AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bus Accident: ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ; 30 ಜನರು ಸಾವು, 40 ಜನರಿಗೆ ಗಂಭೀರ ಗಾಯ

Crime News: ಪಾಕಿಸ್ತಾನದ ಡೇರಾ ಗಾಜಿ ಖಾನ್​ ಜಿಲ್ಲೆಯಲ್ಲಿ ಬಸ್​ ಅಪಘಾತದಲ್ಲಿ 30 ಜನರು ಸಾವನ್ನಪ್ಪಿದ್ದು, 40 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Bus Accident: ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ; 30 ಜನರು ಸಾವು, 40 ಜನರಿಗೆ ಗಂಭೀರ ಗಾಯ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 19, 2021 | 2:49 PM

Share

ಲಾಹೋರ್: ಹಬ್ಬದ ಸಂಭ್ರಮಾಚರಣೆಗೆ ಊರಿಗೆ ಹೋಗುತ್ತಿದ್ದ 30 ಜನರು ಮಾರ್ಗಮಧ್ಯದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಈದ್-ಉಲ್-ಅಜಾ ಹಬ್ಬದ ಆಚರಣೆಗೆ ತಮ್ಮ ಊರಿಗೆ ತೆರಳುತ್ತಿದ್ದ ಕಾರ್ಮಿಕರಿದ್ದ ಬಸ್​ ಅಪಘಾತಕ್ಕೀಡಾಗಿದ ಪರಿಣಾಮ 30 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಡೇರಾ ಗಾಜಿ ಖಾನ್​ ಜಿಲ್ಲೆಯಲ್ಲಿ ಇಂದು ನಡೆದಿದೆ. ಎದುರಿನಿಂದ ಬರುತ್ತಿದ್ದ ಟ್ರಕ್​ಗೆ ಬಸ್ ಡಿಕ್ಕಿ ಹೊಡೆದ ಕಾರಣದಿಂದ ಈ ದುರಂತ ಸಂಭವಿಸಿದೆ. ಬಸ್​ ಅಪಘಾತದಲ್ಲಿ 30 ಜನರು ಸಾವನ್ನಪ್ಪಿದ್ದು, 40 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತಕ್ಕೀಡಾದ ಬಸ್​ನಲ್ಲಿದ್ದವರಲ್ಲಿ ಬಹುತೇಕರು ಕಾರ್ಮಿಕರು ಎನ್ನಲಾಗಿದೆ. ಸಿಯಾಲ್​ಕೋಟ್​ನಿಂದ ರಾಜಾನ್​ಪುರಕ್ಕೆ ಹೊರಟಿದ್ದ ಬಸ್​ ತಾನ್ಸಾ ಬಳಿ ಇರುವ ಇಂಡಸ್ ಹೈವೇಯಲ್ಲಿ ಅಪಘಾತಕ್ಕೀಡಾಗಿದೆ. ಬಸ್​ನಲ್ಲಿದ್ದವರು ತಮ್ಮ ಊರಿನಲ್ಲಿ ಈದ್-ಉಲ್-ಅಜಾ ಹಬ್ಬವನ್ನು ಆಚರಿಸಲು ತೆರಳುತ್ತಿದ್ದರು.

ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತಕ್ಕೆ ಪಾಕಿಸ್ತಾನದ ಪಂಜಾಬ್​ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಸಂತಾಪ ಸೂಚಿಸಿದ್ದಾರೆ. ಈ ಬಸ್​ ಅಪಘಾತದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ರಾಯಭಾರಿ ಮಗಳ ಅಪಹರಣ; ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿ

ಈ ಪಾಕಿಸ್ತಾನಿ ಕ್ರಿಕೆಟಿಗನನ್ನು ಹೋದಲ್ಲಿ ಬಂದಲ್ಲಿ ಕಾಡುತ್ತಿದ್ದಾರೆ ನೆಟ್ಟಿಗರು; ಅಷ್ಟೊಂದು ಟ್ರೋಲ್​ ಆಗಲು ಕಾರಣವೇನು?

Follow Us
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!