AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ ಚೆಕ್ಕಿಂಗ್ ವೇಳೆ ಅಪಘಾತ; ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಲಿನ‌‌ ಮೂಳೆ ಕಟ್

ಬೈಕ್ ಸವಾರರು ತ್ರಿಬಲ್ ರೈಡ್ ಬರುತ್ತಿದ್ದ ವೇಳೆ, ವಾಹನದ ಫೋಟೊ ಕ್ಲಿಕ್ ಮಾಡಲು ಮುಂದಾಗಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಳಿ ಬೈಕ್​ ಬಂದಿದ್ದು, ಇದರಿಂದಾಗಿ ಸ್ವಲ್ಪ ಹಿಂದಕ್ಕೆ ಸರಿದಿದ್ದಾರೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಟೂ ವೀಲರ್ ರಭಸವಾಗಿ ಬಿಸ್ನಾಳ್ ಅವರಿಗೆ ಗುದ್ದಿದೆ.

ವಾಹನ ಚೆಕ್ಕಿಂಗ್  ವೇಳೆ ಅಪಘಾತ; ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಲಿನ‌‌ ಮೂಳೆ ಕಟ್
ಟ್ರಾಫಿಕ್ ಠಾಣೆಯ ಕಾನ್ಸ್‌ಟೇಬಲ್ ಯಲ್ಲಾಲಿಂಗ್ ಬಿಸ್ನಾಳ್
TV9 Web
| Edited By: |

Updated on: Jul 20, 2021 | 12:10 PM

Share

ಬೆಂಗಳೂರು: ವಾಹನ ಚೆಕ್ಕಿಂಗ್​ ವೇಳೆ ಅಪಘಾತ ಸಂಭವಿಸಿದ್ದು, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಲಿನ‌‌ ಮೂಳೆ ಕಟ್​ ಆಗಿದೆ. ಚಾಮರಾಜಪೇಟೆ ಮುಖ್ಯರಸ್ತೆ ಬಳಿ ಚೆಕ್ಕಿಂಗ್​ ಮಾಡುವಾಗ ಈ ಘಟನೆ ನಡೆದಿದ್ದು, ಬಸವನಗುಡಿ ಟ್ರಾಫಿಕ್ ಠಾಣೆಯ ಕಾನ್ಸ್‌ಟೇಬಲ್ ಯಲ್ಲಾಲಿಂಗ್ ಬಿಸ್ನಾಳ್ ಅವರ ಕಾಲಿನ ಮೂಳೆ ಕಟ್​ ಆಗಿದೆ. ಬೈಕ್ ಸವಾರರು ತ್ರಿಬಲ್ ರೈಡ್ ಬರುತ್ತಿದ್ದ ವೇಳೆ, ವಾಹನದ ಫೋಟೊ ಕ್ಲಿಕ್ ಮಾಡಲು ಮುಂದಾಗಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಳಿ ಬೈಕ್​ ಬಂದಿದ್ದು, ಇದರಿಂದಾಗಿ ಸ್ವಲ್ಪ ಹಿಂದಕ್ಕೆ ಸರಿದಿದ್ದಾರೆ.

ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಟೂ ವೀಲರ್ ರಭಸವಾಗಿ ಬಿಸ್ನಾಳ್ ಅವರಿಗೆ ಗುದ್ದಿದೆ. ಈ ಪರಿಣಾಮ ಬಿಸ್ನಾಳ್ ಅವರ ಬಲಗಾಲಿನ ಮೂಳೆ ಕಟ್ ಆಗಿದೆ. ಸದ್ಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಿಸ್ನಾಳ್ ಅವರನ್ನು ಹಾಸ್ಮಟ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ಕಲಬುರಗಿ ತಾಲೂಕಿನ ಕೋಟನೂರು ಬಳಿ ನಡೆದಿದೆ. ಕಲಬುರಗಿ ನಗರದ ನಿವಾಸಿಗಳಾದ ರಾಹುಲ್(25), ಖಾಸಿಂ(26), ಉಲ್ಲಾಸ್(26) ಸೇರಿ ನಾಲ್ವರ ಮೃತಪಟ್ಟಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರಾತ್ರಿ ಒಂದು ಗಂಟೆ ಸಮಯದಲ್ಲಿ ಟ್ಯಾಂಕರ್ ಮತ್ತು ಕಾರಿನ ನಡುವೆ ದುರಂತ ಸಂಭವಿಸಿದೆ. ಕಾರು ಜೇವರ್ಗಿ ಕಡೆಯಿಂದ ಕಲಬುರಗಿಗೆ ಬರುತ್ತಿತ್ತು. ಹಾಗೂ ಟ್ಯಾಂಕರ್ ಕಲಬುರಗಿಯಿಂದ ಜೇವರ್ಗಿ ಕಡೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರ ಗುರುತು ಪತ್ತೆಯಾಗಿದೆ. ಇನ್ನೋರ್ವ ಮೃತನ ಗುರುತು ಪತ್ತೆ ಮಾಡಲಾಗುತ್ತಿದೆ. ಕಲಬುರಗಿ ನಗರ ಸಂಚಾರಿ 2 ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: Bus Accident: ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ; 30 ಜನರು ಸಾವು, 40 ಜನರಿಗೆ ಗಂಭೀರ ಗಾಯ

Afterlife Journey: ’ಅರೆ ಪ್ರಜ್ಞೆಯಲ್ಲಿದ್ದಾಗ ಸಾವಿನ ನಂತರದ ಬದುಕನ್ನು ಕಂಡೆ’ ಕಾರು ಅಪಘಾತದಿಂದ ಗಂಭೀರ ಸ್ಥಿತಿಯಲ್ಲಿದ್ದ​ ಅಧಿಕಾರಿ ಬಿಚ್ಚಿಟ್ಟ ರೋಚಕ ಅನುಭವ

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ