AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ಯಾರಿಫ್ ಎಫೆಕ್ಟ್; ಭಾರತದಲ್ಲಿ ಮೊಬೈಲ್ ಬೆಲೆ ಮತ್ತಷ್ಟು ಕಡಿಮೆಗೊಳ್ಳುತ್ತಾ? ಇದು ಹೇಗೆ ಸಾಧ್ಯ?

US China tariff war may benefit India: ಭಾರತದಲ್ಲಿ ಮುಂದಿನ ದಿನಗಳಲ್ಲಿ ಮೊಬೈಲ್, ಟಿವಿ, ಲ್ಯಾಪ್​ಟಾಪ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಇಳಿಕೆಯಾಗಬಹುದು. ಅಮೆರಿಕದ ಟ್ಯಾರಿಫ್ ಪರಿಣಾಮವಾಗಿ ಚೀನಾದ ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ತಯಾರಕರು ಕಂಗಾಲಾಗಿದ್ದು, ಹೆಚ್ಚಾಗಿರುವ ದಾಸ್ತಾನನ್ನು ಕರಗಿಸಲು ಡಿಸ್ಕೌಂಟ್ ಕೊಡುತ್ತಿದ್ದಾರೆ. ಇದರಿಂದಾಗಿ ಭಾರತದ ಎಲೆಕ್ಟ್ರಾನಿಕ್ಸ್ ಕಂಪನಿಗಳ ಉತ್ಪಾದನಾ ವೆಚ್ಚ ಕಡಿಮೆ ಆಗಬಹುದು ಎನ್ನಲಾಗಿದೆ.

ಟ್ಯಾರಿಫ್ ಎಫೆಕ್ಟ್; ಭಾರತದಲ್ಲಿ ಮೊಬೈಲ್ ಬೆಲೆ ಮತ್ತಷ್ಟು ಕಡಿಮೆಗೊಳ್ಳುತ್ತಾ? ಇದು ಹೇಗೆ ಸಾಧ್ಯ?
ಸ್ಮಾರ್ಟ್​​ಫೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 10, 2025 | 12:32 PM

ನವದೆಹಲಿ, ಏಪ್ರಿಲ್ 10: ಅಮೆರಿಕ ಮತ್ತು ಚೀನಾ ನಡುವೆ ಟ್ಯಾರಿಫ್ ಸಮರ (China US Tariff war) ಮಿತಿಮೀರುತ್ತಿರುವುದು ಭಾರತೀಯರಿಗೆ ಪರೋಕ್ಷವಾಗಿ ಸಹಾಯವಾಗುವಂತಿದೆ. ಭಾರತದ ಎಲೆಕ್ಟ್ರಾನಿಕ್ಸ್ ಕಂಪನಿಗಳಿಗೆ ಚೀನಾದಿಂದ ಕಡಿಮೆ ಬೆಲೆಗೆ ಬಿಡಿಭಾಗಗಳು ಪೂರೈಕೆ ಆಗುತ್ತಿವೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಚೀನಾದ ಹಲವ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಕರು ಭಾರತೀಯ ಕಂಪನಿಗಳಿಗೆ ಶೇ. 5ರಷ್ಟು ರಿಯಾಯಿತಿ ನೀಡಲು ಆರಂಭಿಸಿದ್ದಾರೆ. ಈ ಭಾರತೀಯ ಕಂಪನಿಗಳು ತಮ್ಮ ಅಂತಿಮ ಉತ್ಪನ್ನದ ಬೆಲೆಯನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ. ಇದರಿಂದಾಗಿ ಮೊಬೈಲ್ ಫೋನ್, ಟವಿ ಹಾಗೂ ಇತರ ಗೃಹ ಉಪಕರಣಗಳ ಬೆಲೆ ತಗ್ಗುವ ಸಾಧ್ಯತೆ ದಟ್ಟವಾಗಿದೆ ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.

ಚೀನೀ ಕಂಪನಿಗಳಲ್ಲಿ ಹೆಚ್ಚಾದ ದಾಸ್ತಾನು?

ಅಮೆರಿಕ ಮತ್ತು ಚೀನಾದ ಮಧ್ಯೆ ಟ್ಯಾರಿಫ್ ಸಮರ ಅತಿರೇಕಕ್ಕೆ ಹೋಗುತ್ತಿದೆ. ಡೊನಾಲ್ಡ್ ಟ್ರಂಪ್ ಆರಂಭಿಸಿದ ಈ ಸುಂಕ ಸಮರ ಕೊನೆಗೆ ಎಲ್ಲಿಗೆ ಹೋಗಿ ಮುಟ್ಟುತ್ತದೋ ಸದ್ಯಕ್ಕೆ ಅಂದಾಜಿಸಲು ಆಗುವುದಿಲ್ಲ. ಅಮೆರಿಕದ ಸುಂಕ ಹೇರಿಕೆಗೆ ಪ್ರತಿಯಾಗಿ ಚೀನಾವೂ ಪ್ರತಿಸುಂಕ ಹಾಕಿದೆ. ಈ ಸುಂಕ ಹೇರಿಕೆ ಸರಣಿ ಮುಂದುವರಿದು ಈಗ ಅಮೆರಿಕ ಚೀನಾದ ಮೇಲೆ ಹಾಕಿರುವ ಆಮದು ಸುಂಕ ಶೇ. 125ಕ್ಕೆ ಏರಿಬಿಟ್ಟಿದೆ. ಇದಕ್ಕೆ ಪ್ರತಿಯಾಗಿ ಚೀನಾ ಸುಂಕ ಏರಿಸಿದರೆ ತಾನು ಇನ್ನೂ ಮುಂದುವರಿಯುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿಮೌಲ್ಯಯುತ ಏರ್​ಲೈನ್ಸ್ ಕಂಪನಿ ಎನಿಸಿದ ಭಾರತದ ಇಂಡಿಗೋ

ಇದನ್ನೂ ಓದಿ
Image
ಭಾರತದ ಇಂಡಿಗೋ, ವಿಶ್ವದ ಅತಿಹೆಚ್ಚು ಮೌಲ್ಯದ ಏರ್​​ಲೈನ್ಸ್
Image
ಹೊಸ ಆಧಾರ್ ಕಾನೂನು ತಯಾರಿಕೆಗೆ ಸರ್ಕಾರ ಮುಂದು
Image
ಅಮೆರಿಕದ ಎಲ್ಲಾ ಆಮದು ಮೇಲೆ ಶೇ. 84 ಸುಂಕ ವಿಧಿಸಿದ ಚೀನಾ
Image
ಭಾರತದಿಂದ 2 ಲಕ್ಷ ಕೋಟಿ ರೂ ಸ್ಮಾರ್ಟ್​​ಫೋನ್ ರಫ್ತು

ಈ ಅತಿರೇಕ ಸುಂಕ ಯುದ್ಧ ಭಾರತದ ಕೆಲ ಕಂಪನಿಗಳಿಗೆ ವರವಾಗಿ ಪರಿಣಮಿಸಿದೆ. ಅಮೆರಿಕಕ್ಕೆ ರಫ್ತು ಮಾಡಲಾಗದೆ ಚೀನಾದ ಎಲೆಕ್ಟ್ರಾನಿಕ್ ಕಂಪನಿಗಳ ಉತ್ಪನ್ನಗಳು ರಾಶಿ ರಾಶಿ ಉಳಿದುಹೋಗಿವೆ. ಇವುಗಳನ್ನು ಸಿಕ್ಕಷ್ಟು ಬೆಲೆಗೆ ಮಾರುವ ಪರಿಸ್ಥಿತಿ ಈ ಕಂಪನಿಗಳಿಗೆ ಬಂದಿದೆ. ಹೀಗಾಗಿ, ಭಾರತೀಯ ಸಂಸ್ಥೆಗಳಿಗೆ ಈ ಚೀನೀ ಕಂಪನಿಗಳು ರಿಯಾಯಿತಿ ದರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ಮುಂದಾಗಿವೆ.

ಚೀನಾದಿಂದ ಕಡಿಮೆ ಬೆಲೆಗೆ ಬಿಡಿಭಾಗಗಳು ಸಿಕ್ಕ ಬಳಿಕ ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿಗಳ ಉತ್ಪಾದನಾ ವೆಚ್ಚ ಕಡಿಮೆಗೊಳ್ಳಲಿದೆ. ಈ ಉಳಿತಾಯದಲ್ಲಿ ಕೆಲ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ಈ ಕಂಪನಿಗಳು ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ, ಮೊಬೈಲ್ ಫೋನ್, ಲ್ಯಾಪ್​​ಟಾಪ್, ಫ್ರಿಡ್ಜ್, ಟಿವಿ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಗ್ಗದ ದರದಲ್ಲಿ ದೊರಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Thu, 10 April 25

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ