Viral Video: ಕತ್ತಲಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ದೆವ್ವವೂ ಅಲ್ಲ, ಏಲಿಯನ್ ಕೂಡ ಅಲ್ಲ; ಮತ್ತೇನು?!

ಕೆಲವರು ಈ ವಿಡಿಯೋವನ್ನು ನೋಡಿ ಆಕೃತಿಯ ಬಗ್ಗೆ ವಿವಿಧ ಅಭಿಪ್ರಾಯ ತಾಳಿದ್ದರು. ಕೆಲವೊಬ್ಬರು ಇದನ್ನು ದೆವ್ವ ಎಂದು ಅಂದುಕೊಂಡಿದ್ದರು. ಇನ್ನೂ ಕೆಲವರು ಈ ಆಕೃತಿಯನ್ನು ಏಲಿಯನ್ ಎಂದು ಕರೆದಿದ್ದರು.

Viral Video: ಕತ್ತಲಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ದೆವ್ವವೂ ಅಲ್ಲ, ಏಲಿಯನ್ ಕೂಡ ಅಲ್ಲ; ಮತ್ತೇನು?!
ವೈರಲ್ ವಿಡಿಯೋದ ದೃಶ್ಯ
Follow us
TV9 Web
| Updated By: ganapathi bhat

Updated on:Jul 03, 2021 | 10:47 PM

ಸಾಮಾಜಿಕ ಜಾಲತಾಣಗಳ ಜಂಜಾಟದಲ್ಲಿ ನೂರಾರು ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತಿರುತ್ತವೆ. ಹಲವಾರು ವಿಡಿಯೋಗಳು ತಮ್ಮ ಪಾಡಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದುಹೋಗುತ್ತಿರುತ್ತದೆ. ಒಂದರ ಹಿಂದೆ ಒಂದರಂತೆ ಬಂದು ಹೋಗುತ್ತದೆ. ಆದರೆ, ಇಲ್ಲೊಂದು ವಿಶೇಷ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ತಿಂಗಳ ಹಿಂದೆ ವೈರಲ್ ಆಗಿತ್ತು. ಒಂದು ವಿಚಿತ್ರ ಆಕೃತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಅದು ದೆವ್ವದ್ದು, ಏಲಿಯನ್ ಇತ್ಯಾದಿ ಎಂದು ಜನರು ಆಡಿಕೊಂಡಿದ್ದರು. ನೋಡುಗರು ಈ ಚಿತ್ರಣ ನೋಡಿ ಒಂದು ಕ್ಷಣಕ್ಕೆ ಗಾಬರಿಗೊಳ್ಳುವಂತೆ ಆಗಿತ್ತು.

ಕೆಲವರು ಈ ವಿಡಿಯೋವನ್ನು ನೋಡಿ ಆಕೃತಿಯ ಬಗ್ಗೆ ವಿವಿಧ ಅಭಿಪ್ರಾಯ ತಾಳಿದ್ದರು. ಕೆಲವೊಬ್ಬರು ಇದನ್ನು ದೆವ್ವ ಎಂದು ಅಂದುಕೊಂಡಿದ್ದರು. ಇನ್ನೂ ಕೆಲವರು ಈ ಆಕೃತಿಯನ್ನು ಏಲಿಯನ್ ಎಂದು ಕರೆದಿದ್ದರು. ಕೆಲವರು ಅದು ದೆವ್ವ, ಭೂತ ಏನೂ ಅಲ್ಲ ಎಂದು ಯಾರೋ ಮನುಷ್ಯರೇ ನಡೆದುಕೊಂಡು ಹೋಗುತ್ತಿರುವುದು ಎಂದಿದ್ದರು. ಒಬ್ಬೊಬ್ಬರು ಅವರ ಅನುಭವ, ಆಲೋಚನೆಗಳಿಗೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದರು.

ಆದರೆ, ಈ ವಿಡಿಯೋ ದೆವ್ವದ್ದೂ ಅಲ್ಲ, ಏಲಿಯನ್ ಕೂಡ ಅಲ್ಲ. ಹಾಗೆ ಅಂದುಕೊಂಡಿದ್ದು ತಪ್ಪು ಎಂದು ಈಗ ಹೇಳಲಾಗುತ್ತಿದೆ. ಸ್ಥಳೀಯ ವಾಹಿನಿಯೊಂದು ಇಬ್ಬರು ಬೈಕ್ ಸವಾರರು ಶೂಟ್ ಮಾಡಿರುವ ವಿಡಿಯೋ ಹರಿಬಿಟ್ಟಿದ್ದನ್ನು ಪ್ರಸಾರ ಮಾಡಿತ್ತು. ಬಳಿಕ, ಬಹುತೇಕ ರಾಷ್ಟ್ರೀಯ ಸುದ್ದಿ ಸಂಸ್ಥೆಗಳೂ ಇದನ್ನು ಸುದ್ದಿ ಮಾಡಿದ್ದವು.

ಆದರೆ, ಈಗ ತಿಳಿದುಬಂದಿರುವಂತೆ ಅದು ಒಬ್ಬಾಕೆ ಮಹಿಳೆ ನಡೆದುಕೊಂಡು ಹೋಗುತ್ತಿರುವುದರದ್ದಾಗಿದೆ. ಆಕೆ ಸರಿಯಾಗಿ ಬಟ್ಟೆ ತೊಟ್ಟುಕೊಳ್ಳದೆ ಹೋಗಿರುವುದು ಈ ಭಯಕ್ಕೆ ಕಾರಣವಾಗಿದೆ. ಆಲ್ಟ್ ನ್ಯೂಸ್ ಮಾಡಿರುವ ಫ್ಯಾಕ್ಟ್ ಚೆಕ್​ನಲ್ಲಿ ಈ ವಿಚಾರ ಬಹಿರಂಗವಾಗಿದೆ. ಟೈಮ್ಸ್ ನೌ ನ್ಯೂಸ್ ಸಹಿತ ಈ ಸ್ಪಷ್ಟೀಕರಣ ವಿಚಾರ ವರದಿ ಮಾಡಿದೆ.

ವಿಡಿಯೋದಲ್ಲೇ ಕೇಳಿರುವಂತೆ ವಿಡಿಯೋ ಮಾಡಿದಾತ, ಹುಡುಗಿ ಹೀಗೆ ನಡೆದುಹೋಗುತ್ತಿದ್ಧಾಳೆ ಎಂದೇ ಕೂಗಿದ್ದಾನೆ. ಜೊತೆಗೆ, ಆತನ ನಂತರ ಅಲ್ಲಿ ಆಕೆಯನ್ನು ಕಂಡವರೂ ಅದು ಹುಡುಗಿ/ ಮಹಿಳೆ ಎಂದೇ ಖಚಿತಪಡಿಸಿದ್ದಾರೆ. ಜಾರ್ಖಂಡ್​ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಯುವಕರು ಸೆರೈಕೆಲಾ ಎಂಬಲ್ಲಿಂದ ಖಾರ್​ಸವಾನ್ ಎಂಬ ಕಡೆಯಿಂದ ವಾಪಸ್ ಆಗುತ್ತಿರುವಾಗ ಈ ದೃಶ್ಯ ಸೆರೆಯಾಗಿದೆ.

ಇದೀಗ, ಸೆರೈಕೆಲಾ ಸಬ್ ಇನ್​ಸ್ಪೆಕ್ಟರ್ ಮೊಹಮ್ಮದ್ ನೌಶದ್ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ. ಮಹಿಳೆ ಅಥವಾ ಯುವತಿ ಯಾಕೆ ಹಾಗೆ ನಡೆದುಹೋಗುತ್ತಿದ್ದಳು. ಯಾಕೆ ಬಟ್ಟೆ ತೊಟ್ಟಿರಲಿಲ್ಲ. ಏನಾಗಿತ್ತು ಎಂದು ತನಿಖೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು 

ಶೀತ, ಕಿವಿ ಬ್ಲಾಕ್ ಆಗಿದೆ ಎಂದು ವೈದ್ಯರ ಬಳಿ ಹೋದಾಗ ಕಿವಿಯೊಳಗೆ ಸಿಕ್ಕಿದ್ದು 22 ವರ್ಷ ಹಳೆಯ ವಸ್ತು!

Published On - 10:43 pm, Sat, 3 July 21

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?