ಶೀತ, ಕಿವಿ ಬ್ಲಾಕ್ ಆಗಿದೆ ಎಂದು ವೈದ್ಯರ ಬಳಿ ಹೋದಾಗ ಕಿವಿಯೊಳಗೆ ಸಿಕ್ಕಿದ್ದು 22 ವರ್ಷ ಹಳೆಯ ವಸ್ತು!
ಇಷ್ಟು ಚೆನ್ನಾಗಿ ನನಗೆ ಕಿವಿ ಕೇಳಿಸುತ್ತದೆ ಈಗ ಎಂದು ತಿಳಿದು ಆಕೆ ಆಶ್ಚರ್ಯ ಹಂಚಿಕೊಂಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಹಲವರು ತಮ್ಮ ಅನುಭವವನ್ನೂ ಹೇಳಿಕೊಂಡಿದ್ದಾರೆ. ಒಬ್ಬರು ನನಗೆ ಹೀಗೇನೂ ಆಗಿಲ್ಲದೇ ಇದ್ದರೆ ಸಾಕು ಎಂದು ಬರೆದಿದ್ದಾರೆ.

ಕಿವಿಯ ಕಶ್ಮಲ ಅಥವಾ ವ್ಯಾಕ್ಸ್ ಎಂದು ಕರೆಯುವ ದೇಹದ ಬೇಡವಾದ ಕೊಳಕನ್ನು ತೆಗೆಯುವ ಸಂದರ್ಭದ ಘಟನೆಯೊಂದು ನೆಟ್ಟಿಗರನ್ನು ಚಕಿತಗೊಳಿಸಿದೆ. ಒಬ್ಬಾಕೆ ಹುಡುಗಿ ಶೀತ ಆಗಿರುವ ಬಗ್ಗೆ ವೈದ್ಯರಲ್ಲಿ ತಿಳಿಸಿದ್ದಳು. ಅದಕ್ಕಾಗಿ ಚಿಕಿತ್ಸೆ ಪಡೆಯಲು ವೈದ್ಯರ ಬಳಿಗೂ ಹೋಗಿದ್ದಳು. ಈ ವೇಳೆ ವೈದ್ಯರು ಆಕೆಯ ಕಿವಿಯನ್ನು ಸ್ವಚ್ಛಗೊಳಿಸಲು ಹೊರಟಿದ್ದಾರೆ. ಆಗ ಅವರಿಗೆ 22 ವರ್ಷದ ಹಿಂದಿನ ವಸ್ತುವೊಂದು ಕಿವಿಯೊಳಗೆ ಸಿಕ್ಕಿದೆ.
26 ವರ್ಷ ವಯಸ್ಸಿನ ಜೋರ್ಡನ್ ಎಂಬ ಮಹಿಳೆ ಶೀತ ಹಾಗೂ ಸೈನಸ್ ಇನ್ಫೆಕ್ಷನ್ ಕಾರಣದಿಂದ ವೈದ್ಯರ ಬಳಿಗೆ ಹೋಗಿದ್ದಾಳೆ. ಈ ವೇಳೆ ಈ ಆಶ್ಚರ್ಯಕರ ಘಟನೆ ಸಂಭವಿಸಿದೆ. ಶೀತಕ್ಕೆಂದು ವೈದ್ಯರ ಬಳಿಗೆ ಹೋಗಾದ ಸರ್ಪ್ರೈಸಿಂಗ್ ಘಟನೆ ನಡೆದಿದೆ ಎಂದು ಆಕೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ.
ಕಿವಿಯೊಳಗೆ ಸಿಕ್ಕಿರುವ ಆ ವಸ್ತು ಬೇರೇನೂ ಅಲ್ಲ. ಆಕೆ 4 ವರ್ಷ ವಯಸ್ಸಿನವಳಾಗಿ ಇರುವಾಗ ಆಕೆಯ ಕಿವಿಗೆ ತೆಳುವಾದ ಟ್ಯೂಬ್ ಹಾಕಲಾಗಿತ್ತು. ಬಾಲ್ಯದ ಆರೋಗ್ಯ ಸಮಸ್ಯೆಯಾದ ಗ್ಲೂ ಇಯರ್ ಎಂಬ ಸಮಸ್ಯೆಯನ್ನು ತಡೆಗಟ್ಟಲು ಹೀಗೆ ಮಾಡಲಾಗಿತ್ತು. ಗ್ಲೂ ಇಯರ್ ಬಳಸುವ ಮೂಲಕ ಕಿವಿ ಕೇಳಿಸದ ಟೆಂಪರರಿ ಸಮಸ್ಯೆಯನ್ನು ಪರಿಹಾರ ಮಾಡಿದಂತಾಗಿತ್ತು. ಅದೇ ಟ್ಯೂಬ್ ಇಷ್ಟು ವರ್ಷಗಳ ಬಳಿಕ ಸಿಕ್ಕಿದೆ.
ಆದರೆ ಇದು ಆಶ್ಚರ್ಯಕರ ಸಂಗತಿ ಏಕೆ ಎಂಬುದಕ್ಕೆ ಇಲ್ಲಿ ಉತ್ತರವಿದೆ. ಸಾಮಾನ್ಯವಾಗಿ ಹೀಗೆ ಬಳಸಿಕೊಂಡ ಟ್ಯೂಬ್ 6ರಿಂದ 12 ತಿಂಗಳ ಅವಧಿಯಲ್ಲಿ ಉದುರಿ ಹೋಗುತ್ತದೆ. ಮಗುವಿನ ಕಿವಿ ಆರೋಗ್ಯ ಸುಧಾರಿಸುತ್ತಿದ್ದಂತೆ ಅದಾಗದೇ ಉದುರುತ್ತದೆ. ಆದರೆ, ಜೋರ್ಡನ್ ಪ್ರಕರಣದಲ್ಲಿ ಹಾಗಾಗಿಲ್ಲ.
ಆ ಟ್ಯೂಬ್ ಆಕೆಯ ಕಿವಿಯಲ್ಲೇ ಉಳಿದುಕೊಂಡಿದ್ದು, ಸುತ್ತಲೂ ವ್ಯಾಕ್ಸ್ ಕಶ್ಮಲ ತುಂಬಿಕೊಂಡಿತ್ತು. ಈ ಟ್ಯೂಬ್ ಹಾಗೂ ಕಶ್ಮಲ ತೆಗೆದ ಬಳಿಕ ಆಕೆಯ ಕಿವಿ ಇನ್ನಷ್ಟು ಚೆನ್ನಾಗಿ ಕೇಳಲು ಆರಂಭ ಆಗಿದೆಯಂತೆ. ಜೊತೆಗೆ ಉಳಿದ ಸಮಸ್ಯೆಯೂ ಬಹುತೇಕ ಕಡಿಮೆ ಆದಂತಾಗಿದೆ.
ಇಷ್ಟು ಚೆನ್ನಾಗಿ ನನಗೆ ಕಿವಿ ಕೇಳಿಸುತ್ತದೆ ಈಗ ಎಂದು ತಿಳಿದು ಆಕೆ ಆಶ್ಚರ್ಯ ಹಂಚಿಕೊಂಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಹಲವರು ತಮ್ಮ ಅನುಭವವನ್ನೂ ಹೇಳಿಕೊಂಡಿದ್ದಾರೆ. ಒಬ್ಬರು ನನಗೆ ಹೀಗೇನೂ ಆಗಿಲ್ಲದೇ ಇದ್ದರೆ ಸಾಕು ಎಂದು ಬರೆದಿದ್ದಾರೆ. ಮತ್ತೊಬ್ಬರು ತಮ್ಮ ಕಿವಿ ಶಸ್ತ್ರಚಿಕಿತ್ಸೆ ಅನುಭವ ಹೇಳಿಕೊಂಡಿದ್ದಾರೆ.
ಹಾಗೂ ಕೆಲವರು ಆಕೆಗೆ ಈ ಟ್ಯೂಬ್ನಿಂದ ಕಿವಿ ನೋವು ಏನೂ ಕಾಣಿಸಿಕೊಂಡಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಆಕೆ ಇಲ್ಲ ಎಂದೇ ಹೇಳಿದ್ದಾಳೆ. ನನ್ನ ಕಿವಿ ಕೆಲವೊಂದು ಬಾರಿ ಬ್ಲಾಕ್ ಆದಂತೆ ಅನಿಸುತ್ತಿತ್ತು. ನಾನು ಅದು ಅಲರ್ಜಿ ಹಾಗೂ ಇತರ ಬ್ಲಾಕ್ಗಳಿಂದ ಎಂದುಕೊಂಡಿದ್ದೆ ಎಂದು ಆಕೆ ಹೇಳಿದ್ದಾಳೆ.
ಇದನ್ನೂ ಓದಿ: Viral Video: ಕುಡಿದು ರಂಪಾಟ ಮಾಡಿದವನಿಗೆ ಚಟ ಬಿಟ್ಟುಹೋಗುವಂತೆ ಬಾರಿಸಿದ ಮಹಿಳೆ! ವಿಡಿಯೋ ನೋಡಿ
Viral Video: ಆತ್ಮರಕ್ಷಣೆ ಜಾಗೃತಿ ಮೂಡಿಸಲು ಸಮರ ಕಲೆ ಪ್ರದರ್ಶಿಸಿದ ವಧು; ವಿಡಿಯೋ ನೋಡಿ




