರೂಪ್ಗೆ ಸೇರಿದ ಜೈಪ್ರಕಾಶ್ ಅಸೋಸಿಯೇಟ್ಸ್ ಕಂಪನಿಯನ್ನು ಜೈಪ್ರಕಾಶ್ ಗೌರ್ 1979ರಲ್ಲಿ ಸ್ಥಾಪನೆ ಮಾಡಿದ್ದರು. ಅವರ ಮಗ ಮನೋಜ್ ಗೌರ್ ಅವರು ಜೆಎಎಲ್ನ ಸಿಇಒ ಆಗಿದ್ದಾರೆ. ಬ್ಯಾಂಕ್ ಸಾಲದ ಮರುಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸಾಲಗಾರರು ಸೇರಿ ಜೆಎಎಲ್ ವಿರುದ್ಧ ಸಾಲ ವಸೂಲಾತಿ ಕ್ರಮಕ್ಕೆ ಅರ್ಜಿ ಹಾಕಿದ್ದವು. ಕೋರ್ಟ್ನಿಂದಲೂ ಈ ಕ್ರಮಕ್ಕೆ ಅನುಮೋದನೆ ಸಿಕ್ಕಿದೆ. ಇದರ ಕ್ರಮವಾಗಿ, ಜೆಎಎಲ್ ಅನ್ನು ಮಾರಲಾಗುತ್ತಿದೆ.
ವರದಿ ಪ್ರಕಾರ ಜೈಪ್ರಕಾಶ್ ಅಸೋಸಿಯೇಟ್ಸ್ ಸಂಸ್ಥೆ ಹೊಂದಿರುವ ಸಾಲ ಬಾಕಿ ಬರೋಬ್ಬರಿ 57,185 ಕೋಟಿ ರೂ ಎನ್ನಲಾಗಿದೆ. ಎಸ್ಬಿಐ ಸೇರಿದಂತೆ ಹಲವು ಬ್ಯಾಂಕುಗಳಿಂದ ಈ ಸಂಸ್ಥೆ ಸಾಲ ಮಾಡಿದೆ. ಸಾಲ ನೀಡಿದ ಹೆಚ್ಚಿನ ಬ್ಯಾಂಕುಗಳು ತಮಗೆ ಬರಬೇಕಿರುವ ಸಾಲವನ್ನು ನ್ಯಾಷನಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿಗೆ (ಎನ್ಎಆರ್ಸಿಎಲ್) ಮಾರಿವೆ. ಈಗ ಎನ್ಎಆರ್ಸಿಎಲ್ ಮುಂದೆ ನಿಂತು ಜೆಎಎಲ್ ಅನ್ನು ಮಾರಿ, ತಮ್ಮ ಸಾಲ ವಸೂಲಿ ಮಾಡಿಕೊಳ್ಳಲು ಯತ್ನಿಸುತ್ತಿದೆ.
ಇದನ್ನೂ ಓದಿ: ಸೌರಶಕ್ತಿ ಮತ್ತು ವಾಯುಶಕ್ತಿ ಉತ್ಪಾದನೆಯಲ್ಲಿ ಜರ್ಮನಿಯನ್ನು ಹಿಂದಿಕ್ಕಿದ ಭಾರತ; ಈಗ ನಾವೇ ವಿಶ್ವದ ನಂ. 3
ಜೆಎಎಲ್ ಖರೀದಿಸಲು ಮುಂದಾದ 26 ಕಂಪನಿಗಳ ಪಟ್ಟಿ
- ಅದಾನಿ ಎಂಟರ್ಪ್ರೈಸಸ್
- ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿ
- ಆಥಮ್ ಇನ್ವೆಸ್ಟ್ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿ
- ವಿನ್ರೋ ಕಮರ್ಷಿಯಲ್ ಮತ್ತು ಪರಾಖ್ ಅಡ್ವೈಸರ್ಸ್ ಪ್ರೈ ಲಿ
- ದಾಲ್ಮಿಯ ಸಿಮೆಂಟ್
- ಡಿಕಿ ಅಸೆಟ್ ಮ್ಯಾನೇಜ್ಮೆಂಟ್ ಪ್ರೈ ಲಿ
- ಜಿಎಂಆರ್ ಬ್ಯುಸಿನೆಸ್ ಅಂಡ್ ಕನ್ಸಲ್ಟೆನ್ಸಿ
- ಇಂಡಿಯಾ ಆಪರೋರ್ಚೂನಿಟೀಸ್ (ಓಕ್ ಟ್ರೀ)
- ಜೆ.ಸಿ. ಫ್ಲವರ್ ಅಸೆಟ್ ರೀಕನ್ಸ್ಟ್ರಕ್ಷನ್ ಪ್ರೈ ಲಿ
- ಜೈಥಾರಿ ಥರ್ಮಲ್ ಪವರ್ ಪ್ರೈ ಲಿ
- ಜಾಕ್ಸನ್ ಲಿ
- ಜೇಪೀ ಇನ್ಫ್ರಾಟೆಕ್ ಲಿ
- ಜಿಂದಾಲ್ ಇಂಡಿಯಾ ಪವರ್
- ಜಿಂದಾಲ್ ಪವರ್ ಲಿ
- ಕೋಟಕ್ ಆಲ್ಟರ್ನೇಟಿವ್ ಅಸೆಟ್ ಮ್ಯಾನೇಜರ್ಸ್
- ಒಬೇರಾಯ್ ರಿಯಾಲ್ಟಿ ಲಿ
- ಓರಿಯೆಂಟಲ್ ಸ್ಟ್ರಕ್ಚರಲ್ ಎಂಜಿನಿಯರ್ಸ್
- ಪಶ್ಚಿಮ್ ಸಾಗರ್ ಪ್ರಾಪರ್ಟೀಸ್
- ಪತಂಜಲಿ ಆಯುರ್ವೆದ
- ಪಿಎನ್ಸಿ ಇನ್ಫ್ರಾಟೆಕ್
- ರಷ್ಮಿ ಮೆಟಾಲಿಕ್ಸ್ ಲಿ
- ಶಿರೀಷ ಟೆಕ್ನಾಲಜೀಸ್ ಪ್ರೈ ಲಿ
- ಸಿಗ್ಮ ಕಾರ್ಪೊರೇಶನ್
- ಟಾರೆಂಟ್ ಪವರ್ ಲಿ
- ವೇದಾಂತ ಲಿ
- ವಿನ್ಚೇನ್ ಇನ್ಫ್ರಾಸ್ಟ್ರಕ್ಚರ್ಸ್ ಪ್ರೈ ಲಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ