ಹೆಬ್ಬಾಳು ಟೋಲ್ ಗೇಟ್ ಬಳಿ ಕಾನ್ಸ್ಟೇಬಲ್ ಸಾವು; ಕೆಮೆರಾ ಇರಲಿಲ್ಲ ಎಂದಿದ್ದಕ್ಕೆ ಕಿಡಿಕಾರಿದ ದಾವಣಗೆರೆ ಎಸ್ಪಿ
ಇಂಥ ಪ್ರಕರಣಗಳು ನಡೆದಾಗ ಸೋಶಿಯಲ್ ಮೀಡಿಯಗಳಲ್ಲಿ ಪೋಸ್ಟ್ ಹಾಕುವವರ ಮೇಲೆ ಉಮಾ ಪ್ರಶಾಂತ ಕಿಡಿಕಾರಿದರು. ಅಸಲಿಗೆ ಏನು ನಡೆದಿದೆ ಅನ್ನೋದನ್ನು ಅರ್ಥಮಾಡಿಕೊಳ್ಳದೆ ಎಲ್ಲೋ ಕೂತು ಏನೇನೋ ಕಾಮೆಂಟ್ ಮಾಡೋದು ಬಹಳ ಸುಲಭ, ಅಂಥವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಸಿಬ್ಬಂದಿಗೆ ಹೇಳಿದ್ದೇನೆ, ತಮ್ಮ ಸಿಬ್ಬಂದಿಯಿಂದ ತಪ್ಪೇನಾದರೂ ಜರುಗಿದ್ದರೆ ದೂರು ಸ್ವೀಕರಿಸಲು ಸಿದ್ದರಿದ್ದೇವೆ ಎಂದು ಉಮಾ ಪ್ರಶಾಂತ್ ಹೇಳಿದರು
ದಾವಣಗೆರೆ, ಮೇ 15: ದಾವಣಗೆರೆಯ ಹೆಬ್ಬಾಳು ಟೋಲ್ ಗೇಟ್ (Hebbalu toll gate) ಬಳಿ ಎರಡು ದಿನಗಳ ಹಿಂದೆ ಕ್ಯಾಂಟರ್ ಹರಿದು ಪೊಲೀಸ್ ಕಾನ್ಸ್ಟೇಬಲ್ ರಾಮಪ್ಪ ಪೂಜಾರ್ ಸಾವಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಿವರಣೆ ನೀಡಿದರು. ಕ್ಯಾಂಟರ್ ಚಾಲಕ ವಾಹನವನ್ನು ಎಡಕ್ಕೆ ತೆಗೆದುಕೊಳ್ಳುವ ಬದಲು ಬಲಭಾಗಕ್ಕೆ ಬಂದಿದ್ದರಿಂದ ಪಿಸಿಯ ಮೇಲೆ ಅದು ಹರಿದು ಸಾವು ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಟೋಲ್ ಗೇಟ್ ಬಳಿ ಸಿಸಿಟಿವಿ ಇರಲಿಲ್ಲ ಅಂತ ಹೇಳಿದ್ದನ್ನು ಖಡಾಖಂಡಿತವಾಗಿ ಅಲ್ಲಗಳೆದ ಅವರು ಲೇನ್ ಡಿಸಿಪ್ಲಿನ್ ಪ್ರಾಜೆಕ್ಟ್ 2022 ರಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಯೋಜನೆ ಅಡಿ 12 ಕೆಮೆರಾಗಳನ್ನು ಅಳವಡಿಸಲಾಗಿದೆ, ಲೇನ್ ಉಲ್ಲಂಘನೆಯಂಥ ಪ್ರಕರಣ ನಡೆದರೆ ಪಿಡಿಎಂಎಸ್ ಡಿವೈಸ್ಗಳಲ್ಲಿ ಅದು ಸೆರೆಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ದಾವಣಗೆರೆ: ಗ್ಯಾಂಗ್ ರೇಪ್ ಆಗಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದ ವಿದ್ಯಾರ್ಥಿನಿಗೆ ಎಸ್ಪಿ ಎಚ್ಚರಿಕೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ವಯಂ ನಿವೃತ್ತಿ ಬಗ್ಗೆ ಎಎಸ್ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ

ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ

VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?

ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
