ಕೊವಿಡ್ ಲಸಿಕೆ ಹಾಕಿಸಿಕೊಳ್ಳಿ: ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸಲಹೆ
Covid-19 Vaccine: ಕಳೆದ ವಾರ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೊವಿಡ್ -19 ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಮೇ ತಿಂಗಳಲ್ಲಿ ಕೊರೊನಾವೈರಸ್ ಕಾಯಿಲೆಗೆ ತುತ್ತಾಗಿದ್ದರಿಂದ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿ: ಕೇಂದ್ರದ ಲಸಿಕೆ ನೀತಿಯ ಬಗ್ಗೆ ಕೇಂದ್ರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಕೊವಿಡ್ -19 ವಿರುದ್ಧ ಲಸಿಕೆ ಹಾಕುವಂತೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಸಲಹೆ ನೀಡಿದ್ದಾರೆ. “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಸ್ವತಃ ಲಸಿಕೆ ಹಾಕಿದ್ದಾರೋ ಇಲ್ಲವೋ ಎಂಬುದು ದೇಶಕ್ಕೆ ತಿಳಿದಿಲ್ಲ. ನೀವು (ರಾಹುಲ್ ಗಾಂಧಿ) ಗೆ ಇನ್ನೂ ಕೊವಿಡ್ -19 ಲಸಿಕೆ ಸಿಗದಿದ್ದರೆ, ದಯವಿಟ್ಟು ಲಸಿಕೆ ಪಡೆಯಿರಿ ಎಂಬುದು ನನ್ನ ವಿನಮ್ರ ಮನವಿ ಎಂದು ರವಿಶಂಕರ್ ಪ್ರಸಾದ್ ಅವರು ಪಾಟ್ನಾದಲ್ಲಿ ಹೇಳಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕಳೆದ ವಾರ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೊವಿಡ್ -19 ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಮೇ ತಿಂಗಳಲ್ಲಿ ಕೊರೊನಾವೈರಸ್ ಕಾಯಿಲೆಗೆ ತುತ್ತಾಗಿದ್ದರಿಂದ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
The country doesn’t know if Congress leader Rahul Gandhi has yet vaccinated himself or not. If you (Rahul Gandhi) haven’t got the #COVID19 vaccine yet, my humble appeal is that, please get yourself vaccinated: Union Minister Ravi Shankar Prasad said in Bihar’s Patna pic.twitter.com/buSJQ85lWa
— ANI (@ANI) June 21, 2021
ಮೇ 16 ರಂದು ರಾಹುಲ್ ಗಾಂಧಿ ಲಸಿಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಅವರು ಒಂದು ದಿನ ಮೊದಲು ಕೊರೊನಾವೈರಸ್ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಗೊತ್ತಾಗಿತ್ತು ಎಂದು ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. “ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಕಡ್ಡಾಯ ಕಾಯುವ ಅವಧಿ ಮುಗಿದ ನಂತರ ಲಸಿಕೆ ತೆಗೆದುಕೊಳ್ಳುತ್ತಾರೆ” ಎಂದು ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಉನ್ನತ ಕಾಂಗ್ರೆಸ್ ನಾಯಕರು ಕೊವಿಡ್ -19 ಲಸಿಕೆ ತೆಗೆದುಕೊಂಡು ತಮ್ಮ ಲಸಿಕೆಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕೇಳಿದ್ದಾರೆಯೇ ಎಂದು ಹಲವಾರು ಕೇಂದ್ರ ಸಚಿವರು ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಪ್ರಶ್ನಿಸಿದ ನಂತರ ಈ ಹೇಳಿಕೆ ಬಂದಿದೆ.
ಕೊರೊನವೈರಸ್ ಕಾಯಿಲೆಗೆ ಧನಾತ್ಮಕ ಪರೀಕ್ಷೆ ಮಾಡಿದವರು ಸಂಪೂರ್ಣವಾಗಿ ಚೇತರಿಸಿಕೊಂಡ ಮೂರು ತಿಂಗಳ ನಂತರ ಲಸಿಕೆ ತೆಗೆದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.
ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಬಿಜೆಪಿಯ ಪ್ರಶ್ನೆಗಳ ಬಗ್ಗೆ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡರು. “ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೆ ಲಸಿಕೆಗಳು ಬಹಳ ಮುಖ್ಯ. ಬಿಜೆಪಿ ವಕ್ತಾರರು ಮತ್ತು ಸಚಿವರು, ‘ನಾನು ಯಾಕೆ ಲಸಿಕೆ ತೆಗೆದುಕೊಳ್ಳಲಿಲ್ಲ ಮತ್ತು ರಾಹುಲ್, ಪ್ರಿಯಾಂಕಾ ಅವರಿಗೆ ಭಾರತೀಯ ಲಸಿಕೆಗಳ ಬಗ್ಗೆ ನಂಬಿಕೆ ಇಲ್ಲ’ ಎಂಬ ಪ್ರಶ್ನೆಗಳನ್ನು ಕೇಳಿದರು. ಅವರು ಮೊದಲು ನಿಜ ಸಂಗತಿ ಅರಿಯಬೇಕು ಎಂದು ವಾದ್ರಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮತದಾನದ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಕೊವಿಡ್ ರೋಗಕ್ಕೊಳಗಾಗಿದ್ದರಿಂದ ಅವರು ಲಸಿಕೆ ಹಾಕಲು ನಿಗದಿತ ಸಮಯಕ್ಕಾಗಿ ಕಾಯಬೇಕಾಯಿತು. ನನ್ನ ಪತ್ನಿ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ವಾದ್ರಾ ಹೇಳಿದ್ದಾರೆ.
ಕೊರೊನವೈರಸ್ ಸಾಂಕ್ರಾಮಿಕಕ್ಕೆ ಕೇಂದ್ರದ ಪ್ರತಿಕ್ರಿಯೆಯನ್ನು ರಾಹುಲ್ ಗಾಂಧಿ ಅತ್ಯಂತ ತೀವ್ರವಾಗಿ ಟೀಕಿಸಿದ್ದಾರೆ ಮತ್ತು ಅದರ ವ್ಯಾಕ್ಸಿನೇಷನ್ ನೀತಿ ಬಗ್ಗೆ ಕಟು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: International Yoga Day 2021: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ M Yoga App ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
(Union minister Ravi Shankar Prasad advised Congress leader Rahul Gandhi to get himself vaccinated against Covid-19)
Published On - 1:55 pm, Mon, 21 June 21