ಹಾವನ್ನು ಮೂಗಿನಲ್ಲಿ ಹಾಕಿ..ಬಾಯಿಯಿಂದ ಹೊರಗೆ ತೆಗೆಯುತ್ತಾರೆ ಇವರು; ಧೈರ್ಯಶಾಲಿಗಳು ಮಾತ್ರ ಈ ವಿಡಿಯೋ ನೋಡಿದರೆ ಒಳಿತು

ವಿಡಿಯೋ ನೋಡಿದ ನೆಟ್ಟಿಗರಂತೂ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬರೋಬ್ಬರಿ 8000 ಕಾಮೆಂಟ್​​ಗಳನ್ನು ಗಳಿಸಿರುವ ಈ ವಿಡಿಯೋ ಸದ್ಯಕ್ಕಂತೂ ಇಂಟರ್​ನೆಟ್​​ನಲ್ಲಿ ಸೆನ್ಸೇಶನ್​ ಮೂಡಿಸಿದೆ.

ಹಾವನ್ನು ಮೂಗಿನಲ್ಲಿ ಹಾಕಿ..ಬಾಯಿಯಿಂದ ಹೊರಗೆ ತೆಗೆಯುತ್ತಾರೆ ಇವರು; ಧೈರ್ಯಶಾಲಿಗಳು ಮಾತ್ರ ಈ ವಿಡಿಯೋ ನೋಡಿದರೆ ಒಳಿತು
ಮೂಗಿನಲ್ಲಿ ಹಾವು ಹಾಕಿ, ಬಾಯಿಯಿಂದ ಹೊರ ತೆಗೆಯುವ ವ್ಯಕ್ತಿ
Follow us
TV9 Web
| Updated By: Lakshmi Hegde

Updated on:Jul 03, 2021 | 4:49 PM

ಇಂಟರ್​​ನೆಟ್​​ನಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ಸಿಕ್ಕಾಪಟೆ ಭಯ ಹುಟ್ಟಿಸುವಂತೆ ಇರುತ್ತವೆ. ಅದರಾಚೆ ಒಂದಷ್ಟು ಫನ್ನಿ ವಿಡಿಯೋಗಳೂ ನೋಡಲು ಸಿಗುತ್ತವೆ. ಆದರೆ ಈಗ ಇಲ್ಲಿ ನಾವು ಹೇಳಲು ಹೊರಟಿರುವುದು ಖಂಡಿತ ಒಂದು ಭಯ ಹುಟ್ಟಿಸುವ, ಅಚ್ಚರಿ ಉಂಟು ಮಾಡುವ ವಿಡಿಯೋ ಬಗ್ಗೆ. ನೀವು ಹಾವುಗಳಿಗೆ ಸಂಬಂಧಿಸಿದ, ಹಾವುಗಳನ್ನಿಟ್ಟುಕೊಂಡು ಸಾಹಸ ಮಾಡುವ ಮನುಷ್ಯರ ಅದೆಷ್ಟೋ ವಿಡಿಯೋಗಳನ್ನು ನೋಡಿರುತ್ತೀರಿ. ಆದರೆ ಇದು ತುಸು ವಿಭಿನ್ನ. ಎಂಥವರಿಗಾದರೂ ಒಮ್ಮೆ ಶಾಕ್​ ಆಗಿಯೇ ಆಗುತ್ತದೆ. ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಬಾಲಿವುಡ್​ ನಟ ವಿದ್ಯುತ್​ ಜಮ್ವಾಲ್​, ನಾನು ನನ್ನ ದೇಶ ಭಾರತವನ್ನು ತುಂಬ ಪ್ರೀತಿಸುತ್ತೇನೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಅಷ್ಟಕ್ಕೂ ಆ ವಿಡಿಯೋ ಏನೆಂದರೆ, ಇಲ್ಲೊಬ್ಬ ವಯಸ್ಸಾದ ವ್ಯಕ್ತಿ ಒಂದು ಸಣ್ಣ ಹಾವನ್ನು ಮೂಗಿನಲ್ಲಿ ಒಳ ಸೇರಿಸಿ, ಬಾಯಿಯಿಂದ ಹೊರತೆಗೆಯುತ್ತಾರೆ. ಆ ಹಾವಿನ ತಲೆ ಬಾಗವನ್ನು ಮೊದಲು ಮೂಗಿನ ಹೊಳ್ಳೆಯೊಳಗೆ ಸೇರಿಸುವ ಅವರು, ಸಾವಕಾಶವಾಗಿ ಬಾಯಿಯಿಂದ ಹೊರ ತೆಗೆಯುವುದನ್ನು ನೋಡಿದರೆ ಮೈ ಜುಂ ಅನ್ನದೆ ಇರದು. ಹಾವು ಮಿಜಿಗುಡುವುದನ್ನೂ ನೀವು ಈ ವಿಡಿಯೋದಲ್ಲಿ ನೋಡಬಹುದು. ನಟ ವಿದ್ಯುತ್​ ಜಮ್ವಾಲ್ ನಿನ್ನೆಯಷ್ಟೇ ಈ ವಿಡಿಯೋ ಪೋಸ್ಟ್ ಮಾಡಿದ್ದು, ಈಗಾಗಲೇ 20 ಲಕ್ಷ ವೀವ್ಸ್​ ಪಡೆದುಕೊಂಡಿದೆ.

ವಿಡಿಯೋ ನೋಡಿದ ನೆಟ್ಟಿಗರಂತೂ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬರೋಬ್ಬರಿ 8000 ಕಾಮೆಂಟ್​​ಗಳನ್ನು ಗಳಿಸಿರುವ ಈ ವಿಡಿಯೋ ಸದ್ಯಕ್ಕಂತೂ ಇಂಟರ್​ನೆಟ್​​ನಲ್ಲಿ ಸೆನ್ಸೇಶನ್​ ಮೂಡಿಸಿದೆ. ಬಹುಪಾಲು ಜನರು ಇದು ನಿಜಕ್ಕೂ ಅದ್ಭುತ ಎಂದು ಹೇಳಿದ್ದಾರೆ. ಆದರೆ ಒಂದಷ್ಟು ಮಂದಿ ಇದು ಪ್ರಾಣಿ ಹಿಂಸೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇರಲಿ..ನೀವೊಮ್ಮೆ ಈ ವಿಡಿಯೋ ನೋಡಿ. ಆದರೆ ದುರ್ಬಲ ಹೃದಯದ, ತೀವ್ರವಾಗಿ ಭಯವಿರುವವರು ದಯವಿಟ್ಟು ನೋಡಲೇಬೇಡಿ.

ಇದನ್ನೂ ಓದಿ: ಬೆಳ್ಳಿ ಪರದೆಯಲ್ಲಿ ಉತ್ತುಂಗದಲ್ಲಿರುವಾಗಲೇ ಕಿರುತೆರೆಗೆ ಕಾಲಿಟ್ಟ ನಟ ರಣವೀರ್​ ಸಿಂಗ್​

A Man inserts snake into nose and pull it out by Mouth video viral

Published On - 4:41 pm, Sat, 3 July 21