ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್ಪಾಸ್ನಲ್ಲೇ ವಾಹನ ಸವಾರರ ಅಪಾಯಕಾರಿ ಪ್ರಯಾಣ
ಬಳ್ಳಾರಿ ಜಿಲ್ಲೆಯಲ್ಲಿಯೂ ಬುಧವಾರ ಸಂಜೆ ಭಾರಿ ಮಳೆಯಾಗಿದೆ. ಪರಿಣಾಮವಾಗಿ ಕೂಡ್ಲಿಗಿ, ಕೊಟ್ಟೂರು, ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ಸಂಕಷ್ಟ ಎದುರಾಯಿತು. ಆದಾಗ್ಯೂ, ವಾಹನ ಚಾಲಕರು ನೀರು ತುಂಬಿಕೊಂಡಿರುವ ಅಂಡರ್ ಪಾಸ್ನಲ್ಲೇ ಅಪಾಯಕಾರಿ ಪ್ರಯಾಣ ಕೈಗೊಂಡರು.
ಬಳ್ಳಾರಿ, ಮೇ 15: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಸೇರಿದಂತೆ ವಿವಿಧೆಡೆ ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಯಶವಂತನಗರದ ರೈಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು. ಕೂಡ್ಲಿಗಿ, ಕೊಟ್ಟೂರು, ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅಂಡರ್ ಪಾಸ್ ಇದಾಗಿದೆ. ನೀರು ತುಂಬಿಕೊಂಡಿರುವ ಅಂಡರ್ ಪಾಸ್ನಲ್ಲೇ ವಾಹನ ಸವಾರರು ಅಪಾಯಕಾರಿ ಯಾನ ಕೈಗೊಂಡರು. ಮತ್ತೊಂದೆಡೆ ಭಾರಿ ಮಳೆಗೆ ಸಂಡೂರಿನ ನಾರಿ ಹಳ್ಳ ಉಕ್ಕಿ ಹರಿದಿದೆ.
Latest Videos

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್ನಲ್ಲಿ ಸಿಲಿಕಾನ್ ಸಿಟಿ ಕೂಲ್ ಕೂಲ್

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್

ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
