Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan Samman Nidhi: ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?

ರೈತರಿಗಾಗಿಯೇ ಮೀಸಲಾಗಿರುವ ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು ತಿಳಿದುಕೊಳ್ಳುವುದು ಹೇಗೆ ಎಂಬ ವಿವರಗಳು ಇಲ್ಲಿವೆ.

PM Kisan Samman Nidhi: ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮದಲ್ಲಿ (ಸಂಗ್ರಹ ಚಿತ್ರ)
Follow us
Srinivas Mata
|

Updated on:Apr 21, 2021 | 3:55 PM

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಾಗೆ ಫೆಬ್ರವರಿ 24, 2019ರಿಂದ ಚಾಲನೆ ಸಿಕ್ಕಿದೆ. ಪಿಎಂ ಕಿಸಾನ್ ರೈತ ಸಮ್ಮಾನ್ ನಿಧಿಗೆ ಭಾರತ ಸರ್ಕಾರ ಹಣ ಒದಗಿಸುತ್ತದೆ. ಸರ್ಕಾರವು ಪ್ರತಿ ವರ್ಷ 6000 ರೂಪಾಯಿಯ ಒಟ್ಟು ಮೊತ್ತವನ್ನು 3 ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡುತ್ತದೆ. ಭಾರತ ಸರ್ಕಾರದ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ, ಪಿಎಂ ಕಿಸಾನ್ ಯೋಜನಾದ ಸ್ಥಿತಿಯನ್ನು (Status)ತಿಳಿಯಬಹುದು. ಈ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಭಾರತ ಸರ್ಕಾರದ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ. ಯೋಜನೆಗೆ ನೋಂದಣಿ ಮಾಡಿದ ಮೇಲೆ ಸ್ಥಿತಿ ಪರಿಶೀಲಿಸಬಹುದು. ನೀವು ಫಲಾನುಭವಿ ಹೌದಾ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಹಂತಗಳು ಹೀಗಿವೆ:

1) ಮೊದಲಿಗೆ ಪಿಎಂ ಕಿಸಾನ್ ಯೋಜನೆ ಅಧಿಕೃತ ವೆಬ್​ಸೈಟ್​ಗೆ ತೆರಳಿ. 2) ಫಾರ್ಮರ್ಸ್ ಕಾರ್ನರ್​ಗೆ ಭೇಟಿ ನೀಡಿ, ಫಲಾನುಭವಿಗಳ ಸ್ಥಿತಿ (Beneficiary Status) ಮೇಲೆ ಕ್ಲಿಕ್ ಮಾಡಿ. 3) ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ. 4) Get Data ಎಂಬುದರ ಮೇಲೆ ಕ್ಲಿಕ್ ಮಾಡಿ, ಸ್ಥಿತಿಯನ್ನು ತಿಳಿಯಿರಿ.

ಯೋಜನೆಯ ಅರ್ಹತೆ ಮಾನದಂಡಗಳು 1) ಭಾರತದ ಯಾವುದಾದರೂ ರಾಜ್ಯದ ರೈತ ಆಗಿರಬೇಕು 2) 18ರಿಂದ 40 ವರ್ಷದ ಮಧ್ಯೆ ವಯಸ್ಸಿರಬೇಕು. 3) ಯಾವುದೇ ಸಾಂಸ್ಥಿಕವಾದ ಭೂಮಿ ಹೊಂದಿರಬಾರದು. 4) ಈಚಿನ ಅಸೆಸ್​ಮೆಂಟ್ ವರ್ಷದಲ್ಲಿ ತೆರಿಗೆ ಪಾವತಿದಾರರಾಗಿರಬಾರದು. 5) ರೈತ ಅಥವಾ ರೈತ ಕುಟುಂಬ ಸದಸ್ಯರು ಸದ್ಯಕ್ಕಾಗಲೀ ಅಥವಾ ಈ ಹಿಂದೆಯಾಗಲೀ ಸಾಂವಿಧಾನಿಕ ಹುದ್ದೆಯಲ್ಲಿ ಇರಬಾರದು. 6) ಆ ರೈತ ಸಚಿವ ಆಗಿರಬಾರದು. * ರಾಜ್ಯಸಭಾ ಸದಸ್ಯ ಆಗಿರಬಾರದು * ಲೋಕಸಭಾ ಸದಸ್ಯ ಆಗಿರಬಾರದು * ರಾಜ್ಯ ವಿಧಾನಸಭಾ ಸದಸ್ಯ ಆಗಿರಬಾರದು * ಪಾಲಿಕೆ ಮೇಯರ್ ಅಥವಾ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆಗಿರಬಾರದು 7) ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ, ಸಂಬಂಧಿತ ಕಚೇರಿಗಳು ಅಥವಾ ಸರ್ಕಾರದಿಂದ ಹಣಕಾಸು ನೆರವು ದೊರೆಯುವ ಸ್ವಾಯತ್ತ ಸಂಸ್ಥೆಗಳ ಉದ್ಯೋಗಿ ಅಥವಾ ಪಿಂಚಣಿದಾರ ಆಗಿರಬಾರದು. 8) ತಿಂಗಳಿಗೆ 10,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಪೆನ್ಷನ್ ತೆಗೆದುಕೊಳ್ಳುತ್ತಿರುವ ಪಿಂಚಣಿದಾರ ಆಗಿರಬಾರದು. 9) ವೃತ್ತಿಪರ ವೈದ್ಯ, ವಕೀಲ, ವಾಸ್ತಿಶಿಲ್ಪಿ, ಎಂಜಿನಿನಿಯರ್ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗಿರಬಾರದು.

ಪಿಎಂ ಕಿಸಾನ್ ನಿಧಿ ಅನುಕೂಲಗಳು 1) ಈ ಯೋಜನೆ ಅಡಿಯಲ್ಲಿ ಹಣಕಾಸು ವರ್ಷದಲ್ಲಿ ರೈತರಿಗೆ 6000 ರೂಪಾಯಿ ಆದಾಯ ಬರುತ್ತದೆ. ನಾಲ್ಕು ತಿಂಗಳಿಗೆ ಒಮ್ಮೆ 2000 ರೂಪಾಯಿಯಂತೆ 3 ಕಂತಿನಲ್ಲಿ ಹಣವನ್ನು ಸರ್ಕಾರದಿಂದ ನೀಡಲಾಗುತ್ತದೆ. 2) ಸರ್ಕಾರವು ಹಣವನ್ನು ರೈತರ ಖಾತೆಗೇ ನೇರವಾಗಿ ವರ್ಗಾವಣೆ ಮಾಡುತ್ತದೆ. ಹಣವನ್ನು ತಕ್ಷಣವೇ ರೈತರು ಖಾತೆಯಿಂದ ವಿಥ್​ಡ್ರಾ ಮಾಡಬಹುದು. 3) ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ದೊರೆಯುತ್ತದೆ.

ಇದನ್ನೂ ಓದಿ: ವಾರ್ಷಿಕ 6 ಸಾವಿರ ಸಿಗುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಹೇಗೆ? ಇಲ್ಲಿದೆ ವಿವರ

(How to check PM Kisan Samman Nidhi Yojana beneficiaries list? Here is an explainer)

Published On - 3:50 pm, Wed, 21 April 21

Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ