ಸಚಿವ ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ, ಅವರ ಬಳಿ 500 ಸಿಡಿಗಳಿವೆ; ಉದ್ಯಮಿ ಆಲಂ ಪಾಷಾ ಗಂಭೀರ ಆರೋಪ

ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ. ನಲ್ಲಿ ನಿರಾಣಿ ತಮ್ಮ ಪ್ರಭಾವ ಬಳಿಸಿ ಅಕ್ರಮ ಎಸಗಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲ ಪಡೆಯುತ್ತಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ, ಅವರ ಬಳಿ 500 ಸಿಡಿಗಳಿವೆ; ಉದ್ಯಮಿ ಆಲಂ ಪಾಷಾ ಗಂಭೀರ ಆರೋಪ
ಸಚಿವ ಮುರುಗೇಶ್ ನಿರಾಣಿ, ಉದ್ಯಮಿ ಆಲಂ ಪಾಷಾ

ಬೆಂಗಳೂರು: ಕ್ಯಾಪಿಟಲ್ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಯಮಿ ಆಲಂ ಪಾಷಾ (Alam Pasha) ಗಣಿ ಸಚಿವ ಮುರುಗೇಶ್ ನಿರಾಣಿ (Murugesh Nirani) ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಬಳಿ 500 ಸಿಡಿಗಳಿವೆ. ನಿರಾಣಿ ಒಬ್ಬ ಸಿಡಿ ಬಾಬಾ ಅಂತ ಆರೋಪಿಸಿದ್ದಾರೆ. ರಾಜಕಾರಣಿಗಳು, ಪ್ರಮುಖ ನಾಯಕರ ಆಶ್ಲೀಲ ಸಿಡಿಗಳು ಮುರುಗೇಶ್ ನಿರಾಣಿ ಬಳಿ ಇವೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆಲಂ ಪಾಷ, ಬಿ.ಎಸ್.ಯಡಿಯೂರಪ್ಪ ಮೇಲಿರುವ ಆರೋಪಗಳಿಂದಲೇ ಹೈಕಮಾಂಡ್ ಕೆಳಗಿಳಿಸುತ್ತಿದೆ ಎಂದು ಹೇಳಿದರು. ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ. ನಲ್ಲಿ ನಿರಾಣಿ ತಮ್ಮ ಪ್ರಭಾವ ಬಳಿಸಿ ಅಕ್ರಮ ಎಸಗಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲ ಪಡೆಯುತ್ತಿದ್ದಾರೆ. ಆ ಹಣವನ್ನು ನಕಲಿ ಹೆಸರು, ಖಾತೆಯ ಮೂಲಕ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಲಿ. ನಲ್ಲಿ ಜಮೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರೈತರಿಗೆ ಸಿಗುವ ಶೇ.4 ರಷ್ಟು ಬಡ್ಡಿ ಕೃಷಿ ಸಾಲವನ್ನು ರೈತರ ನಕಲಿ ಆಧಾರ್ ಕಾರ್ಡ್​ನ ಬಳಸಿ ಪಡೆದಿದ್ದಾರೆ. ಈ ರೀತಿಯಾಗಿ 8 ಸಾವಿರ ಕೋಟಿ ವ್ಯವಹಾರ ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಅಮಾಯಕ ರೈತರಿಗೆ ವಂಚನೆ ಆಗಿದೆ. ಸಕ್ಕರೆ ಕಾರ್ಖಾನೆ ಮತ್ತು ರೈತರ ಹೆಸರಲ್ಲಿ ವಂಚನೆ ಆಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ನಿರಾಣಿ ಒಡೆತನದ ಮುಧೋಳದ ಸಕ್ಕರೆ ಕಾರ್ಖಾನೆ ಅಕ್ರಮವಾಗಿ ಸ್ಥಾಪನೆಯಾಗಿದೆ. ನಿರಾಣಿ ಶುಗರ್ಸ್​ನಲ್ಲಿ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿದ್ದರು. ಇದರ ಬಗ್ಗೆ ಏನು ಕ್ರಮ ಆಯ್ತು? ಎಂದು ಆಲಂ ಪಾಷ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ

ಕರ್ನಾಟಕ ಕಾಂಗ್ರೆಸ್​ನಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯವಿಲ್ಲ; ದೆಹಲಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

ಕೋಲಾರ: ಕುಕ್ಕುಟೋದ್ಯಮಕ್ಕೆ ಕೊರೊನಾ ಮೂರನೇ ಅಲೆಯ ಭೀತಿ; ಕೋಳಿ ಫಾರಂ ಮಾಲೀಕರಲ್ಲಿ ಹೆಚ್ಚಿದ ಆತಂಕ

(Businessman Alam Pasha says Minister Murugesh Nirani have there are politicians porn CDs)