AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smartphone Exports: ಭಾರತ ಹೊಸ ಮೈಲಿಗಲ್ಲು; ಒಂದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್​​ಫೋನ್ ರಫ್ತು

India reach new milestone in smartphone exports: 2024-25ರಲ್ಲಿ ಭಾರತದಿಂದ ವಿದೇಶಗಳಿಗೆ ರಫ್ತಾದ ಸ್ಮಾರ್ಟ್​​ಫೋನ್ ಮೌಲ್ಯ 2 ಲಕ್ಷ ಕೋಟಿ ರೂ. ಇದೇ ಮೊದಲ ಬಾರಿಗೆ ಒಂದು ವರ್ಷದಲ್ಲಿ ಸ್ಮಾರ್ಟ್​​ಫೋನ್ ರಫ್ತಿನಲ್ಲಿ ಈ ಮೈಲಿಗಲ್ಲು ಮುಟ್ಟಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

Smartphone Exports: ಭಾರತ ಹೊಸ ಮೈಲಿಗಲ್ಲು; ಒಂದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್​​ಫೋನ್ ರಫ್ತು
ಸ್ಮಾರ್ಟ್​​ಫೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2025 | 4:26 PM

ನವದೆಹಲಿ, ಏಪ್ರಿಲ್ 9: ಭಾರತ ಒಂದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್​​ಫೋನ್​​ಗಳನ್ನು ರಫ್ತು ಮಾಡಿದೆ. 2024-25ರ ವರ್ಷದಲ್ಲಿ ಈ ಮೈಲಿಗಲ್ಲು ಮುಟ್ಟಲಾಗಿದೆ. ಯಾವುದೇ ವರ್ಷದಲ್ಲಿ ಎರಡು ಲಕ್ಷ ಕೋಟಿ ರೂ ಸ್ಮಾರ್ಟ್​​ಫೋನ್ ರಫ್ತು ಮಾಡಲಾಗಿರುವುದು ಇದೇ ಮೊದಲು ಎನ್ನಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​​​ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರಿ ಜಾರಿಗೆ ತಂದಿರುವ ಪಿಎಲ್​​ಐ ಸ್ಕೀಮ್​ನ ಫಲವಾಗಿ ಈ ಐತಿಹಾಸಿಕ ಕ್ಷಣ ದೊರಕಿದೆ ಎಂದು ಅವರು ಹೇಳಿದ್ದಾರೆ.

ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಸ್ಮಾರ್ಟ್​​ಫೋನ್​​ಗಳ ತಯಾರಿಕೆ ಸಖತ್ ಏರಿಕೆ ಆಗುತ್ತಿದೆ. 2023-24ರಲ್ಲಿ ಭಾರತದಿಂದ ರಫ್ತಾದ ಸ್ಮಾರ್ಟ್​​ಫೋನ್​​ಗೆ ಹೋಲಿಸಿದರೆ 2024-25ರಲ್ಲಿ ರಫ್ತಿನಲ್ಲಿ ಶೇ. 54ರಷ್ಟು ಹೆಚ್ಚಳ ಆಗಿದೆ.

ಇದನ್ನೂ ಓದಿ: ವೆಚ್ಚ ಹೆಚ್ಚಳದಲ್ಲೂ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಭಾರತದ ಎಂಎಸ್​ಎಂಇಗಳು: ಸಿಡ್ಬಿ ವರದಿ

ಇದನ್ನೂ ಓದಿ
Image
ಜಿಡಿಪಿ ಶೇ. 6.5, ಹಣದುಬ್ಬರ ಶೇ. 4: ಆರ್​​ಬಿಐ ಅಂದಾಜು
Image
ಇನ್ಮುಂದೆ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಬೇಕಿಲ್ಲ; ಹೊಸ ಆ್ಯಪ್​ ಬಿಡುಗಡೆ
Image
ಶೇ. 37 ಸಣ್ಣ ಉದ್ದಿಮೆಗಳು ಸಾಮರ್ಥ್ಯ ಹೆಚ್ಚಳಕ್ಕೆ ಮುಂದು: ಸಿಡ್ಬಿ ವರದಿ
Image
ರಿನಿವಬಲ್ ಎನರ್ಜಿಯಲ್ಲಿ ಜರ್ಮನಿ ಮೀರಿಸಿದ ಭಾರತ

ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತ ಗಾಢವಾಗಿ ಬೆಸೆದುಕೊಳ್ಳುತ್ತಿರುವುದಕ್ಕೆ ಈ ಸ್ಮಾರ್ಟ್​​ಫೋನ್ ರಫ್ತು ಹೆಚ್ಚಳವೇ ಕನ್ನಡಿ ಹಿಡಿದಿದೆ. ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಭಾರತದ ಎಂಎಸ್​​ಎಂಇಗಳು ಪ್ರಮುಖ ಕೊಂಡಿಗಳಾಗುತ್ತಿವೆ. ಉದ್ಯೋಗಸೃಷ್ಟಿಯೂ ಹೆಚ್ಚಾಗುತ್ತಿದೆ. ದೇಶದೊಳಗೆ ಆಂತರಿಕ ಎಲೆಕ್ಟ್ರಾನಿಕ್ಸ್ ತಯಾರಿಕೆಯ ವ್ಯವಸ್ಥೆ ಬಹಳ ವೇಗದಲ್ಲಿ ವಿಸ್ತಾರಗೊಳ್ಳುತ್ತಿದೆ ಎಂದು ಕೇಂದ್ರ ಸಚಿವರು ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಬರೆದಿದ್ದಾರೆ.

ಆ್ಯಪಲ್ ಉತ್ಪನ್ನಗಳ ರಫ್ತು ಅತಿಹೆಚ್ಚು

ಭಾರತದಿಂದ 2024-25ರಲ್ಲಿ ರಫ್ತಾದ ಸ್ಮಾರ್ಟ್​​ಫೋನ್​​ನಲ್ಲಿ ಐಫೋನ್ ಪಾಲು ಶೇ. 70ರಷ್ಟಿದೆ. ಭಾರತದಿಂದ ರಫ್ತಾದ ಐಫೋನ್​​ನಲ್ಲಿ ತಮಿಳುನಾಡಿನ ಫಾಕ್ಸ್​​ಕಾನ್ ಘಟಕದಲ್ಲಿ ತಯಾರಾದ ಐಫೋನ್​​ಗಳೇ ಅರ್ಧದಷ್ಟಿವೆ.

ಆ್ಯಪಲ್​​ನ ಐಫೋನ್ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಲ್ಲಿ ಫಾಕ್ಸ್​​​ಕಾನ್ ಪ್ರಮುಖವಾದುದು. ಭಾರತದಲ್ಲಿ ಫಾಕ್ಸ್​​ಕಾನ್ ಅಲ್ಲದೇ ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಆ್ಯಪಲ್ ಉತ್ಪನ್ನಗಳನ್ನು ತಯಾರಿಸುತ್ತವೆ.

ಇದನ್ನೂ ಓದಿ: ಸೌರಶಕ್ತಿ ಮತ್ತು ವಾಯುಶಕ್ತಿ ಉತ್ಪಾದನೆಯಲ್ಲಿ ಜರ್ಮನಿಯನ್ನು ಹಿಂದಿಕ್ಕಿದ ಭಾರತ; ಈಗ ನಾವೇ ವಿಶ್ವದ ನಂ. 3

ಕರ್ನಾಟಕದ ಕೋಲಾರದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಸಾಕಷ್ಟು ಐಫೋನ್ ಅಸೆಂಬ್ಲಿಂಗ್ ನಡೆಯುತ್ತಿದೆ. ಮುಂಚೆ ಇದು ವಿಸ್ಟ್ರಾನ್ ಕಂಪನಿಯ ಫ್ಯಾಕ್ಟರಿಯಾಗಿತ್ತು. ಅದನ್ನು ಟಾಟಾ ಎಲೆಕ್ಟ್ರಾನಿಕ್ಸ್ ಖರೀದಿ ಮಾಡಿತು. ತಮಿಳುನಾಡಿನಲ್ಲಿರುವ ಪೆಗಾಟ್ರಾನ್ ಘಟಕದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಶೇ. 60ರಷ್ಟು ಪಾಲು ಹೊಂದಿದೆ. ಹೀಗಾಗಿ, ಫಾಕ್ಸ್​​ಕಾನ್ ಬಳಿಕ ಟಾಟಾ ಎಲೆಟ್ರಾನಿಕ್ಸ್ ಪ್ರಮುಖ ಸ್ಮಾರ್ಟ್​​ಫೋನ್ ಅಸೆಂಬ್ಲಿಂಗ್ ಕಂಪನಿ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ