AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಸೀರೆಯ ಮೇಲೆ ಮಗಳು ಖರೀದಿಸಿದ ಅತ್ಯಂತ ದುಬಾರಿ​ ಬೆಲ್ಟ್​ ಧರಿಸಿ ನಿಂತ ತಾಯಿ; ಹೊಸ ಸ್ಟೈಲ್​ ಹೊಸ ಲುಕ್ ನೋಡಿದ್ರೆ ನೀವೂ ಫಿದಾ ಆಗ್ತೀರಾ!

ತಾಯಿ ಪಿಂಕ್​ ಬಣ್ಣದ ಪ್ಲೇನ್​ ಸೀರೆಯುಟ್ಟು ನಗುತ್ತಾ ನಿಂತಿದ್ದಾರೆ. ಅವರ ಮುಖದಲ್ಲಿನ ಸಂತೋಷವನ್ನು ನೋಡಬಹುದು. ತಮ್ಮ ಮಗಳು ಖರೀದಿಸಿದ ಬೆಲ್ಟ್​ ಧರಿಸಿ ನಿಂತಿದ್ದಾರೆ. ಈ ಹೊಸ ತೆರೆನಾದ ವಿನ್ಯಾಸವು ನೆಟ್ಟಿಗರ ಮನ ಗೆದ್ದಿದೆ.

Viral Photo: ಸೀರೆಯ ಮೇಲೆ ಮಗಳು ಖರೀದಿಸಿದ ಅತ್ಯಂತ ದುಬಾರಿ​ ಬೆಲ್ಟ್​ ಧರಿಸಿ ನಿಂತ ತಾಯಿ; ಹೊಸ ಸ್ಟೈಲ್​ ಹೊಸ ಲುಕ್ ನೋಡಿದ್ರೆ ನೀವೂ ಫಿದಾ ಆಗ್ತೀರಾ!
ಸೀರೆಯುಟ್ಟು, ಮಗಳು ಖರೀದಿಸಿದ ಅತ್ಯಂತ ದುಬಾರಿ​ ಬೆಲ್ಟ್​ ಧರಿಸಿ ನಿಂತ ತಾಯಿ!
TV9 Web
| Edited By: |

Updated on:Jul 04, 2021 | 11:44 AM

Share

ದಿನ ಕಳೆದಂತೆ ಹೊಸ ಹೊಸ ಶೈಲಿಯ ಉಡುಗೆ ತೊಡುಗೆಗಳು ಟ್ರೆಂಡ್​ ಆಗುತ್ತಲೇ ಇರುತ್ತವೆ. ಅದರಲ್ಲಿಯೂ ವಿವಿಧ ವಿನ್ಯಾಸದ ಸೀರೆಗಳು ಮಹಿಳೆಯರಿಗೆ ಇಷ್ಟವಾಗುತ್ತದೆ. ಈಗೀಗ ಹೊಸ ವಿನ್ಯಾಸದೊಂದಿಗೆ ಮಹಿಳೆಯರು ಸೀರೆಯುಟ್ಟು ಸ್ಟೈಲ್​ ಆಗಿ ರೆಡಿಯಾಗುತ್ತಿದ್ದಾರೆ. ಹೊಸ ವಿನ್ಯಾಸದಲ್ಲಿ  ಕಾಣಿಸುವಂತೆ ಮಗಳ ಕಾಸ್ಟ್ಲಿಯೆಸ್ಟ್​ ಬೆಲ್ಟ್​ ಧರಿಸಿದ್ದಾರೆ ಇಲ್ಲೋರ್ವರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊ ಬಾರೀ ಸುದ್ದಿಯಲ್ಲಿದೆ. ಹೊಸ ರೀತಿಯ ಸ್ಟೈಲ್ ನೆಟ್ಟಿಗರ ಮನ ಸೆಳೆದಿದೆ.

ತಾಯಿ ಪಿಂಕ್​ ಬಣ್ಣದ ಪ್ಲೇನ್​ ಸೀರೆಯುಟ್ಟು ನಗುತ್ತಾ ನಿಂತಿದ್ದಾರೆ. ಅವರ ಮುಖದಲ್ಲಿನ ಸಂತೋಷವನ್ನು ನೋಡಬಹುದು. ತಮ್ಮ ಮಗಳು ಖರೀದಿಸಿದ ಬೆಲ್ಟ್​ ಧರಿಸಿ ನಿಂತಿದ್ದಾರೆ. ಈ ಹೊಸ ತೆರೆನಾದ ವಿನ್ಯಾಸವು ನೆಟ್ಟಿಗರ ಮನ ಗೆದ್ದಿದೆ.

ಮಗಳು ಈ ಹಿಂದೆ ಖರೀದಿಸಿದ ಬೆಲ್ಟ್​ ದುಡ್ಡು ನೋಡಿ ಮಹಿಳೆ ಶಾಕ್​ ಆಗಿದ್ದರು. ಈ ಬೆಲ್ಟ್​ಗೆ 35,000 ರೂಪಾಯಿ ಅಂದಾಕ್ಷಣ.. ದುಡ್ಡು ಮಾತ್ರ ಇಷ್ಟಿದೆ.. ನೋಡಲು ಒಳ್ಳೆ ಸ್ಕೂಲ್​ ಬೆಲ್ಟ್​ನಂತೆಯೇ ಇದೆ ಎಂದು ಹೇಳಿರುವ ದೃಶ್ಯ ಎಲ್ಲರ ಮುಖದಲ್ಲಿ ನಗು ತರಿಸಿತ್ತು. ಇದೀಗ ಅದೇ ಬೆಲ್ಟ್​ ಧರಿಸಿ ಸ್ಟೈಲಿಶ್​ ಆಗಿ ನಿಂತಿರುವ ಫೋಟೋ ನೆಟ್ಟಿಗರ ನ ಗೆದ್ದಿದೆ.

ಮೊದಲು ಬೆಲ್ಟ್ ನೋಡಿದ ಯುವತಿಯ ತಾಯಿ ಅದನ್ನು ಎಲ್ಲಾ ರೀತಿಯಲ್ಲೂ ಪರಿಶೀಲಿಸಿ ಇದು ಡೆಲ್ಲಿ ಪಬ್ಲಿಕ್​ ಸ್ಕೂಲ್ ಮಕ್ಕಳ ಯೂನಿಫಾರ್ಮ್​ ಬೆಲ್ಟ್ ಇದ್ದ ಹಾಗಿದೆ ಎಂದು ಒಂದೇ ಮಾತಿನಲ್ಲಿ ತೀರ್ಪು ಕೊಟ್ಟುಬಿಟ್ಟಿದ್ದರು. ನಂತರ ಅದರ ಮೌಲ್ಯ 35 ಸಾವಿರ ರೂಪಾಯಿ ಎಂದಾಗ ಶಾಕ್​ಗೆ ಒಳಗಾದ ಯುವತಿಯ ಅಮ್ಮ, ಇದಕ್ಯಾಕೆ ಅಷ್ಟೊಂದು ದುಡ್ಡು? 150 ರೂಪಾಯಿಗೆ ಈ ಥರದ್ದು ಸಿಗುತ್ತಿತ್ತು ಎಂದು ಹೇಳಿ ಮಗಳನ್ನೇ ದಿಟ್ಟಿಸಿದ್ದರು..

ಆದರೆ, ಇದನ್ನೆಲ್ಲಾ ವಿಡಿಯೋ ಮಾಡಿಕೊಳ್ಳುತ್ತಿದ್ದ ಮಗಳು ಮಾತ್ರ ಅಮ್ಮನ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದರು. ಆದರೆ ಮಕ್ಕಳು ಏನೇ ಕೊಂಡರೂ ಸಹ ಅಮ್ಮಂದಿರು ಖುಷಿ ಪಡುತ್ತಾರೆ. ಅವರೂ ಧರಿಸಿ ಮಕ್ಕಳ ಸಂತೋಷವನ್ನೇ ಬಯಸುತ್ತಾರೆ ಎಂಬುದು ಈ ಫೋಟೋ ಮೂಲಕ ವ್ಯಕ್ತವಾಗಿದೆ. ಬೆಲ್ಟ್​ ದರ ಕೇಳಿದ ಅಮ್ಮ ಮೊದಲು ಸಿಡಿದೆದ್ದಿದ್ದರೂ ಸಹ ಇದೀಗ ಮಗಳ ಮುಖದಲ್ಲಿ ಸಂತೋಷ ಕಾಣಲು ಅವರೇ ಬೆಲ್ಟ್​ ಧರಿಸಿ ಸ್ಟೈಲ್ ಆಗಿ ನಿಂತಿರುವ ಫೋಟೋ ಸಾಕ್ಷಿ.

ಇದನ್ನೂ ಓದಿ:

ಬರೋಬ್ಬರಿ 35 ಸಾವಿರ ರೂಪಾಯಿ ಕೊಟ್ಟು ಬ್ರ್ಯಾಂಡೆಡ್​ ಬೆಲ್ಟ್​ ಖರೀದಿಸಿದ ಮಗಳಿಗೆ ತಿರುಗೇಟು ಕೊಟ್ಟ ಅಮ್ಮ; ವಿಡಿಯೋ ವೈರಲ್

ಬೈಕಲ್ಲಿ ಸೈಡ್​ ಮಿರರ್ ಇಲ್ಲ ಅಂದ್ರೆ, ಕಾರಿನ ಹಿಂಬದಿಯಲ್ಲಿ ಕುಳಿತವರು ಸೀಟ್​ ಬೆಲ್ಟ್​ ಧರಿಸಿಲ್ಲ ಅಂದ್ರೆ ಬೀಳುತ್ತೆ ದಂಡ

Published On - 11:40 am, Sun, 4 July 21

Follow Us
TV9 Web
TV9 Web

TV9 Kannada

Read More
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ