AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇನ್ನೂ ಒಂದೂವರೆ ವರ್ಷ ಯಡಿಯೂರಪ್ಪನವರೇ ಆಡಳಿತ ನಡೆಸಲಿ ಎಂಬುದು ನಮ್ಮ ಆಸೆ..‘-ಜಿ.ಪರಮೇಶ್ವರ್​

ಎಂ.ಬಿ.ಪಾಟೀಲ್​ ಮತ್ತು ಶಾಮನೂರು ಶಿವಶಂಕರಪ್ಪನವರು ಬೇರೆಬೇರೆ ಕಾರಣಗಳಿಗೆ ಯಡಿಯೂರಪ್ಪನವರಿಗೆ ಬೆಂಬಲಿಸಿರಬಹುದು ಎಂದು ಹೇಳಿದ ಜಿ.ಪರಮೇಶ್ವರ್​, ಕಾಂಗ್ರೆಸ್​ ಯಾವಾಗಲೂ ಚುನಾವಣೆಗೆ ಸಿದ್ಧವಾಗಿದೆ ಎಂದರು.

‘ಇನ್ನೂ ಒಂದೂವರೆ ವರ್ಷ ಯಡಿಯೂರಪ್ಪನವರೇ ಆಡಳಿತ ನಡೆಸಲಿ ಎಂಬುದು ನಮ್ಮ ಆಸೆ..‘-ಜಿ.ಪರಮೇಶ್ವರ್​
ಜಿ.ಪರಮೇಶ್ವರ್ ಮತ್ತು ಬಿ.ಎಸ್​.ಯಡಿಯೂರಪ್ಪ
TV9 Web
| Updated By: Lakshmi Hegde|

Updated on: Jul 20, 2021 | 12:38 PM

Share

ತುಮಕೂರು: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ (B.S.Yediyurappa)ನವರು ಕೆಳಗೆ ಇಳಿಯುವುದು ಬಹುತೇಕ ನಿಶ್ಚಿತ ಎಂಬ ವರದಿಗಳು ದಟ್ಟವಾಗುತ್ತಿದೆ. ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಅವರದ್ದು ಎನ್ನಲಾದ ಆಡಿಯೋವೊಂದು ಬಿಡುಗಡೆಯಾದ ಬೆನ್ನಲ್ಲೇ, ನಾಯಕತ್ವ ಬದಲಾವಣೆ ಗಾಳಿ ಇನ್ನೂ ರಭಸವಾಗಿ ರಾಜ್ಯದಲ್ಲಿ ಬೀಸುತ್ತಿದೆ. ಈ ಮಧ್ಯೆ ಯಡಿಯೂರಪ್ಪನವರು ಕೂಡ ಏನೂ ಮಾತನಾಡುತ್ತಿಲ್ಲ. ಆದರೆ ಈ ಬಗ್ಗೆ ಬಿಜೆಪಿ (BJP) ಯಷ್ಟೇ ಅಲ್ಲ, ಕಾಂಗ್ರೆಸ್ (Congress) ಪಾಳೆಯದಿಂದಲೂ ಪ್ರತಿಕ್ರಿಯೆಗಳು ಬರುತ್ತಿವೆ. ಹೀಗೆ ಸಿಎಂ ಬದಲಾವಣೆ ಬಗ್ಗೆ ಸಣ್ಣಮಟ್ಟದ ಬೇಸರ ಹೊರಹಾಕಿದವರಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್(G.Parameshwar)​ ಕೂಡ ಒಬ್ಬರು.

ತುಮಕೂರಿನಲ್ಲಿ ಮಾತನಾಡಿದ ಜಿ.ಪರಮೇಶ್ವರ್​, ಬಿ.ಎಸ್​. ಯಡಿಯೂರಪ್ಪನವರು ತುಂಬ ಕಷ್ಟಪಟ್ಟು ಸರ್ಕಾರವನ್ನು ರಚಿಸಿದ್ದಾರೆ. ಅವರು ಮುಖ್ಯಮಂತ್ರಿಯಾದ ಮೇಲೆ ತುಂಬ ಆಸೆ ಇಟ್ಟುಕೊಂಡು, ಸರ್ಕಾರವನ್ನು ಮುನ್ನಡೆಸಿದರು. ಆದರೆ ಬಿಜೆಪಿಯವರೇ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮುಂದಾಗಿದ್ದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ. ಸಂಪುಟದಲ್ಲಿ ಇದ್ದವರೇ ಮುಖ್ಯಮಂತ್ರಿಯನ್ನು ಬದಲಿಸಲು ಹೊರಟಿದ್ದಾರೆ. ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಜನರಿಗೆ ಸಂಕಷ್ಟ ಉಂಟಾಗುತ್ತಿದೆ. ಇದನ್ನೆಲ್ಲ ಸರಿಪಡಿಸಿಕೊಳ್ಳುವಂತೆ ನಾನು ಈ ಮೊದಲೇ ಬಿ.ಎಸ್​.ಯಡಿಯೂರಪ್ಪನವರಿಗೆ ಹೇಳಿದ್ದೆ. ಬಿಜೆಪಿಯವರ ತಪ್ಪುಗಳು ಅನೇಕ ಇವೆ. ಅವೆಲ್ಲವುಗಳಿಂದಲೂ ನಮಗೆ ಅನನುಕೂಲ ಆಗುತ್ತಿವೆ ಎಂದು ಹೇಳಿದರು.

ಇನ್ನೂ ಒಂದೂವರೆ ವರ್ಷ ಯಡಿಯೂರಪ್ಪನವರೇ ಅಧಿಕಾರ ನಡೆಸಲಿ ಎಂಬ ಆಸೆ ನಮಗಿದೆ. ಯಾಕೆಂದರೆ ಅವರು ತಪ್ಪು ಮಾಡಿದಷ್ಟೂ ನಮಗೆ ಅನುಕೂಲವೇ ಆಗಲಿದೆ. ಎಂ.ಬಿ.ಪಾಟೀಲ್​ ಮತ್ತು ಶಾಮನೂರು ಶಿವಶಂಕರಪ್ಪನವರು ಬೇರೆಬೇರೆ ಕಾರಣಗಳಿಗೆ ಯಡಿಯೂರಪ್ಪನವರಿಗೆ ಬೆಂಬಲಿಸಿರಬಹುದು ಎಂದು ಹೇಳಿದ ಜಿ.ಪರಮೇಶ್ವರ್​, ಕಾಂಗ್ರೆಸ್​ ಯಾವಾಗಲೂ ಚುನಾವಣೆಗೆ ಸಿದ್ಧವಾಗಿದೆ ಎಂದರು.

ಇದನ್ನೂ ಓದಿ: Sagarika Shona: ರಾಜ್ ಕುಂದ್ರಾ ನಗ್ನವಾಗಿ ಆಡಿಶನ್ ಕೊಡಲು ಹೇಳಿದ್ದರು: ನಟಿ ಸಾಗರಿಕಾ ಶೋನಾ ಗಂಭೀರ ಆರೋಪ 

It is unfortunate that the BJP came forward to Change Leadership In Karnataka Says Congress leader G.Parameshwar

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ