Afterlife Journey: ’ಅರೆ ಪ್ರಜ್ಞೆಯಲ್ಲಿದ್ದಾಗ ಸಾವಿನ ನಂತರದ ಬದುಕನ್ನು ಕಂಡೆ’ ಕಾರು ಅಪಘಾತದಿಂದ ಗಂಭೀರ ಸ್ಥಿತಿಯಲ್ಲಿದ್ದ ಅಧಿಕಾರಿ ಬಿಚ್ಚಿಟ್ಟ ರೋಚಕ ಅನುಭವ
ಮಾಜಿ ಪೋಲೀಸ್ ಅಧಿಕಾರೊಯೊಬ್ಬರು ತಮ್ಮ ಭಯಾನಕ ಕ್ಷಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರು ಹೇಳುತ್ತಿರುವ ಸಾವಿನ ಅನುಭವೊಂದು ವೈರಲ್ ಆಗುತ್ತಿದೆ. ಇದು ಮರಣಾಂತರದ ಜೀವನವಿರಹುದು ಎಂದು ಹಲವರು ನಂಬುವಂತೆ ಮಾಡಿದೆ.
ಮರಣದ ನಂತರ ಸ್ವರ್ಗ ಅಥವಾ ನರಕಕ್ಕೆ ತಲುಪುತ್ತೇವೆ ಎಂಬುದು ಕೆಲವರ ನಂಬಿಕೆ. ಆದರೆ ಇನ್ನು ಕೆಲವರು ಇದು ಮೂಢ ನಂಬಿಕೆ ಎಂದು ಹೇಳುತ್ತಾರೆ. ಆದರೆ ಆಧ್ಯಾತ್ಮಿಕವಾದಿಗಳು ಈ ಕುರಿತಂತೆ ಬಲವಾಗಿ ವಾದ ಮಂಡಿಸುತ್ತಾರೆ. ಈ ಕುರಿತಂತೆ ಮಾಜಿ ಪೊಲೀಸ್ ಅಧಿಕಾರೊಯೊಬ್ಬರು ತಮ್ಮ ಭಯಾನಕ ಕ್ಷಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರು ಹೇಳುತ್ತಿರುವ ಸಾವಿನ ಅನುಭವೊಂದು ವೈರಲ್ ಆಗುತ್ತಿದೆ. ಇದು ಮರಣಾಂತರದ ಜೀವನವಿರಹುದು ಎಂದು ಹಲವರು ನಂಬುವಂತೆ ಮಾಡಿದೆ.
ಸ್ವರ್ಗ ಮತ್ತು ನರಕವನ್ನು ನೋಡಿದ ಪೊಲೀಸ್ ಅಧಿಕಾರಿ ಕಾರು ಅಪಘಾತದಲ್ಲಿ ಜೆಫ್ ಕೌಲ್ಟರ್ ಗಂಭೀರ ಸ್ಥಿತಿಯಲ್ಲಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ಸ್ವರ್ಗ ಮತ್ತು ನರಕವನ್ನು ನೋಡಿದ ಅನುಭವವನ್ನು ಹೇಳಿದ್ದಾರೆ. ನಡೆದ ಅಪಘಾತವು ದೊಡ್ಡ ಸ್ಪೋಟದಂತೆ ಅನಿಸುತ್ತಿದೆ. ಅಪಘಾತದ ಬಳಿಕ ನಾನು ಕಪ್ಪು ಬಣ್ಣವಾಗಿಬಿಟ್ಟಿದ್ದೆ ಎಂದು ಅನುಭವ ಹಂಚಿಕೊಂಡಿದ್ದಾರೆ. ಇಂತಹ ಭಯಂಕರ ಸ್ಥಿತಿಯನ್ನು ನಾನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
ಅಪಘಾತದದ ಸಂದರ್ಭವನ್ನು ನನಗೆ ಅಸ್ಪಷ್ಟವಾಗಿದೆ. ಆಸ್ಪತ್ರೆಯಲ್ಲಿ ನನ್ನ ಹೆಂಡತಿಯ ತೋಳುಗಳನ್ನು ಹಿಡಿದುಕೊಂಡಿದ್ದೇನೆ. ಆ ಬಳಿಕವೇ ನನಗೆ ರಾಕ್ಷಸರ ಚಿತ್ರಗಳು ಕಣ್ಣೆದುರು ಬಂದಿದೆ. ಭಯಾನಕ ಕೂಗು, ಕರ್ಕಷ ನಗು ನನ್ನ ಕಿವಿಗೆ ಅಪ್ಪಳಿಸುತ್ತಿತ್ತು. ಹೃದಯ ಬಡಿತ ಜೋರಾಗ ತೊಡಗಿತ್ತು. ಬಡಿತ ಇನ್ನೇನು ನಿಂತೇ ಹೋಗುತ್ತದೆ ಅನ್ನುವಷ್ಟು ಭಯ. ನಾನು ಸಾಯುತ್ತಿದ್ದೇನೆ ಎಂಬ ಗುನುಗು ಒಂದುಕಡೆ ಇನ್ನಷ್ಟು ಆತಂಕವನ್ನು ಸೃಷ್ಟಿಸಿತ್ತು. ಆತ್ಮವು ನನ್ನ ದೇಹವನ್ನು ತೊರೆದು ದೂರ ಸಾಗುತ್ತಿದೆ ಅನ್ನುವ ಅನುಭವ. ಕಣ್ಣೆದುರು ಪೂರಾ ಕತ್ತಲೇ ಆಗಿಬಿಟ್ಟಿತ್ತು ಎಂದು ಕೌಲ್ಟರ್ ಹೇಳಿದ್ದಾರೆ.
ನನ್ನ ತಾಯಿಯನ್ನು ನೋಡಿದೆ ಆ ಭಯಾನಕ ಕ್ಷಣದಲ್ಲಿ ನನ್ನ ತಾಯಿ ನನ್ನ ಕಣ್ಣೆದಿರು ಬರುತ್ತಿದ್ದರು. ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ನನ್ನ ತೋಳುಗಳನ್ನು ತೊಳೆಯುತ್ತಿದ್ದಾರೆ. ಇದು ಸಾವಿನ ನಂತರದ ಒಂದು ಪ್ರಕ್ರಿಯೆ ಎಂದು ಕೌಲ್ಟರ್ ಹೇಳಿದ್ದಾರೆ. ಕೌಲ್ಟರ್ ಹಂಚಿಕೊಂಡ ಅನುಭವದ ಕ್ಷಣ ಈಗ ವೈರಲ್ ಆಗುತ್ತಿದೆ. ಆದರೆ ವೈದ್ಯ ಶಾಸ್ತ್ರ ಸಾವಿನ ನಂತರ ಯಾವುದೇ ಜೀವನವಿಲ್ಲ ಎಂಬುದನ್ನು ಹೇಳುತ್ತದೆ. ಮಾರಣಾಂತಿಕ ಘಟನೆಯ ಸಂದರ್ಭದಲ್ಲಿ ನಮ್ಮ ಮೆದುಳಿಗೆ ಆಗುವ ಆಘಾತದಿಂದ ಇವುಗಳು ಸಂಭವಿಸುತ್ತದೆ ಎಂದು ವೈದ್ಯಕೀಯ ತಜ್ಞರ ಅಭಿಪ್ರಾಯ.
ಇದನ್ನೂ ಓದಿ:
Viral Video: ಕತ್ತಲಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ದೆವ್ವವೂ ಅಲ್ಲ, ಏಲಿಯನ್ ಕೂಡ ಅಲ್ಲ; ಮತ್ತೇನು?!
ಯಾರೋ ಹಾದು ಹೋದಂತೆ ಅನ್ನಿಸುತ್ತಿದೆ! ನಿಜವಾಗಿಯೂ ದೆವ್ವ ಓಡಾಡುತ್ತಿದೆಯೇ? ವಿಡಿಯೋ ವೈರಲ್