AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covishield ಕೊವಿಶೀಲ್ಡ್‌ ಲಸಿಕೆ ಪಡೆದವರ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟದ ಏಳು ದೇಶಗಳಿಂದ ಅನುಮತಿ

ಇದಕ್ಕೂ ಮುನ್ನ ಸೋಮವಾರ ಅವರು ಟ್ವೀಟ್ ಮಾಡಿದ್ದ ಪೂನಾವಾಲಾ ಕೊವಿಶೀಲ್ಡ್ ಅನ್ನು ತೆಗೆದುಕೊಂಡ ಬಹಳಷ್ಟು ಭಾರತೀಯರು ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನನ್ನ ಗಮನಕ್ಕೆ ಬಂದಿದೆ, ಎಲ್ಲರಿಗೂ ನಾನು ಭರವಸೆ ನೀಡುತ್ತೇನೆ ಎಂದಿದ್ದರು.

Covishield ಕೊವಿಶೀಲ್ಡ್‌ ಲಸಿಕೆ ಪಡೆದವರ ಪ್ರಯಾಣಕ್ಕೆ ಐರೋಪ್ಯ ಒಕ್ಕೂಟದ ಏಳು ದೇಶಗಳಿಂದ ಅನುಮತಿ
ಕೊವಿಶೀಲ್ಡ್ ವ್ಯಾಕ್ಸಿನ್
TV9 Web
| Edited By: |

Updated on: Jul 01, 2021 | 5:33 PM

Share

ನವದೆಹಲಿ:  ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್, ಸ್ಪೇನ್, ಎಸ್ಟೋನಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ  ಪಡೆದವರಿಗೆ ಪ್ರಯಾಣಿಸಲು ಅನುಮತಿ ಕಲ್ಪಿಸಲಾಗಿದೆ ಎಂದು  ಮೂಲಗಳು  ವರದಿ ಮಾಡಿವೆ.

ಐರೋಪ್ಯ ಒಕ್ಕೂಟ (EU)  ಉನ್ನತ ವೈದ್ಯಕೀಯ ಸಂಸ್ಥೆಯಾದ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (EMA) ಇಲ್ಲಿಯವರೆಗೆ ಕೇವಲ ನಾಲ್ಕು ಲಸಿಕೆಗಳನ್ನು ಮಾತ್ರ ಅನುಮೋದಿಸಿದೆ. ಫೈಜರ್ ಬಯೋಟೆಕ್‌ನ ಕಾಮಿರ್ನಾಟಿ, ಯುಎಸ್ ಫಾರ್ಮಾ ದೈತ್ಯ ಮೊರ್ಡೆನಾದ ಕೊವಿಡ್ ಲಸಿಕೆ, ಅಸ್ಟ್ರಾಜೆನೆಕಾ ಲಸಿಕೆ  ಯುರೋಪಿನಲ್ಲಿ ವ್ಯಾಕ್ಸ್‌ಜೆರ್ವ್ರಿಯಾ  ಮತ್ತು ಮತ್ತು ಜಾನ್ಸನ್ ಮತ್ತು ಜಾನ್ಸನ್‌ರ ಜಾನ್ಸೆನ್ ಲಸಿಕೆಗೆ ಮಾತ್ರ ಅನುಮೋದನೆ ಲಭಿಸಿದೆ. ಈ ಲಿಸಿಕೆ ಪಡೆದವರಿಗೆ ಮಾತ್ರ ವ್ಯಾಕ್ಸಿನೇಷನ್ ಪಾಸ್ಪೋರ್ಟ್ ನೀಡಲಾಗುತ್ತದೆ ಮತ್ತು ಸಾಂಕ್ರಾಮಿಕದ ನಡುವೆ ನಿರಾತಂಕವಾಗಿ ಪ್ರಯಾಣಿಸಲು ಅವಕಾಶವಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ವಿಶ್ವದ ಅತಿದೊಡ್ಡ ಉತ್ಪಾದನೆಯಾದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ತಯಾರಿಸಿದ ಕೊವಿಶೀಲ್ಡ್ ಈ ಪಟ್ಟಿಯಲ್ಲಿಲ್ಲ. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಸಹ ಇಎಂಎ ಪಟ್ಟಿಯಲ್ಲಿಲ್ಲ.

ಆದಾಗ್ಯೂ, ಮತ್ತೊಂದು ಲಸಿಕೆ ಪಡೆದ ಯುರೋಪಿಯನ್ ಒಕ್ಕೂಟದ ಪ್ರಯಾಣಿಕರಿಗೂ ಇದನ್ನು (ಪ್ರಮಾಣಪತ್ರ) ವಿಸ್ತರಿಸಲು ಸದಸ್ಯ ರಾಷ್ಟ್ರಗಳು ನಿರ್ಧರಿಸಬಹುದು” ಎಂದು ಇಯು  ಹೇಳುತ್ತದೆ.

ಈ ನಿಯಮಗಳ ಪ್ರಕಾರ ಭಾರತೀಯರು ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆ ಪಡೆಯುತ್ತಾರೆ. ಅವರು ಇಯು ರಾಷ್ಟ್ರಗಳಿಗೆ ಪ್ರಯಾಣಿಸಿದರೆ, ಈ ಲಸಿಕೆಗಳಿಗೆ ಆಯಾ ದೇಶಗಳು ಅನುಮೋದನೆ ನೀಡದ ಹೊರತು ಅವರು ಕ್ವಾರಂಟೈನ್ ಗೊಳಗಾಗಬೇಕು.

ಕ್ವಾರಂಟೈನ್ ವಿನಾಯಿತಿ ನೀಡುವಾಗ ಭಾರತವು ಪರಸ್ಪರ ನೀತಿಯನ್ನು ಪ್ರಾರಂಭಿಸುತ್ತದೆ ಎಂದು ಬುಧವಾರ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ಇದರರ್ಥ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ ಲಸಿಕೆ ಹಾಕಿದವರನ್ನು ಯುರೋಪಿಯನ್ ಒಕ್ಕೂಟ ಸ್ವೀಕರಿಸದಿದ್ದರೆ, ಇಯು ಜನರು ಭಾರತಕ್ಕೆ ಬಂದ ನಂತರ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ.

ಕೆಲವು ವಾರಗಳಲ್ಲಿ ಯುರೋಪಿಯನ್ ಔಷಧ ನಿಯಂತ್ರಕರು ಕೊವಿಶೀಲ್ಡ್ ಅನ್ನು ಅನುಮೋದಿಸುತ್ತಾರೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಸಿಇಒ ಆದರ್ ಪೂನವಾಲಾ ಬುಧವಾರ ಹೇಳಿದ್ದರು.

ಸೆರಮ್ ಇನ್ಸ್ಟಿಟ್ಯೂಟ್  ಅಸ್ಟ್ರಾಜೆನೆಕಾ ಮೂಲಕ ಅರ್ಜಿ ಸಲ್ಲಿಸಿದೆ ಎಂದು ಇಂಡಿಯಾ ಗ್ಲೋಬಲ್ ಫೋರಂನಲ್ಲಿ ಪೂನವಾಲಾ ಹೇಳಿದ್ದಾರೆ.

ಇದಕ್ಕೂ ಮುನ್ನ ಸೋಮವಾರ ಅವರು ಟ್ವೀಟ್ ಮಾಡಿದ್ದ ಪೂನಾವಾಲಾ ಕೊವಿಶೀಲ್ಡ್ ಅನ್ನು ತೆಗೆದುಕೊಂಡ ಬಹಳಷ್ಟು ಭಾರತೀಯರು ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನನ್ನ ಗಮನಕ್ಕೆ ಬಂದಿದೆ, ಎಲ್ಲರಿಗೂ ನಾನು ಭರವಸೆ ನೀಡುತ್ತೇನೆ, ನಾನು ಇದನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಂಡಿದ್ದೇನೆ. ಆಯಾ ದೇಶಗಳ ನಿಯಂತ್ರಣ ಪ್ರಾಧಿಕಾರಗಳು ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಈ ವಿಷಯವನ್ನು ಶೀಘ್ರದಲ್ಲೇ ಪರಿಹರಿಸಲು ಆಶಿಸುತ್ತೇನೆ ಎಂದಿದ್ದರು.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಂಗಳವಾರ ಇಯು ಉನ್ನತ ಅಧಿಕಾರಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಅವರನ್ನು ಭೇಟಿಯಾದಾಗ ಈ ವಿಷಯವನ್ನು ಮಂಡಿಸಿದ್ದರು.

ಕಳೆದ ತಿಂಗಳು ಜಿ 7 ದೇಶಗಳ ಆರೋಗ್ಯ ಮಂತ್ರಿಗಳ ಸಭೆಯಲ್ಲಿ “ಲಸಿಕೆ ಪಾಸ್ಪೋರ್ಟ್” ಕಲ್ಪನೆಯನ್ನು ಭಾರತ ಸರ್ಕಾರ ವಿರೋಧಿಸಿತ್ತು. ಸಾಂಕ್ರಾಮಿಕ ರೋಗದ ಈ ಹಂತದಲ್ಲಿ “ಲಸಿಕೆ ಪಾಸ್ಪೋರ್ಟ್” ಗೆ ಭಾರತದ ಕಾಳಜಿ ಮತ್ತು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಲಸಿಕೆ ವ್ಯಾಪ್ತಿಯೊಂದಿಗೆ, ಅಂತಹ ಉಪಕ್ರಮವು ಹೆಚ್ಚು ತಾರತಮ್ಯವನ್ನು ಸಾಬೀತುಪಡಿಸುತ್ತದೆ ಎಂದು ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಸಭೆಯ ನಂತರ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:  ಕೊವಿಶೀಲ್ಡ್ ಲಸಿಕೆ ಪಡೆದವರು ಯುರೋಪ್‌ಗೆ ಪ್ರಯಾಣಿಸಲಿರುವ ಅಡ್ಡಿ ಶೀಘ್ರ ಪರಿಹಾರ: ಅದಾರ್ ಪೂನಾವಾಲಾ ಭರವಸೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ