ವಾರ್ಷಿಕ 6 ಸಾವಿರ ಸಿಗುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಹೇಗೆ? ಇಲ್ಲಿದೆ ವಿವರ

PM Kisan Samman Nidhi Scheme: ದೇಶದ 1.25 ಕೋಟಿ ರೈತ ಸಮುದಾಯವನ್ನು ತಲುಪುವ ಬೃಹತ್ ಯೋಜನೆ ಇದಾಗಿದ್ದು, ₹ 75,000 ಕೋಟಿ ಹಣವನ್ನು ಪಿಎಂ ಕಿಸಾನ್ ಯೋಜನೆಗೆ ಮೀಸಲಿಡಲಾಗಿದೆ.

ವಾರ್ಷಿಕ 6 ಸಾವಿರ ಸಿಗುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಹೇಗೆ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 09, 2021 | 4:01 PM

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಿತ್ತು. ಮೂರು ಕಂತುಗಳಲ್ಲಿ ತಲಾ ₹ 2000, ವಾರ್ಷಿಕ ₹ 6000 ಹಣವನ್ನು ರೈತರಿಗೆ ಒದಗಿಸುವ ಮೂಲಕ ಆರ್ಥಿಕ ಚೇತರಿಕೆಗೆ ಸಣ್ಣ ದಾರಿ ಮಾಡಿಕೊಡುವುದು ಈ ಯೋಜನೆಯ ಉದ್ದೇಶ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದಾಗಿದು. ಈ ಮೂಲಕ ವಾರ್ಷಿಕ ₹ 6000 ಮೊತ್ತವನ್ನು ಸರ್ಕಾರದಿಂದ ನೇರವಾಗಿ ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಸಂಕ್ಷಿಪ್ತವಾಗಿ ಪಿಎಂ ಕಿಸಾನ್ ಯೋಜನೆ ಎಂದೂ ಕರೆಯುತ್ತಾರೆ. 2018ರ ಡಿಸೆಂಬರ್ 1ರಂದು ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಸಹಕಾರಿ ಆಗಬಲ್ಲ ಈ ಯೋಜನೆಯನ್ನು ಜಾರಿಗೊಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಉಪಸ್ಥಿತರಿದ್ದರು. ದೇಶದ ರೈತ ಸಮುದಾಯದ 1.25 ಕೋಟಿ ರೈತರನ್ನು ತಲುಪುವ ಬೃಹತ್ ಯೋಜನೆ ಇದಾಗಿದ್ದು, ₹ 75,000 ಕೋಟಿ ಹಣವನ್ನು ಪಿಎಂ ಕಿಸಾನ್ ಯೋಜನೆಗೆ ಮೀಸಲಿಡಲಾಗಿದೆ.

ನೀವು ಫಲಾನುಭವಿ ಆಗಬಹುದೇ? ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಈ ಯೋಜನೆಯ ಸದುಪಯೋಗ ಪಡೆಯಬಹುದು. ಎರಡು ಹೆಕ್ಟೇರ್​ವರೆಗಿನ ಕೃಷಿ ಭೂಮಿ ಹೊಂದಿರುವ ಯಾವುದೇ ರೈತರು ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.

ಇನ್ನೂ ನೋಂದಣಿ ಮಾಡಿಸಿಲ್ಲವೇ? ನೀವು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಉಪಯೋಗ ಪಡೆಯುವ ಅರ್ಹತೆ ಹೊಂದಿದ್ದರೂ ಇದುವರೆಗೂ ನೋಂದಣಿ ಆಗಿಲ್ಲವೇ? ಹಾಗಾದರೆ ತಡ ಮಾಡಬೇಡಿ, ತಕ್ಷಣವೇ ನೋಂದಣಿ ಆಗಿ. ಈ ತಿಂಗಳ ಕೊನೆ, ಅಂದರೆ ಮಾರ್ಚ್ 31ರ ಒಳಗೆ ನೋಂದಣಿ ಆದರೆ ₹ 4000 ವನ್ನು ಪಡೆಯಬಹುದು.

ಹೇಗೆ ನೋಂದಣಿ ಮಾಡಬಹುದು? ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅತ್ಯಂತ ಸುಲಭವಾಗಿ ನೋಂದಣಿ ಆಗಬಹುದು. ಹತ್ತಿರದ ಕಂಪ್ಯೂಟರ್/ಇಂಟರ್​ನೆಟ್ ಕೇಂದ್ರಕ್ಕೆ ತೆರಳಿ, ಇಲ್ಲವೇ ಹಲವು ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಕೇಂದ್ರಗಳೂ ಸುತ್ತಮುತ್ತಲು ಇರುತ್ತವೆ. ಅಂತಹ ಕೇಂದ್ರಗಳ ಮೂಲಕವೂ ಈ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬಹುದು. ಇಲ್ಲವೇ, PM Kisan ವೆಬ್​ಸೈಟ್​ಗೆ ತೆರಳ, ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ, ನ್ಯೂ ಫಾರ್ಮರ್ಸ್ ರಿಜಿಸ್ಟ್ರೇಶನ್ ಗೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಅಧಾರ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ ಬರೆಯಿರಿ. ನಂತರ ನಿಮ್ಮ ಖಾಸಗಿ ವಿವರಗಳನ್ನು ಅಲ್ಲಿ ಕೇಳಿದಂತೆ ತುಂಬಿ, ಬ್ಯಾಂಕ್ ಖಾತೆಯನ್ನೂ ನಮೂದಿಸಿ.

ಬೇಕಾಗುವ ಕಾಗದಪತ್ರಗಳು ಇಂತಿವೆ ಆಧಾರ ಕಾರ್ಡ್ ಭೂ ಒಡೆತನದ ದಾಖಲಾತಿ ಬ್ಯಾಂಕ್ ಖಾತೆಯ ವಿವರ

ಈ ವಿವರಗಳನ್ನು ನಮೂದಿಸಿ ಈ ಯೋಜನೆಗೆ ಅರ್ಹರಿದ್ದಲ್ಲಿ ನೀವೂ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಈ ಮೂಲಕ ವಾರ್ಷಿಕ ₹6000ವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.

ಇದನ್ನೂ ಓದಿ: Karnataka Budget 2021: ಕೃಷಿ ಮತ್ತು ಪೂರಕ ಚಟುವಟಿಕೆಗೆ ₹ 31,028 ಕೋಟಿ ಅನುದಾನ, ರೈತ ಸಮುದಾಯಕ್ಕೆ ಶಕ್ತಿ ತುಂಬಲು ಹಲವು ಯೋಜನೆ

ಕೃಷಿ ರಾಯಭಾರಿಯಾಗಿ ನಟ ದರ್ಶನ್‌ ಅಧಿಕಾರ ಸ್ವೀಕಾರ; ದರ್ಶನ್ ಒಬ್ಬ ಹೃದಯ ಶ್ರೀಮಂತಿಕೆಯ ವ್ಯಕ್ತಿ- ಬಿ.ಸಿ ಪಾಟೀಲ್​

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ