ಮೊದಲ ಬಾರಿಗೆ ತಮ್ಮೂರಿಂದ ರೈಲು ಚಲಿಸುವುದನ್ನು ನೋಡಿದ ಕುಷ್ಟಗಿ ಜನರ ಸಂತಸಕ್ಕೆ ಪಾರವೇ ಇಲ್ಲ!
ಕುಷ್ಟಗಿಯ ಜನ ಮೊದಲ ಬಾರಿಗೆ ತಮ್ಮೂರಲ್ಲಿ ರೈಲನ್ನು ನೋಡುತ್ತಿದ್ದಾರೆ. ಅವರಲ್ಲಿ ಚಿಕ್ಕಮಕ್ಕಳಲ್ಲಿ ಕಾಣುವ ಉತ್ಸಾಹವನ್ನು ನೋಡಬಹುದು. ಇದು ಯಾರಿಗಾದರೂ ಸಂತಸ ನೀಡುವ ಸಂಗತಿಯೇ. ರೈಲು ನಿಲ್ದಣದಲ್ಲಿ ಪೂರ್ತಿ ಕುಷ್ಟಗಿಯ ಜನ ಸೇರಿದ್ದಾರೋ ಎಂದು ಭಾಸವಾಗುತ್ತದೆ. ಟ್ರೈನು ಕುಷ್ಟಗಿಯಿಂದ ನಿಧಾನಕ್ಕೆ ಹೊರಟಾಗ ಜನ ಕೇಕೆ ಹಾಕುತ್ತಾರೆ ಮತ್ತು ಚಪ್ಪಾಲೆ ಹೊಡೆಯುತ್ತ ರೈಲು ಚಲನೆಯನ್ನು ಸ್ವಾಗತಿಸುತ್ತಾರೆ.
ಕೊಪ್ಪಳ, ಮೇ 15: ಗದಗ-ವಾಡಿ ರೇಲ್ವೇ ಯೋಜನೆಗೆ ಇಂದು ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ ನೀಡಿದರು. ಕುಷ್ಟಗಿ ಮತ್ತು ಹುಬ್ಬಳ್ಳಿ ನಡುವಿನ ಪ್ಯಾಸೆಂಜರ್ ಟ್ರೈನಿಗೆ ಸೋಮಣ್ಣ ಹಸಿರು ನಿಶಾನೆ ತೋರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಮ್ಮ ಕೊಪ್ಪಳ ವರದಿಗಾರ ನೀಡುವ ಮಾಹಿತಿಯ ಪ್ರಕಾರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮೊದಲ ಬಾರಿಗೆ ಕುಷ್ಟಗಿಯಿಂದ ರೈಲು ಸಂಚಾರ ಆರಂಭವಾಗಿದೆ. ಕುಷ್ಟಗಿಯಿಂದ ಹುಬ್ಬಳ್ಳಿಗೆ ಪ್ಯಾಸೆಂಜರ್ ರೈಲು ಸಂಚಾರದ ಹಾಗೆಯೇ ಹುಬ್ಬಳ್ಳಿಯಿಂದ ಕುಷ್ಟಗಿಗೂ ಪ್ಯಾಸೆಂಜರ್ ಟ್ರೈನು ಸೇವೆ ಆರಂಭವಾಗಿದೆ.
ಇದನ್ನೂ ಓದಿ: ದೇವನಹಳ್ಳಿ ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದ ಅಶ್ವಿನಿ ವೈಷ್ಣವ್: ಸಚಿವ ವಿ ಸೋಮಣ್ಣ ಸಾಥ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ