ಅದೃಷ್ಟ ಅಂದ್ರೆ ಇದಪ್ಪಾ! ಅವಳಿ ಸಹೋದರರಿಗೆ ಒಂದೇ ಕಂಪನಿಯಲ್ಲಿ ಉದ್ಯೋಗ 50 ಲಕ್ಷ ರೂಪಾಯಿ ಸಂಬಳ
ಸಹೋದದರರಿಬ್ಬರು ತಮ್ಮ ಬಾಲ್ಯವನ್ನು ಜಾರ್ಖಂಡ್ನಲ್ಲಿ ಕಳೆದರು. ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪೌಢ ಶಿಕ್ಷಣವನ್ನು ಅಲ್ಲೇ ಮುಗಿಸಿದರು. ಬಳಿಕ ಹೈದರಾಬಾದ್ನ ಎಸ್ಆರ್ಎಂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು.
ಹೈದರಾಬಾದ್: ಅದೃಷ್ಟ ಕೆಲವು ಬಾರಿ ಒಲಿದು ಬರುತ್ತೆ. ಕೆಲವು ಸತ ಕಷ್ಟಪಟ್ಟು ಶ್ರಮಿಸಿದ ಫಲಕ್ಕೆ ಒಳ್ಳೆಯ ಉದ್ಯೋಗ ಅರಸಿ ಬರುತ್ತೆ. ಇಲ್ಲಿಬ್ಬರು ಅವಳಿ ಸಹೋದರರದ್ದು ಅದೃಷ್ಟವೂ ಹೌದು.. ಶ್ರಮವೂ ಹೌದು.. ತಾವು ಕಲಿತ ಶಿಕ್ಷಣ ಸಂಸ್ಥೆಯಿಂದ ಸಮಾನ ವೇತನದಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿದೆ. ಇಬ್ಬರಿಗೂ ಸಹ ವಾರ್ಷಿಕವಾಗಿ 50 ಲಕ್ಷ ರೂಪಾಯಿ ಸಂಬಳದಲ್ಲಿ ಉದ್ಯೋಗ ಅರಸಿ ಬಂದಿದೆ.
ಸಪ್ತರ್ಶಿ ಮತ್ತು ರಾಜರ್ಶಿ ಮಂಜುದಾರ್ ಇಬ್ಬರು ಅವಳಿ ಸಹೋದರರು. ಮೂಲತಃ ಪಶ್ಚಿಮ ಬಂಗಾಳದವರು. ಆದರೆ ಅವರು ಹುಟ್ಟು ಬೆಳೆದದ್ದು ಜಾರ್ಖಂಡ್ನಲ್ಲಿ. ನಂತರ ಅವರಿಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಾ ಆಂಧ್ರ ಪ್ರದೇಶದ ಎಸ್ಆರ್ಎಂ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಪದವಿ ಪಡೆದರು. ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಗೂಗಲ್ ಜಪಾನ್ನ ಪಾಲುದಾರ ಕಂಪನಿಯಾದ ಪಿವಿಪಿ ಇಂಕ್ ಇವರನ್ನು ಆಯ್ಕೆ ಮಾಡಿಕೊಂಡಿತು.
ಕಂಪನಿಯು ಇಬ್ಬರು ಸಹೋದರರಿಗೂ ವಾರ್ಷಿಕವಾಗಿ 50 ಲಕ್ಷ ರೂಪಾಯಿ ನೀಡಲು ನಿರ್ಧರಿಸಿತು. ಸಂತೋಷಗೊಂಡ ಇಬ್ಬರೂ ಸಹ ಕೆಲಸಕ್ಕೆ ಸೇರಿಕೊಳ್ಳಲು ನಿರ್ಧರಿಸಿದ್ದಾರೆ. ಆಂಧ್ರಪದ್ರೇಶದಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಬಳಿಕ ಅತಿ ಹೆಚ್ಚು ಸಂಬಳ ಪಡೆಯುತ್ತಿರುವವರು ಇವರು.
ಸಹೋದದರರಿಬ್ಬರು ತಮ್ಮ ಬಾಲ್ಯವನ್ನು ಜಾರ್ಖಂಡ್ನಲ್ಲಿ ಕಳೆದರು. ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪೌಢ ಶಿಕ್ಷಣವನ್ನು ಅಲ್ಲೇ ಮುಗಿಸಿದರು. ಬಳಿಕ ಹೈದರಾಬಾದ್ನ ಎಸ್ಆರ್ಎಂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. 22 ವರ್ಷದ ಇಬ್ಬರು ಸಹೋದರರ ತಂದೆ ಹೊಟೆಲ್ನಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಾರೆ.
ತಮ್ಮ ಯಶಸ್ಸನ್ನು ಕಂಡು ಶಿಕ್ಷಣ ಸಂಸ್ಥೆ ಖುಷಿ ಪಟ್ಟಿದೆ. ನಮ್ಮ ಯಶಸ್ಸಿನ ಹಿಂದೆ ಪೋಷಕರ ಪ್ರೇರಣೆ ತುಂಬಾ ಇದೆ. ಅವರೇ ನಮಗೆ ಶಕ್ತಿ ಎಂದು ಇಬ್ಬರು ಸಹೋರರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾವಿಬ್ಬರೂ ಸಹ ಒಟ್ಟಿಗೆ ಬಾಲ್ಯದಿಂದ ಬೆಳೆದಿದ್ದೇವೆ. ಒಟ್ಟಿಗೆ ಶಾಲೆಗೆ ಹೋಗುತ್ತಿದ್ದೆವು. ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದೆವು. ಹಾಗೆಯೇ ಒಂದೇ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಒಟ್ಟಿಗೆ ಕೆಲಸ ಮಾಡಲು ಖುಷಿ ಇದೆ ಎಂದು ಹೇಳಿದ್ದಾರೆ. ಇದೀಗ ಸಪ್ತರ್ಶಿ ಮತ್ತು ರಾಜರ್ಶಿ ಉದ್ಯೋಗಕ್ಕಾಗಿ ಒಟ್ಟಿಗೆ ವಿದೇಶಕ್ಕೆ ಹೋಗಲು ಕಾಯುತ್ತಿದ್ದಾರೆ.
ಇದನ್ನೂ ಓದಿ:
ಪಶ್ಚಿಮಬಂಗಾಳದಲ್ಲಿ ಸಿಡಿಲು ದುರಂತಕ್ಕೆ 20 ಮಂದಿ ಸಾವು; ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಪರಿಹಾರ