AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್ಟಪ್​​ಗಳ ಉತ್ತೇಜನಕ್ಕಾಗಿ 10,000 ಕೋಟಿ ರೂ ಫಂಡ್ ಆಫ್ ಫಂಡ್ಸ್, ಹೆಲ್ಪ್​​ಲೈನ್ ಘೋಷಣೆ

Fund of funds and Helpline for startups: ನವೋದ್ಯಮಿಗಳಿಗೆ ನೆರವು ನೀಡಲು ಸರ್ಕಾರ ಸ್ಟಾರ್ಟಪ್ ಇಂಡಿಯಾ ಡೆಸ್ಕ್ ಎನ್ನುವ ಹೆಲ್ಪ್​​ಲೈನ್ ಪ್ರಕಟಿಸಿದೆ. ಎರಡನೇ ಫಂಡ್ ಆಫ್ ಫಂಡ್​​ಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ಇದರಲ್ಲಿ 10,000 ಕೋಟಿ ರೂ ನಿಧಿ ಇದೆ. ಈ ಪೈಕಿ ಮೊದಲ ಕಂತಿನಲ್ಲಿ 2,000 ಕೋಟಿ ರೂ ಹಣವನ್ನು ಸಿಡ್ಬಿ ಬ್ಯಾಂಕ್​​​ಗೆ ಸರ್ಕಾರ ಕಳುಹಿಸಿದೆ.

ಸ್ಟಾರ್ಟಪ್​​ಗಳ ಉತ್ತೇಜನಕ್ಕಾಗಿ 10,000 ಕೋಟಿ ರೂ ಫಂಡ್ ಆಫ್ ಫಂಡ್ಸ್, ಹೆಲ್ಪ್​​ಲೈನ್ ಘೋಷಣೆ
ಪೀಯೂಶ್ ಗೋಯಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 06, 2025 | 11:10 AM

Share

ನವದೆಹಲಿ, ಏಪ್ರಿಲ್ 6: ದೇಶದಲ್ಲಿ ಉದ್ಯಮಶೀಲತೆ, ಸೃಜನಶೀಲತೆ ಮತ್ತು ಸ್ಟಾರ್ಟಪ್​​ಗಳ ನಿರ್ಮಾಣಕ್ಕೆ ಉತ್ತೇಜಿಸಲು ಮುಂದಾಗಿರುವ ಸರ್ಕಾರ ಆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದಯೋನ್ಮುಖ ಆಂಟ್ರಪ್ರನ್ಯೂರ್​​​ಗಳಿಗೆ (budding entrepreneurs) ಸರ್ಕಾರ ಹೆಲ್ಪ್​​ಲೈನ್ ಸ್ಥಾಪಿಸಲು ಮುಂದಾಗಿದೆ. ಹಾಗೆಯೇ, ಸ್ಟಾರ್ಟಪ್​​ಗಳ ನೆರವಿಗಾಗಿ ದೊಡ್ಡ ಮೊತ್ತದ ಫಂಡ್​ ಅನ್ನೂ ಸರ್ಕಾರ ಪ್ರಕಟಿಸಿದೆ. ಕೇಂದ್ರ ಉದ್ಯಮ ಸಚಿವ ಪೀಯುಶ್ ಗೋಯಲ್ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಸ್ಟಾರ್ಟಪ್ ಇಂಡಿಯಾ ಡೆಸ್ಕ್ ಎನ್ನುವ ಈ ಹೆಲ್ಪ್​​ಲೈನ್ 4 ಡಿಜಿಟ್ ನಂಬರ್ ಹೊಂದಿರುತ್ತದೆ. ಇದು ಟೋಲ್ ಫ್ರೀ ಸಂಖ್ಯೆಯಾಗಿದ್ದು, ಉದ್ದಿಮೆದಾರರ ಅಳಲನ್ನು ಕೇಳಲು ಬಳಕೆಯಾಗಲಿದೆ.

ಸ್ಟಾರ್ಟಪ್​​ಗಳಿಗೆ 10,000 ಕೋಟಿ ರೂ ಮೊತ್ತದ ಮಹಾಫಂಡ್​​ಗೆ ಈ ವರ್ಷ ಅನುಮೋದನೆ ಸಿಕ್ಕಿದೆ. ಇದು ಎರಡನೇ ಮಹಾಫಂಡ್ ಎನ್ನಲಾಗಿದ್ದು, 10,000 ಕೋಟಿ ರೂ ಪೈಕಿ ಮೊದಲ ಕಂತಿನಲ್ಲಿ 2,000 ಕೋಟಿ ರೂ ಹಣವನ್ನು ಸಿಡ್​ಬಿಗೆ ವಿತರಿಸಲಾಗುವುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆರ್​​ಬಿಐನಿಂದ ಸದ್ಯದಲ್ಲೇ ಹೊಸ 10 ರೂ ಮತ್ತು 500 ರೂ ನೋಟುಗಳ ಬಿಡುಗಡೆ; ಏನಿವುಗಳ ವಿಶೇಷತೆ?

ಇದನ್ನೂ ಓದಿ
Image
ಆರ್​ಬಿಐನಿಂದ 10 ರೂ, 500 ರೂ ಹೊಸ ನೋಟುಗಳು?
Image
ಅಮೆರಿಕ ಮೇಲೆ ಚೀನಾ ಶೇ. 34 ಹೆಚ್ಚುವರಿ ಸುಂಕ
Image
18,658 ಕೋಟಿ ರೂ ಹೂಡಿಕೆಯಲ್ಲಿ 4 ರೈಲ್ವೆ ಯೋಜನೆಗಳು
Image
ಭಾರತೀಯ ಸ್ಟಾರ್ಟಪ್​​ಗಳನ್ನು ಕುಟುಕಿದ ಸಚಿವರು

ಫಂಡ್​​ಗಳ ಫಂಡ್ ಎನ್ನಲಾದ ಈ ಮಹಾಫಂಡ್​​ನಲ್ಲಿ ಹೆಚ್ಚಿನ ಭಾಗವು ಸೀಡ್ ಫಂಡಿಂಗ್​​ಗೆ ಮೀಸಲಾಗಿರುತ್ತದೆ. ಸೀಡ್ ಫಂಡಿಂಗ್ ಎಂದರೆ ಒಂದು ಸ್ಟಾರ್ಟಪ್ ಅಥವಾ ಉದ್ದಿಮೆ ಆರಂಭಿಸಲು ಉಪಯೋಗ ಮಾಡುವ ಫಂಡ್ ಅಗಿರುತ್ತದೆ. ಡೀಪ್ ಟೆಕ್ ಸ್ಟಾರ್ಟಪ್​​ಗಳಿಗೆ ಉತ್ತೇಜಿಸಲೂ ಈ ಫಂಡ್ ಅನ್ನು ಬಳಸಲಾಗುತ್ತದೆ.

‘ಎಐ, ರೋಬೋಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್, ಮೆಷಿನ್ ಲರ್ನಿಂಗ್, ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್, ಬಯೋಟೆಕ್ ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಗೆ ಎಡೆ ಮಾಡಿಕೊಡುವುದು ನಮ್ಮ ಗುರಿ’ ಎಂದು ಪೀಯೂಶ್ ಗೋಯಲ್ ತಿಳಿಸಿದ್ದಾರೆ.

‘ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅಥವಾ ಇಕೋಸಿಸ್ಟಂ ಉತ್ತಮ ಪಡಿಸಲು ಯಾವುದಾದರೂ ಕ್ರಮದ ಅವಶ್ಯಕತೆ ಇದೆ ಎನಿಸಿದರೆ ಹೆಲ್ಪ್​​ಲೈನ್ ಡೆಸ್ಕ್ ಮೂಲಕ ಅದನ್ನು ವ್ಯಕ್ತಪಡಿಸಬಹುದು’ ಎಂದೂ ಅವರು ಕರೆ ನೀಡಿದ್ದಾರೆ.

ಇದನ್ನೂ ಓದಿ: ಸ್ಟಾರ್ಟಪ್ ಅಂದ್ರೆ ಐಸ್​ಕ್ರೀಮ್ ರೀಪ್ಯಾಕೇಜ್ ಮಾಡೋದಲ್ಲ ಎಂದ ಸಚಿವ ಗೋಯಲ್; ಉದ್ಯಮಿಗಳ ಅಸಮಾಧಾನ

ಹೊಸದಾಗಿ ಉದ್ದಿಮೆ ಸ್ಥಾಪಿಸುತ್ತಿರುವವರಿಗೆ ಬಂಡವಾಳದ ವ್ಯವಸ್ಥೆ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಸರಿಯಾದ ಬಂಡವಾಳ ಸಿಗದೇ ಆರಂಭ ಹಂತದಲ್ಲೇ ಮುರುಟಿಹೋದ ಹಲವು ಸ್ಟಾರ್ಟಪ್​​ಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಫಂಡ್ ಆಫ್ ಫಂಡ್ ಮತ್ತು ಹೆಲ್ಪ್​​ಲೈನ್ ಮುಖಾಂತರ ಈ ಆರಂಭಿಕ ಬಂಡವಾಳ ಸಮಸ್ಯೆಯನ್ನು ನೀಗಿಸಲು ಯತ್ನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!