Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ.

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು
ಬಲವಂತವಾಗಿ ಲಾಡು ತಿನ್ನಿಸಿದ ವರ
Follow us
TV9 Web
| Updated By: Lakshmi Hegde

Updated on:Jul 01, 2021 | 5:49 PM

ಮದುವೆ ಎಂದರೆ ಅಲ್ಲಿ ಹಲವಾರು ಸಂಪ್ರದಾಯ, ಆಚರಣೆಗಳು ನಡೆಯುತ್ತದೆ. ಹಾಗೇ ಮದುವೆ ಮುಗಿದ ಬಳಿಕ ವಧು-ವರ ಪರಸ್ಪರ ಲಾಡು ಅಥವಾ ಇನ್ನಿತರ ಯಾವುದಾದರೂ ಒಂದು ಸಿಹಿಯನ್ನು ತಿನ್ನಿಸಿಕೊಳ್ಳುತ್ತಾರೆ. ಈ ಮದುವೆಯಲ್ಲಿ ಪತಿ ತನ್ನ ಪತ್ನಿಗೆ ಲಾಡು ತಿನ್ನಿಸಿದ ರೀತಿ ನಿಜಕ್ಕೂ ಕೋಪತರಿಸುವಂತಿದೆ. ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು, ಇದು ಪ್ರೀತಿಯಲ್ಲ..ದೌರ್ಜನ್ಯ. ಮದುವೆ ದಿನವೇ ಪತ್ನಿಯನ್ನು ಹಿಂಸಿಸಿದ ಈ ವ್ಯಕ್ತಿ ಇನ್ನು ಮುಂದೆಯೂ ಹಾಗೇ ನಡೆಸಿಕೊಳ್ಳುತ್ತಾನೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಿದ್ದಿಷ್ಟು..ಮದುವೆ ಮುಗಿದಿದೆ. ವಧು-ವರ ಇಬ್ಬರೂ ಹಾರ ಹಾಕಿಕೊಂಡೇ ಇದ್ದಾರೆ. ಬಂಧುಬಳಗದವರೂ ಸುತ್ತಲೂ ಇದ್ದಾರೆ. ವಧುವಿನ ಕೈಯಲ್ಲಿ ಲಾಡು ಕೊಟ್ಟು ಅದನ್ನು ಪತಿಗೆ ತಿನ್ನಿಸುವಂತೆ ಮೊದಲು ಹೇಳಲಾಯಿತು. ಅದರಂತೆ ಆಕೆ ಆತನ ಬಾಯಿಗೆ ಇಟ್ಟಳು. ಒಂದೇ ಗುಟುಕಿಗೆ ಆ ಲಾಡನ್ನು ಅವನೇನೋ ತಿಂದ. ಆದರೆ ತಿರುಗಿ ವರ ತನ್ನ ಪತ್ನಿಗೆ ಲಾಡು ತಿನ್ನಿಸಲು ಬಂದಾಗ ಅವಳು ನಾಚಿಕೆಯಿಂದ ಪಕ್ಕಕ್ಕೆ ಬಾಗಿ, ಮುಖ ತಿರುಗಿಸಿದಳು. ಅದೇನಾಯಿತೋ ಇವನಿಗೆ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ತುರುಕೇಬಿಟ್ಟ… ಈ ವಿಡಿಯೋ ನೋಡಿದರೆ ನಿಮಗೂ ಒಂದು ಕ್ಷಣ ಕ್ರೂರತನ ಅನ್ನಿಸದೆ ಇರದು.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡು, ಇದೊಂದು ಫನ್ನಿ ಎಂದಿದ್ದಾರೆ. ಆದರೆ ನೆಟ್ಟಿಗರು ಇದು ಜೋಕ್​ ಅಲ್ಲ ಬದಲಿಗೆ ದೌರ್ಜನ್ಯ ಎಂದಿದ್ದಾರೆ. ಪತಿಯಾದವನು ಮದುವೆ ದಿನ ಹೀಗೆ ನಡೆಸಿಕೊಳ್ಳುವುದಾ ಎಂದೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Covishield ಕೊವಿಶೀಲ್ಡ್‌ ಲಸಿಕೆ ಪಡೆದವರ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟದ ಏಳು ದೇಶಗಳಿಂದ ಅನುಮತಿ

Groom Forcefully Shoves Ladoo Into Bride’s Mouth

Published On - 5:48 pm, Thu, 1 July 21

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು