ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ; ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್

ಹುಡುಕಾಡಿದಾಗ ಮೊಮ್ಮಗಳು ಚೀರಾಡುತ್ತಿರುವುದು ಕೇಳಿಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಮೊಮ್ಮಗಳ ಜೊತೆ ಐದು ಮಂದಿ ಆರೋಪಿಗಳು ಇರುವುದು ಕಂಡುಬಂದಿತು. ತಕ್ಷಣ ನಮ್ಮ ಮೊಮ್ಮಗಳನ್ನು ಅವರಿಂದ ಬಿಡಿಸಿಕೊಂಡು ಬಂದೆ. ಮನೆಗೆ ಬಂದಾಗ, ತನ್ನ ಮೇಲೆ ತೋಟದಲ್ಲಿ ಪೂಜೆ ಪುನಸ್ಕಾರ ಮಾಡುತ್ತಿದ್ದರು, ಬಲಿ ಕೊಡಲು ಸಿದ್ಧವಾಗಿದ್ದರು ಎಂದು ಬಾಲಕಿ ಅಜ್ಜಿಗೆ ತಿಳಿಸಿದಳಂತೆ. ಅದರ ಆಧಾರದ ಮೇಲೆ ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದಾರೆ.

ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ;  ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್
ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ; ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್
sadhu srinath

|

Jun 21, 2021 | 1:14 PM

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅರ್ಚಕನೊಬ್ಬನ ಮಾರ್ಗದರ್ಶನದಲ್ಲಿ 10 ವರ್ಷದ ಬಾಲಕಿಯನ್ನು ಅಪಹರಣ ಮಾಡಿ, ತೋಟದಲ್ಲಿ ಬಲಿ ನೀಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಅರ್ಚಕ ಸೇರಿದಂತೆ 5 ಮಂದಿಯನ್ನು ನಿನ್ನೆ ಭಾನುವಾರ ಅರೆಸ್ಟ್ ಮಾಡಲಾಗಿದೆ. ತೋಟದಲ್ಲಿ ದೇವಸ್ಥಾನ ನಿರ್ಮಿಸಲು ಮುಂದಾದ ಆರೋಪಿಗಳು ಅರ್ಚಕನ ಆಣತಿಯಂತೆ ಬಾಲಕಿಯನ್ನು ಬಲಿ ಕೊಡಲು ಸಜ್ಜಾಗಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ವಾಮಾಚಾರ ತಡೆ ಕಾಯಿದೆಯಡಿ (Karnataka Prevention and Eradication of Inhuman Evil Practices and Black Magic Bill) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​​ ವರದಿ ಮಾಡಿದೆ.

ಪ್ರಕರಣ ಏನೆಂದರೆ ಜೂನ್ 14ರಂದು ನೆಲಮಂಗಲದ ಗಾಂಧಿ ಗ್ರಾಮದಲ್ಲಿ ಮನೆಯ ಮುಂದೆ ನಾಲ್ಕನೆ ತರಗತಿಯ ಬಾಲಕಿ ಆಟವಾಡುತ್ತಿದ್ದಳು. ಆಕೆಯ ಅಪ್ಪ-ಅಮ್ಮ ಮಾಗಡಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು, ಬಾಲಕಿ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು.

ಪ್ರಸಾದ ಕೊಡುವ ನೆಪದಲ್ಲಿ ತಮ್ಮ ಮಗಳನ್ನು ನೆರೆಮನೆಯ ಸಾವಿತ್ರಮ್ಮ ಮತ್ತು ಸೌಮ್ಯ ಎಂಬವವರು ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಅವರಿಬ್ಬರೂ ತನಗೆ ಹೂವಿನ ಹಾರ ಹಾಕಿಕೊಳ್ಳಲು ಹೇಳಿದರು. ಬಳಿಕ, ಅದೇನೋ ಮಂತ್ರಗಳನ್ನು ಹೇಳಿ, ನನಗೆ ಪೂಜೆ ಮಾಡಲು ಶುರು ಮಾಡಿದರು ಎದು ತಮ್ಮ ಮಗಳು ಹೇಳಿದ್ದಾಗಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮಧ್ಯೆ, ಮೊಮ್ಮಗಳು ಕಾಣೆಯಾಗಿರುವುದು ಅಜ್ಜಿಯ ಗಮನಕ್ಕೆ ಬಂದಿದೆ.

ಅಲ್ಲಿ ಇಲ್ಲಿ ಹುಡುಕಾಡಿದಾಗ ಮೊಮ್ಮಗಳು ಚೀರಾಡುತ್ತಿರುವುದು ಕೇಳಿಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ಮೊಮ್ಮಗಳ ಜೊತೆ ಐದು ಮಂದಿ ಆರೋಪಿಗಳು ಇರುವುದು ಕಂಡುಬಂದಿತು. ತಕ್ಷಣ ನಮ್ಮ ಮೊಮ್ಮಗಳನ್ನು ಅವರಿಂದ ಬಿಡಿಸಿಕೊಂಡು ಬಂದೆ. ಮನೆಗೆ ಬಂದಾಗ, ತನ್ನ ಮೇಲೆ ತೋಟದಲ್ಲಿ ಪೂಜೆ ಪುನಸ್ಕಾರ ಮಾಡುತ್ತಿದ್ದರು, ಬಲಿ ಕೊಡಲು ಸಿದ್ಧವಾಗಿದ್ದರು ಎಂದು ಬಾಲಕಿ ಅಜ್ಜಿಗೆ ತಿಳಿಸಿದಳಂತೆ. ಅದರ ಆಧಾರದ ಮೇಲೆ ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದಾರೆ.

ದೂರು ಬಂದ ತಕ್ಷಣ ಪೊಲೀಸರು ಅರ್ಚಕ ಸೇರಿದಂತೆ ಐವರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆದರೆ ತೋಟದಲ್ಲಿ ಅಡಿಗಲ್ಲು ಹಾಕಿ, ಭೂಮಿ ಪೂಜೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾಗಿ ಬಂಧಿತರು ಹೇಳಿದ್ದಾರೆ. ತೋಟದಲ್ಲಿ ದೇವಸ್ಥಾನ ನಿರ್ಮಿಸಲು ಮುಂದಾದ ಆರೋಪಿಗಳು ಅರ್ಚಕನ ಆಣತಿಯಂತೆ ಬಾಲಕಿಯಿಂದ ಪೂಜೆ ಮಾಡಿಸುತ್ತಿದ್ದರಂತೆ.

ಶನಿವಾರವೇ ಬಾಲಕಿಯ ಪೋಷಕರು ದೂರು ನೀಡಿದ್ದರೂ ಆರೋಪಿಗಳುದೂರು ನೀಡದಂತೆ ಒತ್ತಡ ಹಾಕುತ್ತಿದ್ದರಂತೆ. ಕೊನೆಗೆ ಭಾನುವಾರ ಪೊಲೀಸ್ ಕಂಪ್ಲೇಂಟ್​ ನೀಡಲಾಗಿದೆ. ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

(priest among 5 held for trying to sacrifice girl to ward off evil from field near Nelamangala on June 14)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada