ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಚಾಕುವಿನಿಂದ ಇರಿಯುತ್ತಿರುವ ಭಯಾನಕ ವಿಡಿಯೋ
ಮಂಡ್ಯ ಜಿಲ್ಲೆಯ ಜಿಲ್ಲೆಯ ಪಾಂಡವಪುರ ಮಾಣಿಕ್ಯಹಳ್ಳಿಯ ಶಿಕ್ಷಕಿ ದಿಪೀಕಾ ಹತ್ಯೆಗೆ ಆಕೆಯ ತಂದೆ ಪ್ರತೀಕಾರ ತೀಸಿಕೊಂಡಿದ್ದಾನೆ. ನಿತೀಶ್ ಎನ್ನುವಾತ 28-ವರ್ಷ ವಯಸ್ಸಿನ ದೀಪಿಕಾಳನ್ನ ಕೊಲೆ ಮಾಡಿ ಬಳಿಕ ಮೇಲುಕೋಟೆ ಬೆಟ್ಟದ ಬಳಿ ಹೂತಿಟ್ಟಿದ್ದ. ಇದೀಗ ಒಂದು ವರ್ಷದ ಬಳಿಕ ನಿತೀಶ್ ತಂದೆಯನ್ನೇ ದೀಪಿಕಾಳ ತಂದೆ ಬರ್ಬರವಾಗಿ ಕೊಲೆ ಮಾಡಿ ಮಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡಿದ್ದಾನೆ.
ಮಂಡ್ಯ, (ಮೇ 15): ಮಂಡ್ಯ ಜಿಲ್ಲೆಯ ಜಿಲ್ಲೆಯ ಪಾಂಡವಪುರ ಮಾಣಿಕ್ಯಹಳ್ಳಿಯ ಶಿಕ್ಷಕಿ ದಿಪೀಕಾ ಹತ್ಯೆಗೆ ಆಕೆಯ ತಂದೆ ಪ್ರತೀಕಾರ ತೀಸಿಕೊಂಡಿದ್ದಾನೆ. ನಿತೀಶ್ ಎನ್ನುವಾತ 28-ವರ್ಷ ವಯಸ್ಸಿನ ದೀಪಿಕಾಳನ್ನ ಕೊಲೆ ಮಾಡಿ ಬಳಿಕ ಮೇಲುಕೋಟೆ ಬೆಟ್ಟದ ಬಳಿ ಹೂತಿಟ್ಟಿದ್ದ. ಇದೀಗ ಒಂದು ವರ್ಷದ ಬಳಿಕ ನಿತೀಶ್ ತಂದೆಯನ್ನೇ ದೀಪಿಕಾಳ ತಂದೆ ಬರ್ಬರವಾಗಿ ಕೊಲೆ ಮಾಡಿ ಮಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡಿದ್ದಾನೆ.
ಮಾಣಿಕ್ಯನಹಳ್ಳಿ (Manikyanahalli) ಗ್ರಾಮದ ನರಸಿಂಹೇಗೌಡ ಕೊಲೆ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಕೊಲೆ ಆರೋಪಿ. ಮಾಣಿಕ್ಯಹಳ್ಳಿ ಗ್ರಾಮದ ದೀಪಿಕಾಳನ್ನು ((Deepika)) ಅದೇ ಗ್ರಾಮದ ನಿತೀಶ್ ಎಂಬಾತ 2024ರ ಜನವರಿ 22 ರಂದು ಬರ್ಬರವಾಗಿ ಕೊಲೆ ಮಾಡಿದ್ದ. ಇದೇ ಪ್ರತೀಕಾರವಾಗಿ ದೀಪಳ ತಂದೆ ವೆಂಕಟೇಶ್, ತನ್ನ ಮಗಳ ಹಂತಕನ ತಂದೆ ನರಸಿಂಹೇಗೌಡ ಹತ್ಯೆ ಮಾಡಿದ್ದಾನೆ. ನನ್ನ ಮಗಳನ್ನ ಸಾಯಿಸಿ ನಿನ್ನ ಮಗಳಿಗೆ ಮದುವೆ ಮಾಡುತ್ತಿದ್ದಿಯಾ ಎಂದು ಬರ್ಬರವಾಗಿ ಕೊಲೆ ಮಾಡಿ ಎಸ್ಕೆಪ್ ಆಗಿದ್ದ. ಇನ್ನು ಚಾಕುವಿನಿಂದ ಮನಸ್ಸಿಗೆ ಬಂದಂತೆ ಇರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಕುವಿನಿಂದ ಚುಚ್ಚುತ್ತಿರುವುದನ್ನು ಜನರು ನೋಡುತ್ತಾ ನಿಂತಿದ್ದಾರೆ. ಇನ್ನು ವಿಡಿಯೋ ನೋಡಲು ಭಯಾನಕವಾಗಿದೆ.
