ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಮೇಲೆ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ಹಲವು ಆರೋಪ ಮಾಡಿದ್ದಾರೆ. ಆ ನಂತರ ‘ನಮ್ಮ ತಂದೆ ಕುಡುಕ’ ಎಂದು ಚೈತ್ರಾ ಕುಂದಾಪುರ ಅವರು ತಿರುಗೇಟು ನೀಡಿದರು. ಆ ಮಾತಿಗೆ ಈಗ ಬಾಲಕೃಷ್ಣ ನಾಯ್ಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಚೈತ್ರಾ ಕುಂದಾಪುರ ಮೇಲೆ ಅವರ ತಂದೆ (Chaithra Kundapura Father) ಬಾಲಕೃಷ್ಣ ನಾಯ್ಕ್ ಅವರು ಸಾಕಷ್ಟು ಆರೋಪ ಮಾಡಿದ್ದಾರೆ. ಆ ಬಳಿಕ ‘ನಮ್ಮ ತಂದೆ ಕುಡುಕ’ ಎಂದು ಚೈತ್ರಾ (Chaithra Kundapura) ಅವರು ತಿರುಗೇಟು ನೀಡಿದರು. ಆ ಮಾತಿಗೆ ಬಾಲಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಕುಡಿಯುವ ಅಭ್ಯಾಸ ಇದೆ ಎಂಬುದಾದರೆ ಊರಿನ ಜನರು ಹೇಳಲಿ. ವೈದ್ಯರಿಂದ ನನ್ನ ರಕ್ತಪರೀಕ್ಷೆ ಮಾಡಿ ಸಾಬೀತುಪಡಿಸಲಿ’ ಎಂದು ಬಾಲಕೃಷ್ಣ (Balakrishna Naik) ಅವರು ನೇರವಾಗಿ ಸವಾಲು ಹಾಕಿದ್ದಾರೆ. ‘ಕುಡುಕ ಎಂಬ ಮಾತನ್ನು ನಾನು ಒಪ್ಪಲ್ಲ. ನಮ್ಮ ತಂದೆಯ ಕಾಲದಿಂದಲೂ ಯಾರೂ ಕುಡಿದಿಲ್ಲ. ಒಂದು ವೇಳೆ ಕುಡುಕ ಆಗಿದ್ದರೆ ನನಗೆ ಹೆಣ್ಣು ಕೊಡುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos