ಬೆಂಗಳೂರಲ್ಲಿ ಬಿಜೆಪಿ ನಾಯಕರಿಂದ ತಿರಂಗಾ ಯಾತ್ರೆ, ಅನೇಕ ಮುಖಂಡರು ಭಾಗಿ
ವಿರೋಧ ಪಕ್ಷದ ನಾಯಕ ಆರ್ ಅಶೋಕ, ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಚಲವಾದಿ, ಸಿಟಿ ರವಿ, ಎನ್ ರವಿಕುಮಾರ್, ಮುನಿರತ್ನ ನಾಯ್ಡು, ಡಾ ಸಿಎನ್ ಅಶ್ವಥ್ ನಾರಾಯಣ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡರು. ಸಿನಿಮಾ ನಿರ್ಮಾಪಕರೂ ಆಗಿರುವ ಮುನಿರತ್ನ ಯಾತ್ರೆಯ ನಿರ್ದೇಶಕತ್ವವನ್ನು ವಹಿಸಿಕೊಂಡಿದ್ದರು.
ಬೆಂಗಳೂರು, ಮೇ 15: ಭಾರತೀಯ ಜನತಾ ಪಕ್ಷದ ಶಾಸಕರು (BJP leaders), ವಿಧಾನ ಪರಿಷತ್ ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿಂದು ಮಾಜಿ ಯೋಧರೊಂದಿಗೆ ಜೊತೆಗೂಡಿ ತಿರಂಗಾ ಯಾತ್ರೆ ನಡೆಸಿದರು. ಅಪರೇಷನ್ ಸಿಂಧೂರ ವಿಜಯೋತ್ಸವದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು ಮತ್ತು ಎಲ್ಲರ ಕೈಯಲ್ಲಿ ತಿರಂಗ ರಾರಾಜಿಸುತಿತ್ತು. ಭಾರತ್ ಮಾತಾ ಕೀ ಜೈ ಘೋಷಣೆ ರಸ್ತೆಯುದ್ದಕ್ಕೂ ಪ್ರತಿಧ್ವನಿಸುತಿತ್ತು. ಮಾಜಿ ಸೈನಿಕರ ಮುಖದಲ್ಲಿ ಮಂದಹಾಸ ಮತ್ತು ನಡಿಗೆಯಲ್ಲಿ ಎಂದಿನ ಆತ್ಮವಿಶ್ವಾಸ ಎದ್ದು ಕಾಣುತಿತ್ತು.
ಇದನ್ನೂ ಓದಿ: ಬಿಜೆಪಿ ಶಾಸಕ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 15, 2025 02:20 PM
Latest Videos

