ಆರ್ಬಿಐನಿಂದ ಸದ್ಯದಲ್ಲೇ ಹೊಸ 10 ರೂ ಮತ್ತು 500 ರೂ ನೋಟುಗಳ ಬಿಡುಗಡೆ; ಏನಿವುಗಳ ವಿಶೇಷತೆ?
RBI to issue new Rs 10 and Rs 500 bank notes: ಆರ್ಬಿಐ ಸದ್ಯದಲ್ಲೇ 10 ರೂ ಹಾಗೂ 500 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಿದೆ. ಕಳೆದ ತಿಂಗಳು 100 ರೂ ಹಾಗೂ 200 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್ಬಿಐ ಹೇಳಿತ್ತು. ಈ ಹೊಸ ನೋಟುಗಳಲ್ಲಿ ನೂತನ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರ ಇರಲಿದೆ.

ಮುಂಬೈ, ಏಪ್ರಿಲ್ 4: ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank of India) ಶೀಘ್ರದಲ್ಲೇ ಎರಡು ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ. 10 ರೂ ಮತ್ತು 500 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು (bank notes) ಬಿಡುಗಡೆ ಮಾಡುತ್ತಿರುವುದಾಗಿ ಆರ್ಬಿಐ ಹೇಳಿದೆ. ಈಗಾಗಲೇ ಇರುವ ಮಹಾತ್ಮ ಗಾಂಧಿ ಸರಣಿಯ ಈ ನೋಟುಗಳಿಗಿಂತ ಹೊಸ ನೋಟುಗಳು ಭಿನ್ನವಾಗಿರುವುದಿಲ್ಲ. ಅದೇ ವಿನ್ಯಾಸವನ್ನು ಒಳಗೊಳ್ಳಲಾಗಿರುತ್ತದೆ. ಆದರೆ, ಆರ್ಬಿಐ ಗವರ್ನರ್ ಹಸ್ತಾಕ್ಷರ ಮಾತ್ರವೇ ಬದಲಾಗುತ್ತದೆ. ಮಿಕ್ಕಂತೆ ಎಲ್ಲವೂ ಹಾಗೇ ಇರುತ್ತದೆ.
ಆರ್ಬಿಐಗೆ ಸಂಜಯ್ ಮಲ್ಹೋತ್ರಾ ಅವರು ಜನವರಿಯಲ್ಲಿ ನೂತನ ಗವರ್ನರ್ ಆಗಿ ನೇಮಕವಾಗಿದ್ದರು. ಅವರಿಗಿಂತ ಮೊದಲು ಶಕ್ತಿಕಾಂತ್ ದಾಸ್ ಅವರು ಆರ್ಬಿಐ ಗವರ್ನರ್ ಆಗಿದ್ದರು. ಸಂಜಯ್ ಮಲ್ಹೋತ್ರಾ ಅವರು ಗವರ್ನರ್ ಆದ ಬಳಿಕ ಎರಡನೇ ಬಾರಿಗೆ ಬ್ಯಾಂಕ್ ನೋಟುಗಳ ಮುದ್ರಣ ಮಾಡಲಾಗುತ್ತಿದೆ. ಹೊಸ ನೋಟಾದ್ದರಿಂದ ಹೊಸ ಗವರ್ನರ್ ಅವರ ಹಸ್ತಾಕ್ಷರವನ್ನು ಸೇರಿಸಲಾಗಿದೆ.
ಕಳೆದ ತಿಂಗಳಷ್ಟೇ ಆರ್ಬಿಐ 100 ರೂ ಹಾಗೂ 200 ರೂ ಮುಖಬೆಲೆ ಬ್ಯಾಂಕ್ ನೋಟುಗಳನ್ನು ಹೊರತರುತ್ತಿರುವುದಾಗಿ ಆರ್ಬಿಐ ಹೇಳಿತ್ತು. ಅವುಗಳಲ್ಲೂ ಹೊಸ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರ ಇರುತ್ತದೆ.
ಇದನ್ನೂ ಓದಿ: 3 ರಾಜ್ಯಗಳು, 4 ರೈಲ್ವೆ ಯೋಜನೆ; 18,658 ಕೋಟಿ ರೂ ಹೂಡಿಕೆ: ಕೇಂದ್ರ ಸಂಪುಟ ಅನುಮೋದನೆ
ಶಕ್ತಿಕಾಂತ ದಾಸ್ ಹಸ್ತಾಕ್ಷರ ಇರುವ ನೋಟುಗಳು ಅಸಿಂಧುವಾಗುತ್ತಾ?
ಹಿಂದಿನ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಸ್ತಾಕ್ಷರ ಇರುವ ಬ್ಯಾಂಕ್ ನೋಟುಗಳು ಸಾಕಷ್ಟಿವೆ. ಅವುಗಳ ಬಳಕೆ ಅಬಾಧಿತವಾಗಿ ಮುಂದುವರಿಸಬಹುದು. ಸದ್ಯ ಚಾಲನೆಯಲ್ಲಿರುವ ಯಾವ ನೋಟು ಕೂಡ ಅಸಿಂಧುಗೊಳ್ಳುವುದಿಲ್ಲ. ಶಕ್ತಿಕಾಂತ ದಾಸ್ ಮಾತ್ರವಲ್ಲ, ಅವರಿಗಿಂತ ಮೊದಲು ಗವರ್ನರ್ ಆಗಿದ್ದವರ ಹಸ್ತಾಕ್ಷರ ಇರುವ ನೋಟುಗಳು ಇನ್ನೂ ಚಾಲನೆಯಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Fri, 4 April 25