39 ವರ್ಷದ ಪ್ರೇಮಿಯೊಂದಿಗೆ ಬ್ರೇಕಪ್ ಮಾಡಿಕೊಂಡ 85ರ ಅಜ್ಜಿಗೆ ಹೊಸ ಬಾಯ್​ಫ್ರೆಂಡ್ ಬೇಕಂತೆ!

85 ವರ್ಷದ ಹ್ಯಾಟೀ ರೆಟ್ರೋಜ್ ಎಂಬ ಅಜ್ಜಿಗೆ ತಮ್ಮ ಇಳಿವಯಸ್ಸಿನಲ್ಲೂ ಬಾಯ್​ಫ್ರೆಂಡ್ ಜೊತೆ ಸುತ್ತಾಡುವ ಬಯಕೆ. ಅದಕ್ಕಾಗಿ 'ಬಂಬಲ್' ಎಂಬ ಡೇಟಿಂಗ್ ವೆಬ್​ಸೈಟ್​ನಲ್ಲಿ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

39 ವರ್ಷದ ಪ್ರೇಮಿಯೊಂದಿಗೆ ಬ್ರೇಕಪ್ ಮಾಡಿಕೊಂಡ 85ರ ಅಜ್ಜಿಗೆ ಹೊಸ ಬಾಯ್​ಫ್ರೆಂಡ್ ಬೇಕಂತೆ!
39 ವರ್ಷದ ಪ್ರೇಮಿಯೊಂದಿಗೆ ಬ್ರೇಕಪ್ ಮಾಡಿಕೊಂಡ 85ರ ಅಜ್ಜಿಗೆ ಹೊಸ ಬಾಯ್​ಫ್ರೆಂಡ್ ಬೇಕಂತೆ!
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 09, 2021 | 5:12 PM

ಆ ಅಜ್ಜಿಗೆ 85 ವರ್ಷ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಆಡಿಸಿಕೊಂಡಿರಬೇಕಾದ ವಯಸ್ಸಿನಲ್ಲಿ ಆಕೆಗೂ ಒಬ್ಬ ಬಾಯ್​ಫ್ರೆಂಡ್ ಬೇಕು ಎನಿಸಿತ್ತು! ಅದಕ್ಕಾಗಿಯೇ 39 ವರ್ಷದ ವ್ಯಕ್ತಿಯನ್ನು ಪ್ರೀತಿಸಿದ್ದ ಆಕೆ ಇದೀಗ ಆತನ ಜೊತೆಗೂ ಬ್ರೇಕಪ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮತ್ತೊಬ್ಬ ಬಾಯ್​ಫ್ರೆಂಡ್​ಗಾಗಿ ಹುಡುಕಾಟ ನಡೆಸಿದ್ದಾರೆ!

65 ವರ್ಷವಾಗುತ್ತಿದ್ದಂತೆ ‘ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ’ ಎಂದು ಹಲುಬುತ್ತಾ ನಮ್ಮ ಆಯಸ್ಸೇ ಮುಗಿದು ಹೋಯಿತು ಎಂದು ಮೂಲೆ ಹಿಡಿಯುವ ಕಾಲವಿದು. ಆದರೆ, ನ್ಯೂಯಾರ್ಕ್​ನ 85 ವರ್ಷದ ಹ್ಯಾಟೀ ರೆಟ್ರೋಜ್ ಎಂಬ ಅಜ್ಜಿಗೆ ತಮ್ಮ ಇಳಿವಯಸ್ಸಿನಲ್ಲೂ ಬಾಯ್​ಫ್ರೆಂಡ್ ಜೊತೆ ಸುತ್ತಾಡುವ ಬಯಕೆ. ಅದಕ್ಕಾಗಿ ‘ಬಂಬಲ್’ ಎಂಬ ಡೇಟಿಂಗ್ ವೆಬ್​ಸೈಟ್​ನಲ್ಲಿ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಂಡ 85 ವರ್ಷದ ಅಜ್ಜಿ ತಮಗೆ ಬೇಕಾದ ಗುಣವಿರುವ ಬಾಯ್​ಫ್ರೆಂಡ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹ್ಯಾಟಿ ರೆಟ್ರೋಜ್ ಅವರಿಗೆ 48 ವರ್ಷವಾಗಿದ್ದಾಗ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದರು. ಅದಾದ ಮೇಲೆ ಅವರು ಡೇಟಿಂಗ್ ಮಾಡಿದವರೆಲ್ಲರೂ ಯುವಕರೇ. ತಮಗಿಂತ 10-20 ವರ್ಷ ಚಿಕ್ಕವರ ಜೊತೆಗೂ ಡೇಟಿಂಗ್ ಮಾಡಿದ್ದ ಅಜ್ಜಿ ಕಳೆದ ವರ್ಷ ತಮಗಿಂತ 46 ವರ್ಷ ಕಿರಿಯ ವ್ಯಕ್ತಿಯನ್ನು ಬಾಯ್​ಫ್ರೆಂಡ್ ಆಗಿ ಆಯ್ಕೆ ಮಾಡಿಕೊಂಡಿದ್ದರು. ಆದರೀಗ ಆತನ ಜೊತೆಗೂ ಬ್ರೇಕಪ್ ಆಗಿದ್ದು, ‘ನನಗೆ ಗುಣವಂತನಾದ ಹುಡುಗ ಬೇಕಾಗಿದ್ದಾನೆ’ ಎಂದು ಡೇಟಿಂಗ್ ಆ್ಯಪ್​ನಲ್ಲಿ ಬಾಯ್​ಫ್ರೆಂಡ್​ ಬೇಟೆಗಿಳಿದಿದ್ದಾರೆ.

‘ನಾನೀಗ ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ನನ್ನ ಕೆಲವು ಸ್ನೇಹಿತೆಯರ ಬಂಬಲ್ ವೆಬ್​ಸೈಟ್ ಮೂಲಕ ಬಾಯ್​ಫ್ರೆಂಡ್ ಅನ್ನು ಹುಡುಕಿಕೊಂಡಿದ್ದಾರೆ. ಹಾಗಾಗಿ, ನಾನು ಕೂಡ ಅಲ್ಲಿ ನನ್ನ ಹೆಸರು ನೋಂದಾಯಿಸಿಕೊಂಡಿದ್ದೇನೆ. ನನಗೆ ವಯಸ್ಸಾಗಿದೆ ಎಂದು ಮೂಗು ಮುರಿಯಬೇಡಿ. ನಾನು ಈಗಲೂ ಬಹಳ ರೊಮ್ಯಾಂಟಿಕ್ ಆಗಿದ್ದೇನೆ, ನಿಮಗೆ ನಿಜವಾದ ಪ್ರೀತಿ ಮತ್ತು ಖುಷಿಯನ್ನು ನೀಡುತ್ತೇನೆ. 85ರ ವಯಸ್ಸಿನಲ್ಲೂ ಮತ್ತೆ ಲವ್ ಮಾಡುವುದಕ್ಕೆ ಬಹಳ ಮಜವೆನಿಸುತ್ತಿದೆ’ ಎಂದು ಹ್ಯಾಟಿ ತಮ್ಮ ಬಂಬಲ್ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ.

‘ನಿನ್ನೆಯಷ್ಟೇ ಇಸ್ರೇಲ್​ನ ಯುವಕನೊಬ್ಬ ನನಗೆ ಮೆಸೇಜ್ ಮಾಡಿದ್ದ. ಆತ ನನ್ನ ಬಾಯ್​ಫ್ರೆಂಡ್ ಆಗಲು ರೆಡಿ ಇದ್ದಾನಂತೆ. ಆತನಿಗೆ ನನ್ನ ಮೇಲೆ ಕ್ರಶ್​ ಆಗಿದೆಯಂತೆ. ಆ ಮೆಸೇಜ್ ಓದಿ ನನಗೆ ಬಹಳ ಖುಷಿ ಆಯಿತು. ಆತ ಕೂಡ ತುಂಬ ಕ್ಯೂಟ್ ಆಗಿದ್ದಾನೆ’ ಎಂದು 85 ವರ್ಷದ ಅಜ್ಜಿ ಡೇಟಿಂಗ್ ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹ್ಯಾಟಿ ರೆಟ್ರೋಜ್ ಅವರ ಗಂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಆಕೆಗೆ ತನ್ನಿಬ್ಬರ ಮಕ್ಕಳನ್ನು ಕಾಲೇಜಿಗೆ ಕಳುಹಿಸಿ, ಓದಿಸಲು ಬಹಳ ಕಷ್ಟವಾಗಿತ್ತು. ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದ ಗಂಡನ ವರ್ತನೆಯಿಂದ ಬೇಸತ್ತು ಆಕೆ 1984ರಲ್ಲಿ ತನ್ನ ಗಂಡನಿಗೆ ಡೈವೋರ್ಸ್​ ಕೊಟ್ಟಿದ್ದರು. ಅದಾದ ಮೇಲೆ ಬೇರೆ ಮದುವೆಯಾಗದ ಅವರು ತನಗಿಂತ ಚಿಕ್ಕ ವಯಸ್ಸಿನವರ ಜೊತೆ ಡೇಟಿಂಗ್ ಮಾಡುವುದರಲ್ಲೇ ಖುಷಿ ಕಂಡುಕೊಂಡಿದ್ದಾರೆ. ಹ್ಯಾಟಿ ಅವರಿಗೆ ಇಬ್ಬರ ಮಕ್ಕಳಿದ್ದು, ಮೂವರು ಮೊಮ್ಮಕ್ಕಳು ಹಾಗೂ ಒಬ್ಬ ಮರಿಮಗ ಕೂಡ ಇದ್ದಾರೆ.

ಹ್ಯಾಟಿ ಅವರ ಬಗ್ಗೆ ನ್ಯೂಯಾರ್ಕ್​ನ ಅನೇಕ ಪತ್ರಿಕೆಗಳಲ್ಲಿ ವಿಶೇಷ ಲೇಖನಗಳು ಕೂಡ ಪ್ರಕಟವಾಗಿವೆ. ಆಕೆ ನೀಡಿರುವ ಸಂದರ್ಶನದಲ್ಲಿ ತಮಗೆ 35 ವರ್ಷದೊಳಗಿನ ವ್ಯಕ್ತಿಗಳ ಜೊತೆ ಡೇಟಿಂಗ್ ನಡೆಸಲು ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಇಳಿವಯಸ್ಸಿನಲ್ಲೂ ಪ್ರೀತಿ, ರೊಮ್ಯಾನ್ಸ್​ ಗುಂಗಿನಲ್ಲಿರುವ ಅಜ್ಜಿಯನ್ನು ಕಂಡು ಅನೇಕರು ಹುಬ್ಬೇರಿಸಿದ್ದಾರೆ. ಹಲವರು ಟೀಕೆಯನ್ನೂ ಕೂಡ ಮಾಡಿದ್ದಾರೆ. ಆದರೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಹ್ಯಾಟಿ ಸ್ಥಳೀಯ ಪತ್ರಿಕೆಯೊಂದರಲ್ಲಿ ’35 ವರ್ಷದೊಳಗಿನ ಬಾಯ್​ಫ್ರೆಂಡ್ ಬೇಕಾಗಿದ್ದಾನೆ’ ಎಂದು ಜಾಹೀರಾತು ಕೂಡ ಹಾಕಿಸಿದ್ದರು! ಪ್ರೀತಿ ಕುರುಡು ಎಂದು ಹೇಳುವುದು ಸುಮ್ಮನೆ ಅಲ್ಲ ಬಿಡಿ..

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್: ಬಣ್ಣದ ಲೋಕ ತೊರೆದು ಮೀನು ಮಾರಾಟಕ್ಕೆ ಇಳಿದ ಕಿರುತೆರೆ ನಟ, ಫೋಟೋ ವೈರಲ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ