Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆತ್ಮರಕ್ಷಣೆ ಜಾಗೃತಿ ಮೂಡಿಸಲು ಸಮರ ಕಲೆ ಪ್ರದರ್ಶಿಸಿದ ವಧು; ವಿಡಿಯೋ ನೋಡಿ

ಆತ್ಮರಕ್ಷಣೆಯ ಮಹತ್ವದ ಜತೆಗೆ ಕಲೆಯ ಪ್ರಕಾರವನ್ನು ತಿಳಿಸಲು ಮದುವೆಯ ಬಳಿಕ ಜನರ ಮುಂದೆ ಸಾಂಪ್ರಾದಾಯಿಕ ಸಮರ ಕಲೆಯನ್ನು ಪ್ರದರ್ಶಿಸಿದ್ದೇನೆ. ಕಳೆದ ಮೂರು ವರ್ಷಗಳಿಂದ ನಾನು ಕಲೆಯನ್ನು ಅಭ್ಯಾಸ ಮಾಡುತ್ತಿದ್ದೇನೆ ಎಂದು ನಿಶಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Viral Video: ಆತ್ಮರಕ್ಷಣೆ ಜಾಗೃತಿ ಮೂಡಿಸಲು ಸಮರ ಕಲೆ ಪ್ರದರ್ಶಿಸಿದ ವಧು; ವಿಡಿಯೋ ನೋಡಿ
ಆತ್ಮರಕ್ಷಣೆ ಜಾಗೃತಿ ಮೂಡಿಸಲು ಸಮರ ಕಲೆ ಪ್ರದರ್ಶಿಸಿದ ವಧು
Follow us
TV9 Web
| Updated By: shruti hegde

Updated on:Jul 02, 2021 | 5:12 PM

ಆತ್ಮವಿಶ್ವಾಸದ ಕುರಿತಾಗಿ ಜಾಗೃತಿ ಮೂಡಿಸಲು ಮಹಿಳೆ ಸಮರ ಕಲೆಯನ್ನು ಪ್ರದರ್ಶಿಸಿದ್ದಾರೆ. ತನ್ನ ಮದುವೆಯ ದಿನದಂದೇ ಸಿಂಗಾರಗೊಂಡ ಮದುವೆ ವಸ್ತ್ರದಲ್ಲಿಯೇ ವಧು ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ವಧು ನಿಶಾ ಆತ್ಮರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಸಮರ ಕಲೆಯನ್ನು ಪ್ರದರ್ಶಿಸಿದ್ದಾರೆ. 22 ವರ್ಷದ ನಿಶಾ ತನ್ನ ಮದುವೆಯ ಉಡುಪಿನಲ್ಲಯೇ ಶಸ್ತ್ರಾಸ್ತ್ರಗಳನ್ನು ಹಿಡಿದು ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ಕಲಾ ಪ್ರಕಾರವನ್ನು ಅಭ್ಯಾಸ ಮಾಡುತ್ತಿರುವ ನಿಶಾ, ಮಹಿಳೆಯರಲ್ಲಿ ಆತ್ಮರಕ್ಷಣೆಯ ಮಹತ್ವವನ್ನು ಮತ್ತು ಕಲಾ ಪ್ರಕಾರವನ್ನು ಉತ್ತೇಜಿಸಲು ಬಯಸುತ್ತೇನೆ ಎಂದು ಎಎನ್ಐಗೆ ತಿಳಿಸಿದ್ದಾರೆ.

‘ಆತ್ಮರಕ್ಷಣೆಯ ಮಹತ್ವದ ಜತೆಗೆ ಕಲೆಯ ಪ್ರಕಾರವನ್ನು ತಿಳಿಸಲು ಮದುವೆಯ ಬಳಿಕ ಜನರ ಮುಂದೆ ಸಾಂಪ್ರಾದಾಯಿಕ ಸಮರ ಕಲೆಯನ್ನು ಪ್ರದರ್ಶಿಸಿದ್ದೇನೆ. ಕಳೆದ ಮೂರು ವರ್ಷಗಳಿಂದ ನಾನು ಕಲೆಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಹೆಚ್ಚಿನ ಜನರು ಈ ಕಲೆಯನ್ನು ಕಲಿಯಬೇಕು ಎಂದು ನಿಶಾ ಅಭಿಪ್ರಾಯ ಹಂಚಿಕೊಂಡಿದ್ದಾರೆ’.

ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ದೌರ್ಜನ್ಯ, ಶೋಷಣೆ ಎದುರಿಸಲು ಮಹಿಳೆಯರು ಮಾರ್ಷಲ್ ಆರ್ಟ್ಸ್​, ಕರಾಟೆಯಂತಹ ಸಮರ ಕಲೆಗಳನ್ನು ಕಲಿಯಲು ಮುಂದಾಗುತ್ತಿದ್ದಾರೆ. ತಮ್ಮ ಆತ್ಮ ರಕ್ಷಣೆಗೆ ಇಂತಹ ಕಲೆಗಳು ಅವಶ್ಯಕ ಕೂಡ. ರಕ್ಷಣೆಯ ದಾರಿ ದೀಪವಾಗಿ ಸಮರ ಕಲೆಗಗಳು ಸಹಾಯ ಮಾಡುತ್ತವೆ.  ಸಮರ ಕಲೆಯನ್ನು ಜನರೆದುರು ಪ್ರದರ್ಶಿಸಿದ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು

Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ

Published On - 3:12 pm, Fri, 2 July 21

ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ