ಹೈದರಾಬಾದ್ ವಿವಿ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಪ್ರೇಮ ವೈಫಲ್ಯ ಕಾರಣ: ಸಿ.ಟಿ.ರವಿ

ಇಂದು ರಾಜ್ಯ ರೈತಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಟಿ ರವಿ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪ್ರತಿಪಕ್ಷಗಳು ಹೇಗೆ ಹೊಟ್ಟೆಕಿಚ್ಚು ಪಡುತ್ತಿವೆ ಎಂಬ ಬಗ್ಗೆ ವಿವರಿಸಿದರು. ಅದಕ್ಕೆ ಉದಾಹರಣೆಯಾಗಿ ಈ ರೋಹಿತ್​ ವೇಮುಲಾ ಆತ್ಮಹತ್ಯೆ ಪ್ರಕರಣವನ್ನೂ ಉಲ್ಲೇಖಿಸಿದ್ದಾರೆ.

ಹೈದರಾಬಾದ್ ವಿವಿ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಪ್ರೇಮ ವೈಫಲ್ಯ ಕಾರಣ: ಸಿ.ಟಿ.ರವಿ
ಸಿ.ಟಿ. ರವಿ (ಸಂಗ್ರಹ ಚಿತ್ರ)

ಬೆಂಗಳೂರು: ಹೈದರಾಬಾದ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್​ ವೇಮುಲಾ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ವಿವಿಯಲ್ಲಿ ಪಿಎಚ್​ಡಿ ಸಂಶೋಧಕರಾಗಿದ್ದ ರೋಹಿತ್​ ವೇಮುಲ 2016ರ ಜನವರಿಗೆ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿಗೆ ಕಾರಣ ಕಂಡು ಹಿಡಿಯುವ ಸಂಬಂಧ ತನಿಖೆಗಳೂ ನಡೆದಿದ್ದವು. ಇಂದು ಈ ರೋಹಿತ್ ವೇಮುಲ ಸಾವಿನ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತೆ ಮಾತನಾಡಿದ್ದಾರೆ. ರೋಹಿತ್​ ವೇಮುಲ ಸತ್ತಿದ್ದು ಪ್ರೀತಿಯಲ್ಲಿ ವಿಫಲವಾಗಿದ್ದಕ್ಕೆ ಎಂದು ಹೇಳಿದ್ದಾರೆ.

ಇಂದು ರಾಜ್ಯ ರೈತಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಟಿ ರವಿ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪ್ರತಿಪಕ್ಷಗಳು ಹೇಗೆ ಹೊಟ್ಟೆಕಿಚ್ಚು ಪಡುತ್ತಿವೆ ಎಂಬ ಬಗ್ಗೆ ವಿವರಿಸಿದರು. ಅದಕ್ಕೆ ಉದಾಹರಣೆಯಾಗಿ ಈ ರೋಹಿತ್​ ವೇಮುಲಾ ಆತ್ಮಹತ್ಯೆ ಪ್ರಕರಣವನ್ನೂ ಉಲ್ಲೇಖಿಸಿದ್ದಾರೆ. ಹೈದರಾಬಾದ್​ನಲ್ಲಿ ರೋಹಿತ್​ ವೇಮುಲಾ ಪ್ರೀತಿ ವಿಚಾರದಲ್ಲಿ ನಿರಾಸೆಯುಂಟಾಗಿ ಆತ್ಮಹತ್ಯೆ ಮಾಡಿಕೊಂಡರು. ಆ ಸಾವಿನ ಕೇಸ್​​ನ್ನೂ ನರೇಂದ್ರ ಮೋದಿ ತಲೆಗೆ ಕಟ್ಟಲು ಪ್ರಯತ್ನ ಪಟ್ಟರು. ಅಂದರೆ ಪ್ರಧಾನಿ ಮೋದಿ ವಿರುದ್ಧ ಅದೆಷ್ಟರ ಮಟ್ಟಿಗೆ, ದ್ವೇಷ ಹೊಟ್ಟೆಕಿಚ್ಚು ಇದೆ ಎಂಬುದನ್ನು ಯೋಚನೆ ಮಾಡಿ. ಆದರೆ ನಂತರ ಅದು ಫೇಲ್​ ಆಯ್ತು ಎಂದು ಹೇಳಿದರು.

ರೋಹಿತ್​ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ದಿನದಿನಕ್ಕೂ ಒಂದೊಂದು ಟ್ವಿಸ್ಟ್​ ಸಿಗುತ್ತಿತ್ತು. ಆತನನ್ನು ಹಾಸ್ಟೆಲ್​​ನಿಂದ ಹೊರಹಾಕಿದ್ದಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೇಮುಲಾ ಸ್ನೇಹಿತರು ಹೇಳಿದ್ದರು. ಆದರೆ ಸಾವಿನ ಬಗ್ಗೆ ತನಿಖೆ ನಡೆಸಲು ಮಾನವಸಂಪನ್ಮೂಲ ಇಲಾಖೆ ನೇಮಿಸಿದ್ದ ತನಿಖಾ ಆಯೋಗ ಈ ಆರೋಪವನ್ನು ತಳ್ಳಿಹಾಕಿತ್ತು. ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳಲು ಆತನ ವೈಯಕ್ತಿಕ ಸಮಸ್ಯೆಗಳೇ ಕಾರಣ ಎಂದಿತ್ತು. ಆದರೆ ರೋಹಿತ್​ ವೇಮುಲಾ ಒಬ್ಬ ದಲಿತ ಎಂಬ ಕಾರಣಕ್ಕೆ ಆತನನ್ನು ಹೀಗೆ ನಡೆಸಿಕೊಳ್ಳಲಾಗಿದೆ. ಈ ದೇಶದಲ್ಲಿ ದಲಿತರಿಗೆ ರಕ್ಷಣೆ, ಹಕ್ಕುಗಳಿಗೆ ಬೆಲೆಯಿಲ್ಲ. ಕೇಂದ್ರ ಸರ್ಕಾರ ದಲಿತ ವಿರೋಧಿ  ಎಂಬಿತ್ಯಾದಿ ಆರೋಪಗಳು ಕೇಳಿಬಂದಿದ್ದವು.    ವಿಚಾರವನ್ನಿಟ್ಟುಕೊಂಡು ಆಗಷ್ಟೇ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಮೋದಿ ಸರ್ಕಾರವನ್ನು ದೂಷಿಸುವ ಕೆಲಸಗಳೂ ನಡೆದಿದ್ದವು.

ಇದನ್ನೂ ಓದಿ: ಎಲ್​​ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಮಹಿಳೆಯಿಂದ ದೆಹಲಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ