ದುಬೈನ ಎಸ್ಕೆಎಸ್ಎಸ್ಎಫ್ ಕನ್ನಡ ಸಂಘಟನೆ ವತಿಯಿಂದ ತಾಯಿನಾಡಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ ರವಾನೆ
ಮೇ 22ರ ಶನಿವಾರ ಬೆಳಿಗ್ಗೆ SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರ ನೇತೃತ್ವದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗ ಅವರು ದುವಾದೊಂದಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಗಳನ್ನು ಕಾರ್ಗೊ ಮೂಲಕ ತಾಯಿನಾಡಿಗೆ ಕಳುಹಿಸಿಕೊಟ್ಟಿದ್ದಾರೆ.
ದುಬೈ: ಕೊರೊನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೇಡೆ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊರೊನಾ ಆತಂಕವನ್ನು ದೂರ ಮಾಡಲು ದುಬೈನ ಎಸ್ಕೆಎಸ್ಎಸ್ಎಫ್ ಕನ್ನಡ ಸಂಘಟನೆಯ ಸೇವಾ ತಂಡವಾದ ವಿಖಾಯ ಕರ್ನಾಟಕ ಸಹಾಯ ಹಸ್ತ ನೀಡಿದೆ. ಯುಎಇ ವತಿಯಿಂದ #SupportIndia’sCovidFight ಇದರ ಭಾಗವಾಗಿ ತಾಯಿನಾಡಿನಲ್ಲಿ ಕೊವಿಡ್ ರೋಗಿಗಳಿಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಗಳನ್ನು ಕಳುಹಿಸಿ ಕೊಡಲು ನಿರ್ಧರಿಸಿದ್ದು, ಡೊನೆಟ್ ಆಕ್ಸಿಜನ್ ಮತ್ತು ಸೆವ್ ಲೈಫ್ ಅಭಿಯಾನವನ್ನು ದುಬೈಯಲ್ಲಿ ಆನ್ಲೈನ್ ಮೂಲಕ ಆಯೋಜಿಸಲಾಗಿದೆ.
ಈ ಅಭಿಯಾನವನ್ನು ಯಶಸ್ಸಿಗೊಳಿಸಲು ಅನಿವಾಸಿ ಉದ್ಯಮಿಗಳು, ಉದಾರಿ ಧಾನಿಗಳು, ಸಮಿತಿಯ ಪದಾಧಿಕರಿಗಳು ಉತ್ತಮ ರೀತಿಯಲ್ಲಿ ಸಹಕರಿಸಿದರು. ಜನಾಬ್ ಶೆರೀಫ್ ಕಾವು ಮತ್ತು ಜನಾಬ್ ರಫೀಕ್ ಸುರತ್ಕಲ್ ಅವರು ಅಭಿಯಾನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಿಪ್ ವೇ ಇದರ ಮಾಲೀಕರಾದ ಜನಾಬ್ ಮುಹಮ್ಮದ್ ಹಾರಿಸ್ ಅವರು ದುಬೈನಿಂದ ಮಂಗಳೂರಿಗೆ ಉಚಿತ ಕಾರ್ಗೊ ವ್ಯವಸ್ಥೆ ಏರ್ಪಡಿಸಿ ಸಹಕರಿಸಿದರು.
ಮೇ 22ರ ಶನಿವಾರ ಬೆಳಿಗ್ಗೆ SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರ ನೇತೃತ್ವದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗ ಅವರು ದುವಾದೊಂದಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಗಳನ್ನು ಕಾರ್ಗೊ ಮೂಲಕ ತಾಯಿನಾಡಿಗೆ ಕಳುಹಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ SKSSF ಕರ್ನಾಟಕ ಯುಎಇ ಟ್ರೆಂಡ್ ಚೆರ್ಮೆನ್ ನೂರ್ ಮುಹಮ್ಮದ್ ನೀರ್ಕಜೆ, SKSSF ವಿಖಾಯ ಯುಎಇ ಚಯರ್ ಚೆರ್ಮೆನ್ ನವಾಝ್ ಬಿಸಿ ರೋಡ್, ಕಾರ್ಯದರ್ಶಿ ಜನಾಬ್ ನಾಸಿರ್ ಬಪ್ಪಲಿಗೆ, ಕೋಶಾದಿಕಾರಿ ಜನಾಬ್ ಸಿರಾಜ್ ಬಿಸಿ ರೋಡ್, ಕನ್ವೀನರ್ ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೆರೀಫ್ ಕೊಡಿನೀರು, ಜನಾಬ್ ನಿಝಾಮ್ ತೋಡಾರು, ಶಬೀರ್ ಪರಂಗಿಪೇಟೆ, ಜೌಹರ್ ಉರುಮನೆ, ರಫೀಕಲಿ ಕೊಡಗು ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:
ಕೊರೊನಾ ಚಿಕಿತ್ಸೆಗೆ ನೆರವು, ಆರ್ಥಿಕ ಸಹಾಯ, ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣ; ಸುತ್ತೂರು ಮಠದಿಂದ ಹಲವು ಸತ್ಕಾರ್ಯ
Published On - 6:21 pm, Sun, 23 May 21