AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಚಿಕಿತ್ಸೆಗೆ ನೆರವು, ಆರ್ಥಿಕ ಸಹಾಯ, ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣ; ಸುತ್ತೂರು ಮಠದಿಂದ ಹಲವು ಸತ್ಕಾರ್ಯ

1 ರಿಂದ 10ನೇ ತರಗತಿವರೆಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುತ್ತೇವೆ.ರಾಜ್ಯ, ಹೊರರಾಜ್ಯಗಳ ಮಕ್ಕಳು ಕೂಡ ಈ ಸೌಲಭ್ಯ ಪಡೆಯಬಹುದು ಎಂದು ಸುತ್ತೂರು ಶ್ರೀಗಳು ತಿಳಿಸಿದ್ದಾರೆ.

ಕೊರೊನಾ ಚಿಕಿತ್ಸೆಗೆ ನೆರವು, ಆರ್ಥಿಕ ಸಹಾಯ, ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣ; ಸುತ್ತೂರು ಮಠದಿಂದ ಹಲವು ಸತ್ಕಾರ್ಯ
ಸುತ್ತೂರು ಸ್ವಾಮೀಜಿ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on:Aug 21, 2021 | 10:03 AM

Share

ಮೈಸೂರು: ಕೊವಿಡ್ ಚಿಕಿತ್ಸೆಗೆ ಜೆಎಸ್​ಎಸ್​ ಹಾಸ್ಟೆಲ್, ಸಮುದಾಯ ಭವನವನ್ನು ಮೈಸೂರು ಜಿಲ್ಲಾಡಳಿತಕ್ಕೆ ನೀಡಲು ಸುತ್ತೂರು ಮಠ ತೀರ್ಮಾನ ಕೈಗೊಂಡಿದೆ. ಜೆಎಸ್​ಎಸ್​ ಸಂಸ್ಥೆಯ ಎಲ್ಲಾ ಹಾಸ್ಟೆಲ್, ಸಮುದಾಯ ಭವನವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ನೀಡಲಾಗುವುದು ಎಂದು ಮೈಸೂರಿನಲ್ಲಿ ಸುತ್ತೂರು ಮಠದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಒಟ್ಟು 6 ಸಾವಿರ ಜನರಿಗೆ ಮಠದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಕೊರೊನಾದಿಂದ ತಂದೆ, ತಾಯಿ ಮೃತಪಟ್ಟರೆ ಮಕ್ಕಳಿಗೆ ನೆರವು ನೀಡಲಾಗುವುದು. ಆರ್ಥಿಕ ಸಂಕಷ್ಟಕ್ಕೊಳಗಾದ ಕುಟುಂಬಗಳ ಮಕ್ಕಳಿಗೂ ನೆರವು ನೀಡುತ್ತೇವೆ. 1 ರಿಂದ 10ನೇ ತರಗತಿವರೆಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುತ್ತೇವೆ.ರಾಜ್ಯ, ಹೊರರಾಜ್ಯಗಳ ಮಕ್ಕಳು ಕೂಡ ಈ ಸೌಲಭ್ಯ ಪಡೆಯಬಹುದು ಎಂದು ಸುತ್ತೂರು ಶ್ರೀಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಶಿಕ್ಷಣ ಸಂಬಂಧ ಸುತ್ತೂರು ಶಾಲೆಯಲ್ಲಿ ಬೇಕಾದ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸುತ್ತೂರು ಮಠದ ಸ್ವಾಮೀಜಿ ಹೇಳಿದ್ದಾರೆ.

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ರೋಗಿಗಳ ಚಿಕಿತ್ಸೆಗೆ ಹಾಸಿಗೆ, ವೈದ್ಯಕೀಯ ಪರಿಕರಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡುವಂತೆ ಸಚಿವರು ಸುತ್ತೂರು ಮಠದ ಶ್ರೀಗಳಿಗೆ ಮನವಿ ಸಲ್ಲಿಸಿದ್ದರು. ಜೆಎಸ್ಎಸ್ ಆಸ್ಪತ್ರೆಯಲ್ಲಿ ಬೆಡ್ ನೀಡುವಂತೆ ಮನವಿ ಮಾಡಿದ್ದರು.

ಸುತ್ತೂರು ಶಾಖಾ ಮಠದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್, ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಕೆಲ ಅಧಿಕಾರಿಗಳು ಶ್ರೀಗಳ ಜತೆ ಸಭೆ ನಡೆಸಿದ್ದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ

ಜೊಮ್ಯಾಟೊದ 1.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಕೊವಿಡ್​ ಲಸಿಕೆ ಉಚಿತ; ಸಿಇಒ ದೀಪಿಂದರ್​ ಗೋಯಲ್ ಘೋಷಣೆ

Published On - 9:39 pm, Sat, 22 May 21