Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime; ಕೆಲಸಕ್ಕೆ ಹೋಗಿ ಮನೆಗೆ ಬಂದವನಿಗೆ ಶಾಕ್, ಮಹಿಳೆ ಸಾವು.. ಕುತ್ತಿಗೆ ಸೀಳಿ ಕೊಲೆ ಶಂಕೆ

ಆ ದಂಪತಿ ಯಾರ ಬಳಿಯೂ ಗಲಾಟೆ ಮಾಡಿಕೊಂಡಿರಲಿಲ್ಲ. ಮನೆಯಲ್ಲಿ ಜಗಳವೂ ಆಗಿರಲಿಲ್ಲ. ಏರಿಯಾದ ಜನರ ಜೊತೆ ಸ್ನೇಹಜೀವಿಯಂತೆ ಇರ್ತಿದ್ರು. ಆದ್ರೆ, ಇಂತಹ ಮನೆಯಲ್ಲಿ ನೆತ್ತರು ಹರಿದಿದೆ. ಇಡೀ ಏರಿಯಾವೇ ದಂಗಾಗಿ ಹೋಗಿದೆ. ನಿಗೂಢ ಕೇಸ್ ಭೇದಿಸೋಕೆ ಪೊಲೀಸರು ಮುಂದಾಗಿದ್ದಾರೆ.

Bengaluru Crime; ಕೆಲಸಕ್ಕೆ ಹೋಗಿ ಮನೆಗೆ ಬಂದವನಿಗೆ ಶಾಕ್, ಮಹಿಳೆ ಸಾವು.. ಕುತ್ತಿಗೆ ಸೀಳಿ ಕೊಲೆ ಶಂಕೆ
ಕೊಲೆ ನಡೆದ ಸ್ಥಳ
Follow us
TV9 Web
| Updated By: ಆಯೇಷಾ ಬಾನು

Updated on: Jul 11, 2021 | 7:26 AM

ಬೆಂಗಳೂರು: ಓಂಕಾರ್ ಮತ್ತು ರಂಜಿತಾ.. ಮೂಲತಃ ಬೀದರ್ ನಿವಾಸಿಗಳು. ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ರು. ಬದುಕು ಕಟ್ಟಿಕೊಳ್ಳೋಕೆ ಅಂತಾ ಬೆಂಗಳೂರಿಗೆ ಬಂದಿದ್ರು. ಅದ್ರಂತೆ. ನಗರದ ಜ್ಞಾನಜ್ಯೋತಿನಗರದ 9ನೇ ಮೇನ್ ರೋಡ್ನಲ್ಲಿರುವ ಮನೆಯಲ್ಲಿ ವಾಸವಿದ್ರು. ಈ ಓಂಕಾರ್, ಕೆಂಟ್ ವಾಟರ್ ಪ್ಯೂರಿಫೈರ್ ಕಂಪನಿಯಲ್ಲಿ ಕೆಲಸ ಮಾಡ್ಕೊಂಡಿದ್ರೆ, ಪತ್ನಿ ಮನೆಯಲ್ಲೇ ಇರ್ತಿದ್ರು. ಇಬ್ಬರು ಖುಷಿಯಿಂದ್ಲೇ ಜೀವನ ಕಳಿತಿದ್ರು. ಇತ್ತೀಚೆಗೆ ಮದುವೆ ಆಗಿ 8 ವರ್ಷವಾದ್ರೂ ಒಂದು ಮಗು ಆಗಿಲ್ಲ ಅಂತಾ ಗಂಡ, ಹೆಂಡ್ತಿ ಕೊರಗ್ತಿದ್ರು. ಹೀಗಾಗಿ ಮನೆಯಲ್ಲಿ ಇಬ್ಬರೇ ಇರೋದು ಬೇಡ ಅಂತಾ ಈ ಓಂಕಾರ್, ತಮ್ಮ ಸಹೋದರರನ್ನ ಮನೆಗೆ ಕರೆಯಿಸಿಕೊಂಡಿದ್ರು. ಆತ ಕೂಡ ಮಾಗಡಿ ರೋಡ್ನಲ್ಲಿರುವ ಮೆಟ್ರೋದಲ್ಲಿ ಕೆಲಸ ಮಾಡ್ಕೊಂಡಿದ್ದ. ಎಂದಿನಂತೆ ನಿನ್ನೆಯೂ ಕೂಡ ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದವನು ನಡುಗಿ ಹೋಗಿದ್ದ. ಯಾಕಂದ್ರೆ, ರಕ್ತದ ಮಡುವಿನಲ್ಲಿ ಅತ್ತಿಗೆ ಕೊನೆಯುಸಿರೆಳೆದಿದ್ಲು.

ಮಹಿಳೆ ಸಾವು.. ಕುತ್ತಿಗೆ ಸೀಳಿ ಕೊಲೆ ಶಂಕೆ ಇನ್ನು, ಮನೆಯೊಳಗೆ ನುಗ್ಗಿದ ಪಾಪಿಗಳು ಮಹಿಳೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾರೆ. ಬಳಿಕ ಮೃತಳ ಕೈಯಲ್ಲಿ ಚಾಕು ಇಟ್ಟು ಸೀನ್ ಕ್ರಿಯೆಟ್ ಮಾಡಿರೋ ಶಂಕೆ ಇದೆ. ಇಷ್ಟೇ ಅಲ್ಲ, ಆಕೆಯೇ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನವೂ ಇದೆ. ಹೀಗಾಗಿ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ನಿಗೂಢವಾಗಿಯೇ ಉಳಿದಿದೆ.

ರಂಜಿತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮತ್ತೊಂದ್ಕಡೆ ಪ್ರಕರಣ ದಾಖಲಿಸಿಕೊಂಡಿರೋ ಜ್ಞಾನಭಾರತಿ ಠಾಣೆ ಪೊಲೀಸರು, ಮೃತ ರಂಜಿತಾರ ಬಾಮೈದುನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ಖಾಕಿ ತನಿಖೆ ಬಳಿಕವಷ್ಟೇ ಅಸಲಿ ಸತ್ಯ ಗೊತ್ತಾಗಬೇಕಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ ಕುಲಕರ್ಣಿ ಆಪ್ತ ಸೋಮು ನ್ಯಾಮಗೌಡಗೆ 14 ದಿನಗಳ ನ್ಯಾಯಾಂಗ ಕಸ್ಟಡಿ