Lover ಜೊತೆ ಸೇರಿ ಗಂಡನ ಕೊಲೆಗೈದ ಖತರ್ನಾಕ್​ ಹೆಂಡ್ತಿ ಕೊನೆಗೂ ಅಂದರ್​

Lover ಜೊತೆ ಸೇರಿ ಗಂಡನ ಕೊಲೆಗೈದ ಖತರ್ನಾಕ್​ ಹೆಂಡ್ತಿ ಕೊನೆಗೂ ಅಂದರ್​

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆಗೈದ ಪತ್ನಿಯನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಗ್ಗನಹಳ್ಳಿಯಲ್ಲಿ ವಾಸವಿದ್ದ ದಂಪತಿ ರವಿಕುಮಾರ್​ ಮತ್ತು ಗಾಯತ್ರಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ನಡುವೆ ಗಾಯತ್ರಿ ಸತೀಶ್ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದಾಳೆ ಎಂದು ತಿಳಿದುಬಂದಿದೆ. ತಮ್ಮ ಸಂಬಂಧಕ್ಕೆ ಗಂಡ ಅಡ್ಡಿ ಆಗ್ತಿದ್ದಾನೆ ಅನ್ನೋ ಕಾರಣಕ್ಕೆ ರವಿಕುಮಾರ್​ನನ್ನ ಕೊಲೆ ಮಾಡಲು ಗಾಯತ್ರಿ ಮತ್ತು ಸತೀಶ್​ ಸ್ಕೆಚ್​ ಹಾಕಿದ್ದಾಳೆ. ಅಂತೆಯೇ, ಜುಲೈ 17ರಂದು ರಾತ್ರಿ ದಾಸನಪುರ APMC ಮಾರ್ಕೆಟ್‌ ಬಳಿ […]

KUSHAL V

| Edited By:

Jul 31, 2020 | 12:13 AM

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆಗೈದ ಪತ್ನಿಯನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಗ್ಗನಹಳ್ಳಿಯಲ್ಲಿ ವಾಸವಿದ್ದ ದಂಪತಿ ರವಿಕುಮಾರ್​ ಮತ್ತು ಗಾಯತ್ರಿ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ನಡುವೆ ಗಾಯತ್ರಿ ಸತೀಶ್ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದಾಳೆ ಎಂದು ತಿಳಿದುಬಂದಿದೆ. ತಮ್ಮ ಸಂಬಂಧಕ್ಕೆ ಗಂಡ ಅಡ್ಡಿ ಆಗ್ತಿದ್ದಾನೆ ಅನ್ನೋ ಕಾರಣಕ್ಕೆ ರವಿಕುಮಾರ್​ನನ್ನ ಕೊಲೆ ಮಾಡಲು ಗಾಯತ್ರಿ ಮತ್ತು ಸತೀಶ್​ ಸ್ಕೆಚ್​ ಹಾಕಿದ್ದಾಳೆ.

ಅಂತೆಯೇ, ಜುಲೈ 17ರಂದು ರಾತ್ರಿ ದಾಸನಪುರ APMC ಮಾರ್ಕೆಟ್‌ ಬಳಿ ಆಟೋದಲ್ಲಿ ಹೋಗ್ತಿದ್ದ ಗಂಡ ರವಿಕುಮಾರ್​ನನ್ನ ದುಷ್ಕರ್ಮಿಗಳ ಗ್ಯಾಂಗ್ ದರೋಡೆ ಮಾಡುವ ಸೋಗಿನಲ್ಲಿ ಅಡ್ಡಗಟ್ಟಿದ್ದರು.

3 ಬೈಕ್​ಗಳಲ್ಲಿ ಬಂದ 5 ಜನರು ಪತಿ ರವಿಕುಮಾರ್ ಮತ್ತು ಆಟೋ ಚಾಲಕ ಬಸವರಾಜು ಮೊಬೈಲ್ ಕಿತ್ಕೊಂಡಿದ್ರು. ಬಳಿಕ ರವಿಕುಮಾರ್​ಗೆ ಚಾಕು ಇರಿದು ಪರಾರಿಯಾಗಿದ್ದರು.

ತೀವ್ರ ರಕ್ತಸ್ರಾವವಾಗಿದ್ದ ರವಿಕುಮಾರ್​ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಎರಡು ದಿನದ ಬಳಿಕ ರವಿಕುಮಾರ್ ಕೊನೆಯುಸಿರೆಳೆದಿದ್ದ. ಇನ್ನ ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಇದೀಗ ಗಾಯತ್ರಿ, ಸತೀಶ್​ ಸೇರಿ 6 ಆರೋಪಿಗಳನ್ನ ಬಂಧಿಸಿದ್ದಾರೆ. ಇರ್ಫಾನ್, ಸದ್ದಾಂ, ನಯಾಜ್, ಕಲೀಂ ಮತ್ತು ರಾಮ್ ಪ್ರಶಾಂತ್ ಬಂಧಿತ ಆರೋಪಿಗಳು.

Follow us on

Related Stories

Most Read Stories

Click on your DTH Provider to Add TV9 Kannada