ಎಲ್ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಮಹಿಳೆಯಿಂದ ದೆಹಲಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ
Prince Raj: ಇತ್ತೀಚೆಗೆ ಅವರ ದೊಡ್ಡಪ್ಪನ ಮಗ ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದ ಐದು ಎಲ್ಜೆಪಿ ಸಂಸದರಲ್ಲಿ ಪ್ರಿನ್ಸ್ ರಾಜ್ ಕೂಡ ಸೇರಿದ್ದಾರೆ. “ಒಬ್ಬ ಮಹಿಳೆ ನನ್ನ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದ್ದಾಳೆ ಎಂಬುದು ನನ್ನ ಅರಿವಿಗೆ ಬಂದಿದೆ. ನಾವು ಫೆಬ್ರವರಿ 10 ರಂದು ದೂರು ದಾಖಲಿಸಿದ್ದೇವೆ ಮತ್ತು ಎಲ್ಲಾ ಸಾಕ್ಷ್ಯಗಳನ್ನು ಪೊಲೀಸರ ಮುಂದೆ ಸಲ್ಲಿಸಿದ್ದೇವೆ ”ಎಂದು ಪ್ರಿನ್ಸ್ ರಾಜ್ ಹೇಳಿದ್ದಾರೆ.
ಪಟ್ನಾ: ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬೆದರಿಕೆ ಹಾಕಿದ ಮತ್ತು 1 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದಕ್ಕಾಗಿ ಸಮಸ್ತಿಪುರದ ಲೋಕ ಜನಶಕ್ತಿ ಪಕ್ಷದ ಸಂಸದ ಪ್ರಿನ್ಸ್ ರಾಜ್ ಎಫ್‌ಐಆರ್ ದಾಖಲಿಸಿದ ನಾಲ್ಕು ತಿಂಗಳ ನಂತರ ಮಹಿಳೆ ಮತ್ತು ಆಕೆಯ ಸ್ನೇಹಿತ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಮಹಿಳೆ ಕಳೆದ ವಾರ ರಾಜ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದರೂ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.
ಇತ್ತೀಚೆಗೆ ಅವರ ದೊಡ್ಡಪ್ಪನ ಮಗ ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದ ಐದು ಎಲ್ಜೆಪಿ ಸಂಸದರಲ್ಲಿ ಪ್ರಿನ್ಸ್ ರಾಜ್ ಕೂಡ ಸೇರಿದ್ದಾರೆ. “ಒಬ್ಬ ಮಹಿಳೆ ನನ್ನ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದ್ದಾಳೆ ಎಂಬುದು ನನ್ನ ಅರಿವಿಗೆ ಬಂದಿದೆ. ನಾವು ಫೆಬ್ರವರಿ 10 ರಂದು ದೂರು ದಾಖಲಿಸಿದ್ದೇವೆ ಮತ್ತು ಎಲ್ಲಾ ಸಾಕ್ಷ್ಯಗಳನ್ನು ಪೊಲೀಸರ ಮುಂದೆ ಸಲ್ಲಿಸಿದ್ದೇವೆ ”ಎಂದು ರಾಜ್ ಕಳೆದ ವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದರು.
ಪ್ರಿನ್ಸ್ ರಾಜ್ ಜೂನ್ 17 ರಂದು ಈ ಬಗ್ಗೆ ಟ್ವೀಟ್ ಮಾಡಿದ್ದು “ನನ್ನ ವಿರುದ್ಧ ಮಾಡಲಾಗಿರುವ ಅಂತಹ ಯಾವುದೇ ಹಕ್ಕು ಅಥವಾ ಪ್ರತಿಪಾದನೆಯನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ. ಅಂತಹ ಎಲ್ಲಾ ಹಕ್ಕುಗಳು ಸ್ಪಷ್ಟವಾಗಿ ಸುಳ್ಳು, ಕಲ್ಪಿತ ಮತ್ತು ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಮೂಲಕ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ನನ್ನ ಮೇಲೆ ಒತ್ತಡ ಹೇರುವ ದೊಡ್ಡ ಅಪರಾಧದ ಪಿತೂರಿಯ ಭಾಗವಾಗಿದೆ ಎಂದಿದ್ದಾರೆ.
— युवा बिहारी प्रिंस राज (@princerajpaswan) June 17, 2021
ಅಂತಹ ಪ್ರಯತ್ನಗಳು ಈ ಹಿಂದೆ ಅದೇ ಮಹಿಳೆ ತನ್ನ ಫಿಯಾನ್ಸಿ (ನಿಶ್ಚಿತವಾದ ವರನೊಂದಿಗೆ) ಜೊತೆ ಸೇರಿ ಮಾಡಿದ್ದಳು . ನಮ್ಮ ದೇಶದ ಮಹಿಳೆಯರ ರಕ್ಷಣೆಗಾಗಿ ಸದುದ್ದೇಶದ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಈ ಪುನರಾವರ್ತಿತ ಮತ್ತು ದುಷ್ಕೃತ್ಯದ ಪ್ರಯತ್ನಗಳಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅಗತ್ಯವಿದ್ದರೆ, ಸಲಹೆ ನೀಡಿದಾಗ ಮತ್ತು ಹೆಚ್ಚುವರಿ ಕಾನೂನು ಸಹಾಯವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದರು ಪ್ರಿನ್ಸ್.
ಈ ವರ್ಷ ಫೆಬ್ರವರಿ 10 ರಂದು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ಸ್ 384 (ಸುಲಿಗೆ) ಮತ್ತು 389 (ಎಫ್‌ಆರ್‌ಐ) ದಾಖಲಿಸಲಾಗಿದೆ. ಈವರೆಗೆ ಈ ಪ್ರಕರಣವನ್ನು ನವದೆಹಲಿ ಜಿಲ್ಲೆಯ ವಿಶೇಷ ಸಿಬ್ಬಂದಿಗೆ ವರ್ಗಾಯಿಸಲಾಯಿತು. ಯಾವುದೇ ಬಂಧನ ನಡೆದಿಲ್ಲ.
ಎಫ್‌ಐಆರ್ ಅನ್ನು ಉಲ್ಲೇಖಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಹಿಳೆ ಮತ್ತು ಆಕೆಯ ಪ್ರೇಯಸಿ ತನ್ನ ಆಕ್ಷೇಪಾರ್ಹ ವಿಡಿಯೊವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರಾಜ್ ಆರೋಪಿಸಿದ್ದಾರೆ. “ಕಳೆದ ವರ್ಷ ರಾಜಕೀಯ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದ ಮಹಿಳೆಯನ್ನು ಭೇಟಿಯಾಗಿದ್ದೆ ಎಂದು ಪ್ರಿನ್ಸ್ ರಾಜ್ ಪೊಲೀಸರಿಗೆ ತಿಳಿಸಿದ್ದಾನೆ. ಅವರು ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು, ಮಾತನಾಡಲು ಪ್ರಾರಂಭಿಸಿದರು ಮತ್ತು ಸ್ನೇಹಿತರಾದರು. ಪ್ರಿನ್ಸ್ ಹೇಳಿಕೆ ಪ್ರಕಾರ, ಜೂನ್ 18 ರಂದು (2020), ಅವಳು ನನ್ನನ್ನು ಗಾಜಿಯಾಬಾದ್‌ನಲ್ಲಿರುವ ತನ್ನ ಮನೆಗೆ ಆಹ್ವಾನಿಸಿದಳು. ಅಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದರು. ಪ್ರಿನ್ಸ್ ಹಲವಾರು ಬಾರಿ ಆಕೆಯ ಮನೆಗೆ ಭೇಟಿ ನೀಡಿದ್ದರು ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಫ್‌ಐಆರ್‌ನಿಂದ ಉಲ್ಲೇಖಿಸಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕೆಲವು ತಿಂಗಳ ನಂತರ ಆ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧದಲ್ಲಿದ್ದಾಳೆ ಎಂದು ತಿಳಿಯಿತು. ಈ ಬಗ್ಗೆ ಪ್ರಿನ್ಸ್ ಆಕೆಯನ್ನು ಪ್ರಶ್ನಿಸಿದ್ದನು. ಆಗಸ್ಟ್‌ನಿಂದ, ಅವನು ಅವಳನ್ನು ತಪ್ಪಿಸಲು ಪ್ರಾರಂಭಿಸಿದನು ಮತ್ತು ಆಕೆಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದನು. ಒಂದು ದಿನ, ಆಕೆಯ ಸ್ನೇಹಿತ ತನ್ನ ಸಂಖ್ಯೆಯಿಂದ ಕರೆ ಮಾಡಿ, ಅವನ ಮತ್ತು ಮಹಿಳೆಯ ಆಕ್ಷೇಪಾರ್ಹ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಿನ್ಸ್ ಆರೋಪಿಸಿದ್ದಾನೆ. ವಿಡಿಯೋ ಬಿಡುಗಡೆ ಮಾಡದೇ ಇರಲು ಅವರು ತನ್ನಿಂದ 1 ಕೋಟಿ ರೂ.ಗಳನ್ನು ಕೋರಿದ್ದಾರೆ ಎಂದು ಪ್ರಿನ್ಸ್ ರಾಜ್ ಆರೋಪಿಸಿದ್ದಾರೆ.
ಪ್ರಿನ್ಸ್ ರಾಜ್ ಅವರು 2 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ, ಆದರೆ ಅವರು 1 ಕೋಟಿ ರೂ. “ಫೆಬ್ರವರಿ 9 ರಂದು (2021) ಅವರು ದೆಹಲಿ ಪೊಲೀಸರನ್ನು ಸಂಪರ್ಕಿಸಿ ಮಹಿಳೆಯೊಂದಿಗೆ ಸಂಭಾಷಣೆಗಳನ್ನು ಸಲ್ಲಿಸಿದರು. ಅವನು ಅವಳ ನಾಲ್ಕು ದೂರವಾಣಿ ಸಂಖ್ಯೆಗಳನ್ನು ಸಹ ಹಂಚಿಕೊಂಡನು ಮತ್ತು ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ ”ಎಂದು ಅಧಿಕಾರಿ ಹೇಳಿದರು.
ಕಳೆದ ಮಂಗಳವಾರ ಸಂಜೆ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಕೊನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಮೂರು ಪುಟಗಳ ದೂರು ಸಲ್ಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. “ತನ್ನ ದೂರಿನಲ್ಲಿ, ಪ್ರಿನ್ಸ್ ರಾಜ್ ಅಮಲು ಪದಾರ್ಥ ಬೆರೆಸಿದ ಡ್ರಿಂಕ್ಸ್ ನೀಡಿದ್ದು ನಾನು ಪ್ರಜ್ಞೆ ತಪ್ಪಿದ ಎಂದು ಮಹಿಳೆ ಆರೋಪಿಸಿದ್ದಾಳೆ. ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಅವನು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ಹೆಚ್ಚಿನ ವಿಚಾರಣೆ ನಡೆಸುವ ಮೊದಲು ಅವರು ತನಿಖೆ ನಡೆಸಿ ಕಾನೂನು ಅಭಿಪ್ರಾಯ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: LJP Crisis: ಚಿರಾಗ್ ಪಾಸ್ವಾನ್ ಚಿಕ್ಕಪ್ಪನ ಮಗ ಪ್ರಿನ್ಸ್ ರಾಜ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
(Sexual abuse allegation against LJP’s Prince Raj woman and her friend filed anticipatory bail application in Delhi court)
Published On - 1:16 pm, Mon, 21 June 21