ಮದುವೆಗೆ 4 ದಿನ ಇರುವಾಗ ಆಹ್ವಾನಿಸಲು ಬಂದ ಚೈತ್ರಾ ₹ 5 ಲಕ್ಷಗಳಿಗೆ ಬೇಡಿಕೆಯಿಟ್ಟಳು: ಬಾಲಕೃಷ್ಣ ನಾಯ್ಕ್, ಚೈತ್ರಾ ತಂದೆ
ಯಾರಿಗೋ ₹ 5 ಕೋಟಿ ವಂಚನೆ ಮಾಡಿ ಚೈತ್ರಾ ತನ್ನ ತಂದೆಯ ಮಾನ ಕಳೆದಳು ಮತ್ತು ತನ್ನ ಮಾನವನ್ನೂ ಮಣ್ಣುಪಾಲು ಮಾಡಿದಳು ಎಂದು ಬಾಲಕೃಷ್ಣ ಹೇಳುತ್ತಾರೆ. ತಮ್ಮ ಕತೆ ಹಾಗಿರಲಿ, ಚೈತ್ರಾ ತನ್ನ ಕೃತ್ಯಗಳಿಂದ ಮದುವೆಯಾಗಿ ಗಂಡನೊಂದಿಗೆ ಸುಖವಾಗಿ ಮತ್ತು ನೆಮ್ಮದಿಯೊಂದಿಗೆ ಸಂಸಾರ ಮಾಡಿಕೊಂಡಿದ್ದ ತನ್ನಕ್ಕನ ಬದುಕನ್ನೂ ಸರ್ವನಾಶ ಮಾಡಿದಳು ಎಂದು ಬಾಲಕೃಷ್ಣ ಹೇಳುತ್ತಾರೆ.
ಉಡುಪಿ, ಮೇ 15: ಮೊನ್ನೆಯಷ್ಟೇ ಮದುವೆಯಾದ ಚೈತ್ರಾ ಕುಂದಾಪುರ ಹೆಸರಿಗೆ ಈಗ ಸೆಲಿಬ್ರಿಟಿ ಸ್ಟೇಟಸ್ ಮೆತ್ತಿಕೊಂಡಿದೆ. ಆದರೆ ಅವರ ತಂದೆ ಬಾಲಕೃಷ್ಣ ನಾಯ್ಕ್ (Balakrishna Naik) ದೃಷ್ಟಿಯಲ್ಲಿ ಅವರು ಕೆಟ್ಟ ಮಗಳು ಮತ್ತು ಮನೆತನದ ಮಾನವನ್ನು ಹರಾಜಿಗೆ ಹಾಕಿದವಳು. ನಮ್ಮ ಉಡುಪಿ ವರದಿಗಾರನೊಂದಿಗೆ ಮಾತಾಡಿರುವ ಬಾಲಕೃಷ್ಣ, ಮದುವೆಗಿನ್ನೂ ಕೇವಲ 4 ದಿನ ಇರುವಾಗ ಚೈತ್ರಾ ನನ್ನನ್ನು ಮದುವೆಗೆ ಕರೆಯಲು ಬಂದಳು, ₹ 5 ಲಕ್ಷ ಕೊಡಬೇಕೆಂಬ ಷರತ್ತುನೊಂದಿಗೆ! ಆದರೆ ನಾನು, ನೀನೂ ಬೇಡ ನಿನ್ನ ಮದವೆಯೂ ಬೇಡ ಅಂತ ವಾಪಸ್ಸು ಕಳಿಸಿದೆ ಎಂದು ಹೇಳುತ್ತಾರೆ. ಚೈತ್ರಾ ತನ್ನನ್ನು ಗೌರವದಿಂದ ಕರೆದಿದ್ದರೆ ಹೋಗಿ ಆಶೀರ್ವದಿಸುತ್ತಿದ್ದೆ ಎಂದು ಬಾಲಕೃಷ್ಣ ಹೇಳುತ್ತಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಮದುವೆಯಲ್ಲಿ ಉಗ್ರಂ ಮಂಜು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ