ಘಾಜಿಯಾಬಾದ್: ಗೆಳೆಯರ ಹುಡುಗಾಟಕ್ಕೆ ಯುವಕನ ಕರುಳು ಛಿದ್ರ

ಘಾಜಿಯಾಬಾದ್​ನಲ್ಲಿ ತಮಾಷೆಗೆಂದು ಈರ್ವರು ಗೆಳೆಯರು 28 ವರ್ಷದ ಯುವಕನ ಗುಪ್ತಾಂಗಕ್ಕೆ ಏರ್ ಕಂಪ್ರೆಸರ್​ ಅನ್ನು ಹಾಕಿದ್ದರಿಂದ ಆತನ ಕರುಳಿನ ಭಾಗವು ಗಂಭೀರವಾಗಿ ಹಾನಿಗೊಳಗಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೆಳೆಯರನ್ನು ಬಂಧಿಸಿದ್ದಾರೆ.

ಘಾಜಿಯಾಬಾದ್: ಗೆಳೆಯರ ಹುಡುಗಾಟಕ್ಕೆ ಯುವಕನ ಕರುಳು ಛಿದ್ರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 03, 2021 | 8:45 PM

ಘಾಜಿಯಾಬಾದ್​ನಲ್ಲಿ ತಮಾಷೆಗೆಂದು ಈರ್ವರು ಗೆಳೆಯರು 28 ವರ್ಷದ ಯುವಕನ ಗುಪ್ತಾಂಗಕ್ಕೆ ಏರ್ ಕಂಪ್ರೆಸರ್​ ಅನ್ನು ಹಾಕಿದ್ದರಿಂದ ಆತನ ಕರುಳಿನ ಭಾಗವು ಗಂಭೀರವಾಗಿ ಹಾನಿಗೊಳಗಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಕೃತ್ಯಕ್ಕೆ ಒಳಗಾಗಿರುವ ಸಂದೀಪ್ ಎಂಬ ಯುವಕ ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಆತ ಗುಣಮುಖನಾಗಲು ಆರು ತಿಂಗಳೇ ಬೇಕಾಗಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಯುವಕನ ಸ್ನೇಹಿತರಾದ ಅಂಕಿತ್ ಮತ್ತು ಗೌತಮ್ ಎಂಬ ಈರ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ನೋಯ್ಡಾದಲ್ಲಿ ಹಾನಿಗೊಳಗಾದ ಯುವಕನೊಂದಿಗೆ ಲಘು ಆಹಾರಗಳನ್ನು ತಯಾರಿಸುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಅಂಕಿತ್ ಮತ್ತು ಗೌತಮ್ ಏರ್ ಕಂಪ್ರೆಸರ್​ ಪೈಪ್​ಅನ್ನು ತಮಾಷೆಗೆಂದು ಸಂದೀಪ್ ಅವರ ಗುಪ್ತಾಂಗಕ್ಕೆ ಹಾಕಿ ಅದರಿಂದ ಪ್ರೆಶರ್ ರಿಲೀಸ್ ಮಾಡಿದ್ದಾರೆ. ಈ ನಡುವೆ ಸಂದೀಪ್ ಓಡಲು ಪ್ರಯತ್ನಿಸಿದರೂ ತಕ್ಷಣವೇ ರಕ್ತ ವಾಂತಿಯಾಗಲು ಪ್ರಾರಂಭವಾಗಿದೆ. ಸ್ಥಳದಲ್ಲಿದ್ದವರೆಲ್ಲರೂ ದೌಡಾಯಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಂದೀಪ್​ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸಂದೀಪ್​ನನ್ನು ಆಸ್ಪತ್ರೆಗೆ ಕರೆತರುವಾಗ ಆತನ ಹೊಟ್ಟೆ ಊದಿಕೊಂಡಿತ್ತು. ಸಣ್ಣ ಕರುಳು ಹಾಗೂ ಗುಪ್ತಾಂಗವು ಛಿದ್ರಗೊಂಡಿತ್ತು ಎಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ಪ್ರಕಾಶ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಅರುಣಾ ರೆಡ್ಡಿ ತಿಳಿಸಿದ್ದಾರೆ. ಆತನ ಗೆಳೆಯರನ್ನು ಬಂಧಿಸಿರುವ ಪೊಲೀಸರು ಐಪಿಸಿ 307(ಕೊಲೆಗೆ ಯತ್ನ) ಮತ್ತು ಐಪಿಸಿ 323 (ಸ್ವಯಂಪ್ರೇರಣೆಯಿಂದ ಹಾನಿಗೆ ಯತ್ನ)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹರಿಹರದಲ್ಲಿ 3 ವರ್ಷದ ಹೆಣ್ಣು ಮಗುವಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ

ಕೊವಿಡ್​ 19 ಮಾತ್ರೆಯೆಂದು ವಿಷದ ಮಾತ್ರೆ ಕೊಟ್ಟು ಮೂವರ ಹತ್ಯೆ; ಆರೋಗ್ಯ ಕಾರ್ಯಕರ್ತೆಯೂ ಕೊಲೆ ಸಂಚಿನಲ್ಲಿ ಭಾಗಿ

(Ghaziabad Man’s intestines burst when friends inserted air compressor)

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ